Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 23:16 - ಕನ್ನಡ ಸತ್ಯವೇದವು C.L. Bible (BSI)

16 ಅವನು ಹಿಂದಿರುಗಿ ನೋಡಿದಾಗ ಅಲ್ಲಿನ ಗುಡ್ಡದಲ್ಲಿ ಸಮಾಧಿಗಳನ್ನು ಕಂಡು ಅವುಗಳಲ್ಲಿದ್ದ ಎಲುಬುಗಳನ್ನು ತರಿಸಿ, ಆ ಬಲಿಪೀಠದ ಮೇಲೆ ಸುಡಿಸಿ ಅದನ್ನು ಹೊಲೆಮಾಡಿದನು. ಹೀಗೆ ದೈವಪುರುಷನೊಬ್ಬನು ಪ್ರಕಟಿಸಿದ ಸರ್ವೇಶ್ವರನ ವಾಕ್ಯ ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಯೋಷೀಯನು ಹಿಂದಿರುಗಿ ನೋಡಿದಾಗ ಅಲ್ಲಿನ ಗುಡ್ಡಗಳಲ್ಲಿ ಸಮಾಧಿಗಳನ್ನು ಕಂಡು, ಅವುಗಳಲ್ಲಿದ್ದ ಎಲುಬುಗಳನ್ನು ತರಿಸಿ ಆ ಯಜ್ಞವೇದಿಯ ಮೇಲೆ ಸುಟ್ಟು ಅವುಗಳನ್ನು ನಾಶಮಾಡಿದನು. ಹೀಗೆ ದೇವರ ಮನುಷ್ಯನೊಬ್ಬನು ಪ್ರಕಟಿಸಿದ ಯೆಹೋವನ ವಾಕ್ಯವು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಅವನು ಹಿಂದಿರುಗಿ ನೋಡಿದಾಗ ಅಲ್ಲಿನ ಗುಡ್ಡದಲ್ಲಿ ಸಮಾಧಿಗಳನ್ನು ಕಂಡು ಅವುಗಳಲ್ಲಿದ್ದ ಎಲುಬುಗಳನ್ನು ತರಿಸಿ ಆ ಯಜ್ಞವೇದಿಯ ಮೇಲೆ ಸುಡಿಸಿ ಅದನ್ನು ಹೊಲೆಮಾಡಿದನು; ಹೀಗೆ ದೇವರ ಮನುಷ್ಯನೊಬ್ಬನು ಪ್ರಕಟಿಸಿದ ಯೆಹೋವನ ವಾಕ್ಯವು ನೆರವೇರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಯೋಷೀಯನು ಸುತ್ತಲೂ ನೋಡಿದಾಗ ಬೆಟ್ಟದ ಮೇಲಿದ್ದ ಸ್ಮಶಾನಗಳನ್ನು ಕಂಡನು. ಅವನು ಜನರನ್ನು ಕಳುಹಿಸಿ ಆ ಸ್ಮಶಾನಗಳಿಂದ ಎಲುಬುಗಳನ್ನು ತರಿಸಿ ಆ ಎಲುಬುಗಳನ್ನು ಯಜ್ಞವೇದಿಕೆಯ ಮೇಲೆ ಸುಟ್ಟನು. ಈ ರೀತಿಯಲ್ಲಿ, ಯೋಷೀಯನು ಯಜ್ಞವೇದಿಕೆಯನ್ನು ಹೊಲಸು ಮಾಡಿದನು. ಇದು ಪ್ರವಾದಿಯು ಘೋಷಿಸಿದ್ದ ಯೆಹೋವನ ಸಂದೇಶದಂತೆ ಸಂಭವಿಸಿತು. ಯಾರೊಬ್ಬಾಮನು ಯಜ್ಞವೇದಿಕೆಯ ಪಕ್ಕದಲ್ಲಿ ನಿಂತಿದ್ದಾಗ ಪ್ರವಾದಿಯು ಈ ಸಂಗತಿಗಳನ್ನು ಪ್ರಕಟಿಸಿದ್ದನು. ನಂತರ ಯೋಷೀಯನು ಸುತ್ತಲೂ ನೋಡಿದಾಗ, ದೇವಮನುಷ್ಯನ ಸಮಾಧಿಯನ್ನು ಕಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಯೋಷೀಯನು ತಿರುಗಿಕೊಂಡು ಅಲ್ಲಿ ಬೆಟ್ಟದಲ್ಲಿದ್ದ ಸಮಾಧಿಗಳನ್ನು ಕಂಡು, ಸಮಾಧಿಗಳಿಂದ ಎಲುಬುಗಳನ್ನು ತೆಗೆದುಕೊಂಡು, ದೇವರ ಮನುಷ್ಯನು ಹೇಳಿದ ಈ ಮಾತುಗಳನ್ನು ಯೆಹೋವ ದೇವರ ವಾಕ್ಯದ ಪ್ರಕಾರ, ಬಲಿಪೀಠದ ಮೇಲೆ ಅವುಗಳನ್ನು ಸುಟ್ಟು ಅದನ್ನು ಅಶುದ್ಧ ಮಾಡಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 23:16
6 ತಿಳಿವುಗಳ ಹೋಲಿಕೆ  

ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎಂದು ಕರೆಯಲಾಗಿದೆ. ಹೀಗೆ ಪವಿತ್ರಗ್ರಂಥದಲ್ಲೇ ಲಿಖಿತವಾಗಿರುವುದು ನಿರರ್ಥಕವೇನೂ ಅಲ್ಲ.


ಭೂಮ್ಯಾಕಾಶಗಳು ಗತಿಸಿಹೋಗುವುವು; ಆದರೆ ನನ್ನ ಮಾತುಗಳು ಶಾಶ್ವತವಾಗಿ ನಿಲ್ಲುವುವು.


ಅವನು ಸರ್ವೇಶ್ವರನ ಅಪ್ಪಣೆಯಿಂದ ಬೇತೇಲಿನ ಬಲಿಪೀಠಕ್ಕೆ ವಿರುದ್ಧ ಹಾಗು ಸಮಾರಿಯದ ಪಟ್ಟಣಗಳಲ್ಲಿರುವ ಎಲ್ಲಾ ಪೂಜಾಸ್ಥಳಗಳಿಗೆ ವಿರುದ್ಧ ಹೇಳಿದ ಮಾತುಗಳು ನಿಸ್ಸಂದೇಹವಾಗಿ ನೆರವೇರುವುವು,” ಎಂದನು.


ಕಲ್ಲುಗಂಬಗಳನ್ನು ಒಡೆದುಹಾಕಿ, ಅಶೇರ ವಿಗ್ರಹಸ್ತಂಭಗಳನ್ನು ಕಡಿದುಬಿಟ್ಟು, ಅವುಗಳಿದ್ದ ಸ್ಥಳವನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು.


ನಾನು ಇಸ್ರಯೇಲರ ಹೆಣಗಳನ್ನು ಅವರ ಬೊಂಬೆಗಳ ಮುಂದೆ ಬಿಸಾಡಿ ನಿಮ್ಮ ಯಜ್ಞವೇದಿಗಳ ಸುತ್ತಲು ನಿಮ್ಮ ಎಲುಬುಗಳನ್ನು ಎರಚಿಬಿಡುವೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು