Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 22:19 - ಕನ್ನಡ ಸತ್ಯವೇದವು C.L. Bible (BSI)

19 ‘ನಾನು ಈ ನಾಡನ್ನೂ ನಿವಾಸಿಗಳನ್ನೂ ಶಾಪವಿಸ್ಮಯಗಳಿಗೆ ಗುರಿಮಾಡುವೆನೆಂಬುದನ್ನು ನೀನು ಕೇಳಿದಾಗ, ದುಃಖಪಟ್ಟು ನನ್ನ ಮುಂದೆ ತಗ್ಗಿಸಿಕೊಂಡದ್ದರಿಂದಲೂ, ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ‘ನಾನು ಈ ದೇಶವನ್ನೂ, ನಿವಾಸಿಗಳನ್ನೂ, ಶಾಪವಿಸ್ಮಯಗಳಿಗೆ ಗುರಿಮಾಡುವೆನೆಂಬುವುದನ್ನು ನೀನು ಕೇಳಿದಾಗ, ದುಃಖಪಟ್ಟು ಯೆಹೋವನಾದ ನನ್ನ ಮುಂದೆ ತಗ್ಗಿಸಿಕೊಂಡಿದ್ದರಿಂದಲೂ, ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನಾನು ಈ ದೇಶವನ್ನೂ ನಿವಾಸಿಗಳನ್ನೂ ಶಾಪ ವಿಸ್ಮಯಗಳಿಗೆ ಗುರಿಮಾಡುವೆನೆಂಬದನ್ನು ನೀನು ಕೇಳಿದಾಗ ದುಃಖಪಟ್ಟು ನನ್ನ ಮುಂದೆ ತಗ್ಗಿಸಿಕೊಂಡದ್ದರಿಂದಲೂ ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಈ ಸ್ಥಳವೂ ಅದರ ನಿವಾಸಿಗಳೂ ನಾಶಕ್ಕೂ ಶಾಪಕ್ಕೂ ಗುರಿಯಾಗುವರೆಂದು ನಾನು ಹೇಳಿದ್ದನ್ನು ನೀನು ಕೇಳಿದಾಗ, ನಿನ್ನ ಹೃದಯವು ಮೃದುವಾಗಿ ನೀನು ನಿನ್ನನ್ನು ಯೆಹೋವ ದೇವರ ಮುಂದೆ ತಗ್ಗಿಸಿಕೊಂಡೆ. ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಸಮ್ಮುಖದಲ್ಲಿ ಕಣ್ಣೀರು ಸುರಿಸಿದ್ದರಿಂದ ನಾನು ನಿನ್ನ ಮೊರೆಯನ್ನು ಕೇಳಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 22:19
44 ತಿಳಿವುಗಳ ಹೋಲಿಕೆ  

ಮುರಿದ ಮನವೇ ದೇವನೊಲಿವ ಯಜ್ಞವು I ನೊಂದು ಬೆಂದ ಮನವನಾತ ಒಲ್ಲೆಯೆನನು II


“ಅಹಾಬನು ನನ್ನ ಮುಂದೆ ತನ್ನನ್ನೇ ತಗ್ಗಿಸಿಕೊಂಡದ್ದನ್ನು ನೋಡಿದಿಯಲ್ಲವೇ? ಅವನು ಹೀಗೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡಿಸುವುದಿಲ್ಲ. ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಬರಮಾಡುವೆನು,” ಎಂದು ಹೇಳಿದರು.


“ಪರಮ ಪವಿತ್ರನ, ಶಾಶ್ವತ ಲೋಕದ ನಿತ್ಯನಿವಾಸಿಯಾದ ಮಹೋನ್ನತನ ಮಾತಿದು : ಉನ್ನತವಾದ ಪವಿತ್ರಾಲಯದಲ್ಲಿ ವಾಸಿಸುವವನು ನಾನು; ಆದರೂ ಪಶ್ಚಾತ್ತಾಪಪಡುವ ದೀನಮನದೊಂದಿಗೆ ನಾನಿದ್ದೇನೆ. ದೀನನ ಆತ್ಮವನ್ನು ಹಾಗು ಪಶ್ಚಾತ್ತಾಪಪಡುವ ಮನಸ್ಸನ್ನು ಉಜ್ಜೀವಗೊಳಿಸುವವನಾಗಿದ್ದೇನೆ.


ಮೋಶೆ ಮತ್ತು ಆರೋನರು ಫರೋಹನ ಬಳಿಗೆ ಹೋಗಿ ಅವನಿಗೆ, "ಹಿಬ್ರಿಯರ ದೇವರಾಗಿರುವ ಸರ್ವೇಶ್ವರನ ಮಾತುಗಳಿವು: ‘ಎಲ್ಲಿಯವರೆಗೆ ನೀನು ನನಗೆ ತಲೆ ತಗ್ಗಿಸದಿರುವೆ? ನನ್ನನ್ನು ಆರಾಧಿಸ ಹೋಗಲು ನನ್ನ ಜನರಿಗೆ ಅಪ್ಪಣೆ ಕೊಡು.


ಇಲ್ಲ ಮನುಜಾ, ನಿನಗೆ ಯಾವುದು ಒಳಿತೆಂದು ಸರ್ವೇಶ್ವರ ಈಗಾಗಲೇ ಸ್ಪಷ್ಟಪಡಿಸಿದ್ದಾರೆ: ನ್ಯಾಯನೀತಿಯ ನಡವಳಿಕೆ, ಕರುಣೆಯಲ್ಲಿ ಅಚಲ ಆಸಕ್ತಿ, ದೇವರ ಮುಂದೆ ನಮ್ರತೆ, ಇಷ್ಟನ್ನೇ ಆ ಸ್ವಾಮಿ ನಿನ್ನಿಂದ ಅಪೇಕ್ಷಿಸುವುದು.


ಅನಂತರದಲ್ಲೇ ಸೌಲನ ನಿಲುವಂಗಿಯ ಮೂಲೆಯನ್ನು ಕತ್ತರಿಸಿದ್ದಕ್ಕಾಗಿ ಅವನ ಮನಸ್ಸಾಕ್ಷಿ ಅವನನ್ನು ಹಂಗಿಸತೊಡಗಿತು..


ಯೇಸುಸ್ವಾಮಿ ಜೆರುಸಲೇಮ್ ಪಟ್ಟಣಕ್ಕೆ ಇನ್ನೂ ಹತ್ತಿರವಾಗಿ ಬಂದು ಅದನ್ನು ನೋಡಿ,


ನೀವು ನಡೆಸಿದ ದುರಾಚಾರಗಳನ್ನು ಹಾಗು ಅಸಹ್ಯಕಾರ್ಯಗಳನ್ನು ಸರ್ವೇಶ್ವರ ಇನ್ನು ಸಹಿಸಲಾರದೆ ಹೋದುದರಿಂದಲೇ ನಿಮ್ಮ ನಾಡು ಹಾಳುಬಿದ್ದಿದೆ. ನಿರ್ಜನವಾಗಿ ಭಯಭೀತಿಗೆ ಎಡೆ ಆಗಿದೆ. ಅದರ ಸ್ಥಿತಿ ಈಗಲೂ ಬದಲಾಗಿಲ್ಲ.


ಸರ್ವೇಶ್ವರ ಸ್ವಾಮಿಯ ಮಾತಿನಲ್ಲಿ ಭಯಭಕ್ತಿಯುಳ್ಳವರೇ, ಕೇಳಿ ಸ್ವಾಮಿಯ ಈ ಮಾತನ್ನು ! “ನನ್ನ ನಾಮದ ನಿಮಿತ್ತ ನಿಮ್ಮನ್ನು ದ್ವೇಷಿಸಿ ಬಹಿಷ್ಕರಿಸಿದ ನಿಮ್ಮ ಸಹೋದರರು, ‘ಸರ್ವೇಶ್ವರ ತನ್ನ ಮಹಿಮೆಯನ್ನು ಬೆಳಗಿಸಲಿ, ಆಗ ನಿಮಗಾಗುವ ಆನಂದವನ್ನು ನೋಡೋಣ,’ ಎಂದು ಜರೆದಿದ್ದಾರಲ್ಲವೆ? ಅವರೇ ನಾಚಿಕೆಪಡಬೇಕಾಗುವುದು !


ಆಗ ನಾನು ಈ ಆಲಯವನ್ನು ಶಿಲೋವಿನ ಗತಿಗೆ ಇಳಿಸುವೆನು. ಈ ನಗರವು ವಿಶ್ವದ ಜನರಿಗೆಲ್ಲ ಶಾಪಗ್ರಸ್ತ ನಗರವಾಗುವಂತೆ ಮಾಡುವೆನು.”


ಇವುಗಳನ್ನೆಲ್ಲ ನಿರ್ಮಿಸಿದ್ದು ನನ್ನ ಕೈಯೇ. ಹೌದು, ಇವುಗಳೆಲ್ಲ ಆದುವು ನನ್ನಿಂದಲೇ . ವಿನಮ್ರನು, ಪಶ್ಚಾತ್ತಾಪ ಪಡುವವನು, ನನ್ನ ಮಾತಿನಲ್ಲಿ ಭಯಭಕ್ತಿಯುಳ್ಳವನು, ಇಂಥವರೇ ನನಗೆ ಮೆಚ್ಚುಗೆಯಾದವರು.


ಆದರೆ ಆ ಕಷ್ಟದಲ್ಲಿ ಮನಸ್ಸೆ ತನ್ನ ದೇವರಾದ ಸರ್ವೇಶ್ವರನ ಪ್ರಸನ್ನತೆಯನ್ನು ಬೇಡಿಕೊಂಡನು; ತನ್ನ ಪಿತೃಗಳ ದೇವರ ಮುಂದೆ ತನ್ನನ್ನೇ ಬಹಳವಾಗಿ ತಗ್ಗಿಸಿಕೊಂಡು ಅವರನ್ನು ಪ್ರಾರ್ಥಿಸಿದನು.


ಅವನು ದೇವರಿಗೆ ಮಾಡಿದ ಪ್ರಾರ್ಥನೆ, ಅದಕ್ಕೆ ದೊರೆತ ಸದುತ್ತರ ಹಾಗು ಅವನು ದೀನಮನಸ್ಕನಾಗುವುದಕ್ಕೆ ಮುಂಚೆ ಮಾಡಿದ ಅಪರಾಧ, ದ್ರೋಹಗಳು, ಹಾಗು ಅವನು ಅಲ್ಲಲ್ಲಿ ಪೂಜಾಸ್ಥಳಗಳನ್ನು ಏರ್ಪಡಿಸಿ, ಅಶೇರಸ್ತಂಭ ವಿಗ್ರಹ, ಇವುಗಳನ್ನು ನಿಲ್ಲಿಸಿದ್ದು, ಇವುಗಳು ದರ್ಶಿಗಳ ಚರಿತ್ರೆಯಲ್ಲಿ ಲಿಖಿತವಾಗಿವೆ.


“ನೀನು ಹಿಂದಿರುಗಿ ಹೋಗಿ ನನ್ನ ಪ್ರಜೆಗಳ ಒಡೆಯನಾಗಿರುವ ಹಿಜ್ಕೀಯನಿಗೆ, “ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ; ನಿನ್ನ ಕಣ್ಣೀರನ್ನು ನೋಡಿದ್ದೇನೆ; ನೀನು ಗುಣಹೊಂದಿ ಮೂರನೆಯ ದಿನ ನನ್ನ ಆಲಯಕ್ಕೆ ಬರುವೆ.


ನಾನು ಈ ಸಮಾಚಾರವನ್ನು ಕೇಳಿದಾಗ ನೆಲಕಚ್ಚಿ ಕುಳಿತು ಅತ್ತೆ; ಹಲವಾರು ದಿನಗಳವರೆಗೆ ಶೋಕಿಸಿದೆ, ಉಪವಾಸವಿದ್ದೆ, ಪರಲೋಕ ದೇವರ ಮುಂದೆ ಪ್ರಾರ್ಥನೆ ಮಾಡುತ್ತಾ ಇದ್ದೆ.


ಎಜ್ರನು ದೇವಾಲಯದ ಮುಂದೆ ಹೀಗೆ ಅಡ್ಡಬಿದ್ದು ಅಳುತ್ತಾ, ವಿಜ್ಞಾಪನೆಯನ್ನೂ ಪಾಪ ನಿವೇದನೆಯನ್ನೂ ಮಾಡುತ್ತಿರುವಾಗ ಇಸ್ರಯೇಲರ ಗಂಡಸರು, ಹೆಂಗಸರು ಹಾಗು ಮಕ್ಕಳು ಮಹಾಸಮೂಹವಾಗಿ ಅವನ ಬಳಿಗೆ ಬಂದು ಕೂಡಿದರು. ಜನರೆಲ್ಲರು ಅಲ್ಲಿ ಬಹಳವಾಗಿ ದುಃಖಿಸತೊಡಗಿದರು.


ಆಮೋನನ ತಂದೆ ಮನಸ್ಸೆ ಸರ್ವೇಶ್ವರನ ಮುಂದೆ ತನ್ನನ್ನೇ ತಗ್ಗಿಸಿಕೊಂಡಿದ್ದನು. ಆಮೋನನಾದರೋ ತನ್ನನ್ನೇ ತಗ್ಗಿಸಿಕೊಳ್ಳದೆ ಮಹಾಪರಾಧಿಯಾದನು.


ಅರಸನು ಧರ್ಮೋಪದೇಶ ಗ್ರಂಥವಾಕ್ಯಗಳನ್ನು ಕೇಳಿದಾಗ,


ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ: ” ಇಸ್ರಯೇಲಿನ ದೇವರಾದ ಸರ್ವೇಶ್ವರಸ್ವಾಮಿಯ ಈ ಮಾತುಗಳನ್ನು ಕೇಳು: ನೀನು ಅಸ್ಸೀರಿಯದ ರಾಜನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹಗಳು ಸರ್ವೇಶ್ವರಸ್ವಾಮಿಗೆ ಮುಟ್ಟಿವೆ. ಅವರು ಅವನನ್ನು ಕುರಿತು ಹೀಗೆಂದಿದ್ದಾರೆ:


ಆಗ ಎಲ್ಲ ಜನರು ಬೇತೇಲಿಗೆ ಹೋಗಿ ಅಲ್ಲಿ ಸರ್ವೇಶ್ವರನ ಮುಂದೆ ಅಳುತ್ತಾ ಕುಳಿತು, ಸಾಯಂಕಾಲದವರೆಗೆ ಉಪವಾಸಮಾಡಿದರು. ಇದಲ್ಲದೆ ಅವರು ಸರ್ವೇಶ್ವರನಿಗೆ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಸಮರ್ಪಿಸಿದರು.


ಎಲ್ಲ ಜನಾಂಗಗಳವರೂ ನಿಮ್ಮ ಆ ನಾಡು ಯಾವ ವ್ಯವಸಾಯವೂ ಇಲ್ಲದೆ, ಹುಲ್ಲಾದರೂ ಬೆಳೆಯದೆ, ಹಾಳುಬಿದ್ದಿರುವುದನ್ನು ನೋಡುವರು. ಸರ್ವೇಶ್ವರ ಮಹಾಕೋಪದಿಂದ ಕೆಡವಿದ ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳ ಪ್ರದೇಶದಂತೆ ಸುಟ್ಟುಹೋಗಿರುವುದನ್ನೂ ಎಲ್ಲ ಕಡೆಗಳಲ್ಲೂ ಗಂಧಕ ಉಪ್ಪುಗಳಿಂದ ತುಂಬಿರುವುದನ್ನೂ ನೋಡುವರು.


“ನೀನು ಜೆರುಸಲೇಮ್ ಪಟ್ಟಣದಲ್ಲೆಲ್ಲಾ ತಿರುಗಾಡಿ, ಅದರೊಳಗೆ ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗೆ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡು,” ಎಂದು ಅಪ್ಪಣೆಕೊಟ್ಟರು.


ಅರಸನೇ ಆಗಲಿ, ಅವನ ಸೇವಕರಲ್ಲಿ ಯಾರೇ ಆಗಲಿ, ಸುರುಳಿಯ ಮಾತುಗಳನ್ನೆಲ್ಲಾ ಕೇಳಿಯೂ ಭಯಪಡಲಿಲ್ಲ. ದುಃಖಸೂಚನೆಗಾಗಿ ತಮ್ಮ ಬಟ್ಟೆಯನ್ನು ಹರಿದುಕೊಳ್ಳಲಿಲ್ಲ.


“ನೀನು ನಿನ್ನ ದುಃಖವನ್ನು ಅವರಿಗೆ ಹೀಗೆಂದು ವ್ಯಕ್ತಪಡಿಸು - ‘ರಾತ್ರಿಹಗಲು ನನ್ನ ಕಣ್ಣೀರು ಸುರಿಯಲಿ ನಿರಂತರವಾಗಿ ಏಕೆಂದರೆ ನನ್ನ ಜನವೆಂಬ ಯುವತಿ ಗಾಯಗೊಂಡಿದ್ದಾಳೆ ತೀವ್ರವಾಗಿ, ಹೌದು, ಅವಳಿಗೆ ಪೆಟ್ಟುಬಿದ್ದಿದೆ ಗಡುಸಾಗಿ.


ನೀವು ಕಿವಿಗೊಡದಿದ್ದರೆ ನಿಮ್ಮ ಗರ್ವದ ನಿಮಿತ್ತ ನನ್ನ ಮನ ಗೋಳಾಡುವುದು ಗುಟ್ಟಾಗಿ. ನೀವು ಸೆರೆಯಾಗಿ ಹೋಗುವುದರಿಂದ ಅಳುವೆನು ಸರ್ವೇಶ್ವರನ ಮುಂದೆ ಬಹಳವಾಗಿ. ನನ್ನ ಕಣ್ಣುಗಳಿಂದ ಕಂಬನಿ ಹರಿವುದು ಧಾರಾಕಾರವಾಗಿ.


ನನ್ನ ತಲೆ ಒಂದು ಚಿಲುಮೆಯಾಗಿರಬಾರದಿತ್ತೆ? ನನ್ನ ಕಣ್ಣು ಒಂದು ಒರತೆಯಾಗಿರಬಾರದಿತ್ತೆ? ಆಗ ನನ್ನ ಜನರಲ್ಲಿ ಹತರಾದವರಿಗಾಗಿ ಹಗಲಿರುಳು ಅಳುತ್ತಿದ್ದೆ.


ಧರ್ಮಕ್ಕೆ ದೂರವಾದ ಹಟಮಾರಿಗಳೇ, ಕಿವಿಗೊಡಿರಿ ನೀವು ನನ್ನ ಮಾತಿಗೆ.


ನಿನ್ನ ಶಾಸ್ತ್ರವನು ಜನ ಪಾಲಿಸದ ಕಾರಣ I ಹರಿಯುತ್ತಿದೆ ಧಾರೆಯಾಗಿ ನನ್ನ ಕಣ್ಕಣ II


ನಡುಗುತ್ತಿದೆ ದೇಹ ನಿನ್ನ ಭಯದಿಂದ I ಬಾಳಿದೆ ನಿನ್ನ ವಿಧಿಗಳ ಭೀತಿಯಿಂದ II


ಜನರೆಲ್ಲರು ಧರ್ಮೋಪದೇಶದ ವಾಕ್ಯಗಳನ್ನು ಕೇಳುತ್ತಾ ಕಣ್ಣೀರಿಡುತ್ತಿದ್ದರು. ರಾಜ್ಯಪಾಲ ನೆಹೆಮೀಯನು, ಧರ್ಮೋಪದೇಶ ಮಾಡುವ ಯಾಜಕ ಎಜ್ರನು ಹಾಗು ಜನರನ್ನು ಸಂಬೋಧಿಸುತ್ತಿದ್ದ ಲೇವಿಯರು ಜನರಿಗೆ, “ಈ ದಿನ ನಿಮ್ಮ ದೇವರಾದ ಸರ್ವೇಶ್ವರನಿಗೆ ಪರಿಶುದ್ಧ ದಿನ! ಆದುದರಿಂದ ನೀವು ದುಃಖಿಸುತ್ತಾ ಅಳುತ್ತಾ ಇರಬೇಡಿ,” ಎಂದು ಹೇಳಿದರು.


ಇಸ್ರಯೇಲರ ಸರ್ವಸಮುದಾಯದವರು ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರ ವಿಲಾಪಿಸುತ್ತಿದ್ದರು. ಇಸ್ರಯೇಲನಾದ ಒಬ್ಬ ವ್ಯಕ್ತಿ ಮೋಶೆಗೂ ಸರ್ವಸಮೂಹದವರಿಗೂ ಕಾಣುವಂತೆ ಒಬ್ಬ ಮಿದ್ಯಾನ್ ಮಹಿಳೆಯನ್ನು ತನ್ನ ಮನೆಯೊಳಗೆ ಕರೆದುಕೊಂಡು ಹೋದನು.


ಈ ನಾಡಿನ ಮತ್ತು ಇದರ ನಿವಾಸಿಗಳ ಬಗ್ಗೆ ನಾನು ಹೇಳಿದ ಮಾತುಗಳನ್ನು ಕೇಳಿದಾಗ ನೀನು ದುಃಖಪಟ್ಟು ದೇವರಾದ ನನ್ನ ಮುಂದೆ ತಗ್ಗಿಸಿಕೊಂಡೆ; ದೀನಮನಸ್ಸಿನಿಂದ ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದೆ; ಆದ್ದರಿಂದ ನಿನ್ನನ್ನು ಲಕ್ಷಿಸಿದೆನು


ಆಗ ಹಿಜ್ಕೀಯನ ಗರ್ವ ಇಳಿಯಿತು; ಜೆರುಸಲೇಮಿನವರೊಡನೆ ಅವನು ದೀನಮನಸ್ಕನಾದನು. ಈ ಕಾರಣ ಅವನ ಜೀವಮಾನದಲ್ಲಿ ಸರ್ವೇಶ್ವರನ ಕೋಪ ಅವರ ಮೇಲೆ ಬರಲಿಲ್ಲ.


ಸೂಕ್ತ ಬಲಿಗಳಿಂದಾಗ ನಿನ್ನನೊಲಿಸುವರು I ವೇದಿಕೆ ಮೇಲೆ ಯಜ್ಞಪಶುಗಳನು ಅರ್ಪಿಸುವರು II


ಮಿಕಾಯನು ತನ್ನ ಹಾಗೂ ಜನರ ಮುಂದೆ ಗ್ರಂಥ ಸುರುಳಿಯಿಂದ ಬಾರೂಕನು ಓದಿ ಹೇಳಿದ್ದ ಎಲ್ಲ ಮಾತುಗಳನ್ನು ಅವರಿಗೆ ತಿಳಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು