4 “ನೀನು ಪ್ರಧಾನ ಯಾಜಕ ಹಿಲ್ಕೀಯನ ಬಳಿಗೆ ಹೋಗಿ ಅವನಿಗೆ, ‘ದ್ವಾರಪಾಲಕರು ಸರ್ವೇಶ್ವರನ ಆಲಯಕ್ಕೆ ಬರುವ ಜನರಿಂದ ಸಂಗ್ರಹಿಸಿದ ಹಣವನ್ನು ಲೆಕ್ಕಮಾಡಿ ಆಲಯದ ಕೆಲಸ ಮಾಡಿಸುವ ಮೇಸ್ತ್ರಿಗಳಿಗೆ ಅದನ್ನು ಒಪ್ಪಿಸು,’ ಎಂದು ಹೇಳು.
ಯೆಹೋವಾಷನು ಯಾಜಕರಿಗೆ, “ಸರ್ವೇಶ್ವರನ ಆಲಯಕ್ಕೆ ಸೇರುವ ಎಲ್ಲಾ ಪರಿಶುದ್ಧ ದ್ರವ್ಯವನ್ನು, ಅಂದರೆ ಜನಗಣತಿಯಲ್ಲಿ ಎಣಿಕೆಯಾದ ಪ್ರತಿಯೊಬ್ಬನು ತಂದುಕೊಡುವ ಹಣ, ದೇವರಿಗೆ ಪ್ರತಿಷ್ಟಿತನಾದ ವ್ಯಕ್ತಿ ತನ್ನ ಪ್ರಾಣವನನ್ನು ಬಿಡಿಸಿಕೊಳ್ಳುವುದಕ್ಕಾಗಿ ತೆರುವ ಹಣ, ಜನರು ಸರ್ವೇಶ್ವರನ ಆಲಯಕ್ಕೆ ಸ್ವೇಚ್ಛೆಯಿಂದ ತಂದು ಒಪ್ಪಿಸುವ ಹಣ, ಇವುಗಳನ್ನು ತೆಗೆದುಕೊಂಡು ದೇವಾಲಯವು ಎಲ್ಲೆಲ್ಲಿ ಶಿಥಿಲವಾಗಿ ಇರುತ್ತದೆ ಎಂದು ನೋಡಿ ಅದನ್ನು ಸರಿಮಾಡುವುದಕ್ಕಾಗಿ ವಿನಿಯೋಗಿಸಿರಿ.
ಇದಲ್ಲದೆ, ತನ್ನ ತಂದೆ ದಾವೀದನ ವಿಧಿಗೆ ಅನುಸಾರವಾಗಿ ಯಾಜಕ ವರ್ಗಗಳವರನ್ನೂ ಲೇವಿಯರನ್ನೂ ಅವರವರ ಸೇವಾವೃತ್ತಿಗೆ ನೇಮಿಸಿದನು. ಲೇವಿಯರು ಆಯಾ ದಿನದ ನೇಮದ ಪ್ರಕಾರ ದೇವಭಜನೆಮಾಡಿ ಯಾಜಕರ ಕೈಕೆಳಗೆ ಸೇವೆಮಾಡಬೇಕಾಗಿತ್ತು. ದ್ವಾರಪಾಲಕರು ತಮ್ಮ ತಮ್ಮ ವರ್ಗಗಳ ಸರದಿಯ ಮೇಲೆ ಆಯಾ ಬಾಗಿಲುಗಳನ್ನು ಕಾಯಬೇಕಾಗಿತ್ತು. ಇದು ದೈವಪುರುಷ ದಾವೀದರಾಜನ ಅಪ್ಪಣೆ ಆಗಿತ್ತು.