Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 23:5 - ಕನ್ನಡ ಸತ್ಯವೇದವು C.L. Bible (BSI)

5 ಅದಲ್ಲದೆ, ಜುದೇಯ ಪ್ರಾಂತ್ಯದ ಪಟ್ಟಣಗಳಲ್ಲೂ ಜೆರುಸಲೇಮಿನ ಸುತ್ತಣ ಪ್ರದೇಶದಲ್ಲೂ ಇದ್ದ ಪೂಜಾಸ್ಥಳಗಳ ವಿಗ್ರಹಗಳಿಗೂ ಬಾಳ್ ದೇವತೆಗೂ ಸೂರ್ಯ ಚಂದ್ರ ನಕ್ಷತ್ರಗಳೆನಿಸಿಕೊಳ್ಳುವ ಆಕಾಶಸೈನ್ಯಕ್ಕೂ ಧೂಪಾರತಿಯೆತ್ತುವುದಕ್ಕಾಗಿ ಜುದೇಯದ ರಾಜರಿಂದ ನೇಮಿತರಾಗಿದ್ದ ಎಲ್ಲಾ ಪೂಜಾರಿಗಳನ್ನು ತೆಗೆದುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಇದಲ್ಲದೆ, ಯೆಹೂದ ಪ್ರಾಂತ್ಯದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಸುತ್ತಣ ಪ್ರದೇಶಗಳಲ್ಲಿಯೂ ಇದ್ದ ಪೂಜಾಸ್ಥಳಗಳ ವಿಗ್ರಹಗಳಿಗೂ, ಬಾಳನಿಗೂ, ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳು ಎನಿಸಿಕೊಳ್ಳುವ ಆಕಾಶಸೈನ್ಯಕ್ಕೂ, ಧೂಪಹಾಕುವುದಕ್ಕಾಗಿ ಯೆಹೂದ ರಾಜರಿಂದ ನೇಮಿಸಲ್ಪಟ್ಟ ಎಲ್ಲಾ ಪೂಜಾರಿಗಳನ್ನು ತೆಗೆದುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಇದಲ್ಲದೆ ಯೆಹೂದ ಪ್ರಾಂತದ ಪಟ್ಟಣಗಳಲ್ಲಿಯೂ ಯೆರೂಸಲೇವಿುನ ಸುತ್ತಣ ಪ್ರದೇಶದಲ್ಲಿಯೂ ಇದ್ದ ಪೂಜಾಸ್ಥಳಗಳ ವಿಗ್ರಹಗಳಿಗೂ ಬಾಳನಿಗೂ ಸೂರ್ಯಚಂದ್ರನಕ್ಷತ್ರಗಳೆನಿಸಿಕೊಳ್ಳುವ ಆಕಾಶಸೈನ್ಯಕ್ಕೂ ಧೂಪಸುಡುವದಕ್ಕಾಗಿ ಯೆಹೂದರಾಜರಿಂದ ನೇವಿುಸಲ್ಪಟ್ಟ ಎಲ್ಲಾ ಪೂಜಾರಿಗಳನ್ನು ತೆಗೆದುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಯೆಹೂದದ ರಾಜರುಗಳು ಯಾಜಕರಾಗಿ ಸೇವೆಮಾಡಲು ಕೆಲವು ಸಾಮಾನ್ಯ ಜನರನ್ನು ಆರಿಸಿಕೊಂಡರು. ಈ ಜನರು ಆರೋನನ ಕುಲದಿಂದ ಬಂದವರಲ್ಲ! ಈ ಸುಳ್ಳುಯಾಜಕರು ಯೆಹೂದದ ನಗರಗಳಲ್ಲಿನ ಮತ್ತು ಜೆರುಸಲೇಮಿನ ಊರುಗಳಲ್ಲಿನ ಉನ್ನತಸ್ಥಳಗಳಲ್ಲಿ ಧೂಪವನ್ನು ಸುಡುತ್ತಿದ್ದರು. ಅವರು ಬಾಳನನ್ನು, ಸೂರ್ಯನನ್ನು, ಚಂದ್ರನನ್ನು, ಆಕಾಶ ಸೈನ್ಯವಾದ ನಕ್ಷತ್ರಗಳನ್ನು ಗೌರವಿಸಲು ಧೂಪವನ್ನು ಸುಡುತ್ತಿದ್ದರು. ಆದರೆ ಯೋಷೀಯನು ಆ ಸುಳ್ಳು ಯಾಜಕರನ್ನು ನಿಲ್ಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಯೆಹೂದದ ಪಟ್ಟಣಗಳಲ್ಲಿರುವ ಉನ್ನತ ಪೂಜಾಸ್ಥಳಗಳಲ್ಲಿಯೂ, ಯೆರೂಸಲೇಮಿನ ಸುತ್ತಲಿರುವ ಉನ್ನತ ಪೂಜಾಸ್ಥಳಗಳಲ್ಲಿಯೂ ಧೂಪವನ್ನು ಸುಡಲು ಯೆಹೂದದ ಅರಸರು ನೇಮಿಸಿದ್ದ ಪೂಜಾರಿಗಳನ್ನೂ ಬಾಳನಿಗೂ, ಸೂರ್ಯನಿಗೂ, ಚಂದ್ರನಿಗೂ, ಗ್ರಹಗಳಿಗೂ, ಆಕಾಶದ ಸಮಸ್ತ ಸೈನ್ಯಕ್ಕೂ, ಧೂಪಸುಡುವವರನ್ನೂ ತೆಗೆದುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 23:5
10 ತಿಳಿವುಗಳ ಹೋಲಿಕೆ  

ಬೇತಾವೆನಿನ ಬಸವನಿಗೆ ಸಮಾರ್ಯದ ನಿವಾಸಿಗಳು ದಿಗಿಲುಗೊಳ್ಳುವರು; ಅದನ್ನು ಕಾಣದುದಕ್ಕಾಗಿ ಭಕ್ತಜನರು ಎದೆಬಡಿದುಕೊಳ್ಳುವರು. ಅದರ ಮಹಿಮೆ ನಂದಿಹೋಯಿತು ಎಂದು ಪೂಜಾರಿಗಳು ಗೋಳಾಡುವರು.


ಸರ್ವ ನಕ್ಷತ್ರಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು.


ತನ್ನ ತಂದೆ ಹಿಜ್ಕೀಯನು ತೆಗೆದುಹಾಕಿದ್ದ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿದನು. ಬಾಳ್‍ದೇವತೆಗಳಿಗಾಗಿ ಬಲಿಪೀಠಗಳನ್ನು ಕಟ್ಟಿಸಿದನು; ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿ, ನಕ್ಷತ್ರಮಂಡಲಕ್ಕೆ ಕೈಮುಗಿದು ಆರಾಧಿಸಿದನು.


ಇದಲ್ಲದೆ, ಅವನು ಬಾಳ್‍ದೇವತೆಗಳ ಬಲಿಪೀಠಗಳನ್ನು ತನ್ನೆದುರಿನಲ್ಲೇ ಹಾಳುಮಾಡಿಸಿ, ಅವುಗಳ ಮೇಲಿದ್ದ ಸೂರ್ಯಸ್ತಂಭಗಳನ್ನು ಕೆಡವಿಸಿ, ಅಶೇರಸ್ತಂಭ, ಕೆತ್ತಿದ ಮತ್ತು ಎರಕದ ವಿಗ್ರಹ, ಇವುಗಳನ್ನು ಒಡಿಸಿ, ಪುಡಿಪುಡಿಮಾಡಿಸಿ, ಅವುಗಳಿಗೆ ಬಲಿಯರ್ಪಿಸಿದವರ ಸಮಾಧಿಗಳ ಮೇಲೆ ಆ ಧೂಳನ್ನು ಚೆಲ್ಲಿಸಿದನು.


ಆಗ ಅವರು ನನಗೆ, “ನರಪುತ್ರನೇ, ಇವರು ಮಾಡುವುದನ್ನು ನೋಡಿದೆಯಾ? ಇಸ್ರಯೇಲ್ ವಂಶದವರು ಇಲ್ಲಿ ನಡೆಸುವ ಅಧಿಕ ದುರಾಚಾರಗಳನ್ನೆಲ್ಲ ಕಂಡೆಯಾ? ಇದರಿಂದ ನಾನು ನನ್ನ ಪವಿತ್ರಾಲಯವನ್ನು ಬಿಟ್ಟು ದೂರಹೋಗಬೇಕಾಯಿತು. ಬಾ, ಇವುಗಳಿಗಿಂತ ಇನ್ನು ಹೆಚ್ಚಾದ ದುರಾಚಾರಗಳನ್ನು ನೋಡುವೆ,” ಎಂದು ಹೇಳಿದರು.


“ಜುದೇಯ ನಾಡನ್ನೂ ಜೆರುಸಲೇಮಿನ ನಿವಾಸಿಗಳೆಲ್ಲರನ್ನೂ ಕೈಯೆತ್ತಿ ಸದೆಬಡಿಯುವೆನು; ಬಾಳನ ಪೂಜೆಪುರಸ್ಕಾರಗಳ ಗುರುತೂ ಅಲ್ಲಿ ಇಲ್ಲದಂತೆ ಮಾಡುವೆನು. ಅವನ ಪೂಜಾರಿಗಳನ್ನು ನಿರ್ನಾಮಗೊಳಿಸುವೆನು;


ಆಯಾಯ ಕಾಲಕ್ಕೆ ನಕ್ಷತ್ರರಾಶಿಗಳನು ಬರಮಾಡುವೆಯಾ? ಸಪ್ತರ್ಷಿತಾರೆಗಳನು ಪರಿವಾರದೊಡನೆ ನಡೆಸುವೆಯಾ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು