12 ಸಾಮಾನ್ಯ ಜನರಲ್ಲಿ ತೀರ ಬಡವರಾದ ಜನರನ್ನು ಮಾತ್ರ ನೆಬೂಜರದಾನನು ಅಲ್ಲಿಯೇ ನೆಲೆಸಲು ಬಿಟ್ಟನು. ಆ ಬಡಜನರು ಅಲ್ಲಿಯೇ ನೆಲೆಸಿ, ಬೇಸಾಯಮಾಡಿ ದ್ರಾಕ್ಷಿಯನ್ನು ಬೆಳೆಯಲು ಅವರನ್ನು ಬಿಟ್ಟುಬಿಟ್ಟನು.
ಬಾಬಿಲೋನಿಯದ ಅರಸನು ಅಹೀಕಾಮನ ಮಗನಾದ ಗೆದಲ್ಯನನ್ನು ನಾಡಿನ ರಾಜ್ಯಪಾಲನನ್ನಾಗಿ ನೇಮಿಸಿದ್ದಾನೆಂಬ ಸುದ್ದಿ ಹಾಗು ಬಾಬಿಲೋನಿಗೆ ಸೆರೆಹೋಗದ ನಾಡಿಗರಲ್ಲಿ ಬಡವರಾದ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಅವನ ಅಧಿಕಾರಕ್ಕೆ ಒಪ್ಪಿಸಿದ್ದಾನೆಂಬ ಸುದ್ದಿ ಹರಡಿತು. ಕಾಡುಮೇಡುಗಳಲ್ಲಿದ್ದ ಎಲ್ಲ ಯಹೂದ್ಯ ಸೈನಿಕರೂ ಸೇನಾಪತಿಗಳೂ ಇದನ್ನು ಕೇಳಿ ಮಿಚ್ಪದಲ್ಲಿ ವಾಸವಾಗಿದ್ದ ಗೆದಲ್ಯನ ಬಳಿಗೆ ಹೋದರು.
ಜೆರುಸಲೇಮಿನಲ್ಲಿದ್ದ ಎಲ್ಲಾ ಪದಾಧಿಕಾರಿಗಳನ್ನೂ ಯೋಧರನ್ನೂ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಒಟ್ಟಾರೆ ಹತ್ತು ಸಾವಿರ ಜನರನ್ನು ಸೆರೆಗೊಯ್ದನು. ನಾಡಿನ ಜನರಲ್ಲಿ ಕೇವಲ ಬಡವರನ್ನು ಹೊರತಾಗಿ ಬೇರೆ ಯಾರನ್ನೂ ಬಿಡಲಿಲ್ಲ.
“ನರಪುತ್ರನೇ, ಇಸ್ರಯೇಲ್ ನಾಡಿನ ಹಾಳುಪ್ರದೇಶಗಳಲ್ಲಿ ವಾಸಿಸುವರು, ‘ಅಬ್ರಹಾಮನು ಒಂಟಿಗನಾಗಿದ್ದರೂ ಈ ನಾಡು ಅವನಿಗೆ ಸೊತ್ತಾಗಿ ಸಿಕ್ಕಿತು; ಅದು ಬಹುಜನರಾದ ನಮಗೆ ಸೊತ್ತಾಗಿ ಸಿಕ್ಕಿದ್ದು ಏನು ದೊಡ್ಡದು! ಎಂದುಕೊಳ್ಳುತ್ತಿದ್ದಾರೆ.
ಕೆಲಸ ಮುಗಿದಾಗ ಅವರು ಉಳಿದ ಹಣವನ್ನು ಅರಸನಿಗೂ ಯೆಹೋಯಾದನಿಗೂ ಒಪ್ಪಿಸಿದರು. ಇವರು ಅದರಿಂದ ಸರ್ವೇಶ್ವರನ ಆಲಯದಲ್ಲಿ ನಡೆವ ಆರಾಧನೆಗೆ ಹಾಗು ಬಲಿಯರ್ಪಣೆಗೆ ಉಪಯೋಗವಾಗುವ ಧೂಪಾರತಿ, ಬೆಳ್ಳಿಬಂಗಾರದ ಪಾತ್ರೆ, ಮೊದಲಾದ ಸಾಮಾನುಗಳನ್ನು ಮಾಡಿಸಿದರು. ಯೆಹೋಯಾದನ ಜೀವಮಾನದಲ್ಲೆಲ್ಲಾ ಸರ್ವೇಶ್ವರನ ಆಲಯದಲ್ಲಿ ಪ್ರತಿನಿತ್ಯವೂ ದಹನಬಲಿ ಸಮರ್ಪಣೆ ಆಗುತ್ತಿತ್ತು.
ಆಗ ನನ್ನ ಸಹೋದರರಲ್ಲಿ ಒಬ್ಬನಾದ ಹನಾನೀಯನು ಹಾಗೂ ಬೇರೆ ಕೆಲವು ಜನರು ಜುದೇಯದಿಂದ ನನ್ನ ಬಳಿಗೆ ಬಂದರು. ಸೆರೆಹೋದವರಿಂದ ತಪ್ಪಿಸಿಕೊಂಡ ಯೆಹೂದ್ಯರ ಮತ್ತು ಜೆರುಸಲೇಮಿನ ಸಮಾಚಾರವನ್ನು ನಾನು ಅವರಲ್ಲಿ ವಿಚಾರಿಸಿದೆ.