Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 3:24 - ಕನ್ನಡ ಸತ್ಯವೇದವು C.L. Bible (BSI)

24 ಆದರೆ ಇಸ್ರಯೇಲರು ಎದ್ದು ಮೋವಾಬ್ಯರನ್ನು ಸೋಲಿಸಿ ಓಡಿಸಿಬಿಟ್ಟರು. ಇದಲ್ಲದೆ, ಅವರು ಮೋವಾಬ್ಯರನ್ನು ಸಂಹರಿಸುತ್ತಾ, ಅವರ ದೇಶದೊಳಗೆ ನುಗ್ಗಿದರು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಆದರೆ ಇಸ್ರಾಯೇಲರು ಎದ್ದು ಮೋವಾಬ್ಯರನ್ನು ಸೋಲಿಸಿ ಓಡಿಸಿಬಿಟ್ಟರು. ಇದಲ್ಲದೆ ಅವರು ಮೋವಾಬ್ಯರನ್ನು ಸಂಹರಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಇಸ್ರಾಯೇಲ್ಯರ ಪಾಳೆಯಕ್ಕೆ ಹೋದರು. ಆದರೆ ಇಸ್ರಾಯೇಲ್ಯರು ಎದ್ದು ಮೋವಾಬ್ಯರನ್ನು ಸೋಲಿಸಿ ಓಡಿಸಿಬಿಟ್ಟರು. ಇದಲ್ಲದೆ ಅವರು ಮೋವಾಬ್ಯರನ್ನು ಸಂಹರಿಸುತ್ತಾ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಮೋವಾಬಿನ ಜನರು ಇಸ್ರೇಲರ ಪಾಳೆಯಕ್ಕೆ ಬಂದರು. ಆದರೆ ಇಸ್ರೇಲರು ಹೊರಗೆ ಬಂದು ಮೋವಾಬಿನ ಸೈನ್ಯದ ಮೇಲೆ ಆಕ್ರಮಣ ಮಾಡಿದರು. ಮೋವಾಬಿನ ಜನರು ಇಸ್ರೇಲಿಯರಿಂದ ತಪ್ಪಿಸಿಕೊಂಡು ಓಡಿಹೋದರು. ಇಸ್ರೇಲರು ಮುನ್ನುಗ್ಗಿ ಮೋವಾಬಿನವರನ್ನು ಕೊಂದುಹಾಕಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಅವರು ಇಸ್ರಾಯೇಲಿನ ದಂಡಿಗೆ ಬಂದಾಗ, ಇಸ್ರಾಯೇಲರು ಎದ್ದು ಮೋವಾಬ್ಯರು ತಮ್ಮ ಮುಂದೆ ಓಡಿಹೋಗುವ ಹಾಗೆ ಅವರನ್ನು ಸೋಲಿಸಿ, ಮೋವಾಬ್ಯರನ್ನು ಅವರ ದೇಶದವರೆಗೂ ಹೊಡೆಯುತ್ತಾ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 3:24
6 ತಿಳಿವುಗಳ ಹೋಲಿಕೆ  

ಆದ್ದರಿಂದ, “ಅದು ರಕ್ತ; ಅರಸರು ತಮ್ಮ ತಮ್ಮೊಳಗೆ ಜಗಳವಾಡಿ ಹತರಾಗಿರಬೇಕು; ಮೋವಾಬ್ಯರೇ, ಏಳಿ, ಸುಲಿಗೆಗೆ ಹೋಗೋಣ,” ಎಂದು ಕೂಗಿಕೊಂಡು ಇಸ್ರಯೇಲರ ಪಾಳೆಯಕ್ಕೆ ಹೋದರು.


ಎಲ್ಲಾ ಪಟ್ಟಣಗಳನ್ನು ಕೆಡವಿ, ಹೊಲಗಳನ್ನು ಕಲ್ಲುಗಳಿಂದ ತುಂಬಿಸಿ, ಬಾವಿಗಳನ್ನು ಮುಚ್ಚಿ, ಹಣ್ಣಿನ ಮರಗಳನ್ನು ಕಡಿದುಹಾಕಿದರು. ಕೀರ್ಹರೆಷೆತ್ ಎಂಬ ಒಂದೇ ಒಂದು ಮಾರ್ಗ ಉಳಿಯಿತು. ಕವಣೆ ಹೊಡೆಯುವವರು ಅದನ್ನೂ ಸುತ್ತಿಕೊಂಡು ಕಲ್ಲೆಸೆದರು.


ಇಸ್ರಯೇಲರ ಅರಸನು ಹೊರಟುಬಂದು ಸಿರಿಯಾದವರ ರಥಾಶ್ವಬಲಗಳನ್ನು ಸೋಲಿಸಿ, ಮಹಾಸಮೂಹವನ್ನು ಸಂಹರಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು