Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 21:22 - ಕನ್ನಡ ಸತ್ಯವೇದವು C.L. Bible (BSI)

22 ಅವನು ಪೂಜಿಸಿದ ವಿಗ್ರಹಗಳನ್ನು ತಾನೂ ಪೂಜಿಸಿ ಅವುಗಳಿಗೆ ಅಡ್ಡಬಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ತನ್ನ ಪೂರ್ವಿಕರ ದೇವರಾದ ಯೆಹೋವನನ್ನೂ ಆರಾಧಿಸದೆ, ಆತನಿಗೆ ಮೆಚ್ಚಿಗೆಯಾಗುವಂತೆ ನಡೆಯುವ ಮಾರ್ಗವನ್ನೂ ಬಿಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ತನ್ನ ತಂದೆಯ ಮಾರ್ಗದಲ್ಲಿ ನಡೆದು ಅವನು ಪೂಜಿಸಿದ ವಿಗ್ರಹಗಳನ್ನು ತಾನೂ ಪೂಜಿಸಿ ಅವುಗಳಿಗೆ ಅಡ್ಡಬಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಆಮೋನನು ತನ್ನ ಪೂರ್ವಿಕರ ದೇವರಾದ ಯೆಹೋವನನ್ನು ತ್ಯಜಿಸಿದನು ಮತ್ತು ಯೆಹೋವನಿಗೆ ಮೆಚ್ಚಿಗೆಯಾದ ಮಾರ್ಗದಲ್ಲಿ ಜೀವಿಸಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ತನ್ನ ತಂದೆಯು ನಡೆದ ಸಮಸ್ತ ಮಾರ್ಗದಲ್ಲಿ ನಡೆದು, ತನ್ನ ತಂದೆಯು ಸೇವಿಸಿದ ವಿಗ್ರಹಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 21:22
9 ತಿಳಿವುಗಳ ಹೋಲಿಕೆ  

ಅವರು ನನ್ನನ್ನು ಬಿಟ್ಟು ಅನ್ಯದೇವತೆಗಳಿಗೆ ಧೂಪಾರತಿಯೆತ್ತಿ ತಮ್ಮ ದುಷ್ಕೃತ್ಯಗಳಿಂದ ನನ್ನನ್ನು ರೇಗಿಸಿದ್ದಾರೆ. ಆದ್ದರಿಂದ ನನ್ನ ಕೋಪಾಗ್ನಿ ಈ ನಾಡಿನ ಮೇಲೆ ಉರಿಯಹತ್ತಿ ಆರಿಹೋಗುವುದೇ ಇಲ್ಲ,’ ಎನ್ನುತ್ತಾರೆ ಸರ್ವೇಶ್ವರ.


ಇದಲ್ಲದೆ, ಅವರು ನಿನಗೆ, ‘ಸೊಲೊಮೋನನೂ ಅವನ ಮನೆಯವರೂ ನನ್ನನ್ನು ಬಿಟ್ಟು ಸಿದೋನ್ಯರ ದೇವತೆಯಾದ ಅಷ್ಟೋರೆತ್, ಮೋವಾಬ್ಯರ ದೇವತೆಯಾದ ಕೆಮೋಷ್, ಅಮ್ಮೋನಿಯರ ದೇವತೆಯಾದ ಮಿಲ್ಕೋಮ್ ಇವುಗಳನ್ನು ಆರಾಧಿಸುತ್ತಿದ್ದಾರೆ. ಅವರ ತಂದೆ ದಾವೀದನು ನನ್ನ ನಿಯಮವಿಧಿಗಳನ್ನು ಕೈಕೊಂಡು ನನ್ನನ್ನು ಮೆಚ್ಚಿಸಿ ನಡೆದಂತೆ ಅವರು ನಡೆಯದೆಹೋದದ್ದೂ ಇದಕ್ಕೆ ಕಾರಣ.


“ನನ್ನ ಮಗ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಪೂರ್ಣಹೃದಯದಿಂದ ಹಾಗೂ ಮನಸ್ಸಂತೋಷದಿಂದ ಅವರೊಬ್ಬರಿಗೇ ಸೇವೆ ಸಲ್ಲಿಸು. ಸರ್ವೇಶ್ವರನು ಎಲ್ಲಾ ಹೃದಯಗಳನ್ನು ಶೋಧಿಸುವವರೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವರೂ ಆಗಿದ್ದಾರೆ. ನೀನು ಅವರನ್ನು ಆರಿಸಿದರೆ ಅವರು ನಿನಗೆ ಸಿಗುವರು; ಅವರನ್ನು ಬಿಟ್ಟರೆ ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವರು.


ನಿರರ್ಥಕ ವಿಗ್ರಹಗಳನಾರಾಧಿಪ ಜನರು ತೊರೆದಿಹರು ಹಾರ್ದಿಕ ಭಕ್ತಿಯನು


“ನನ್ನ ಜನರು ಇಬ್ಬಗೆಯ ಅಪರಾಧಗಳನ್ನು ಎಸಗಿದ್ದಾರೆ; ಜೀವಜಲದ ಬುಗ್ಗೆಯಾದ ನನ್ನನ್ನೇ ತೊರೆದುಬಿಟ್ಟಿದ್ದಾರೆ! ತೊಟ್ಟಿಗಳನ್ನು, ನೀರುನಿಲ್ಲದ ಬಿರುಕು ತೊಟ್ಟಿಗಳನ್ನು ತಮಗಾಗಿ ಕೊರೆದುಕೊಂಡಿದ್ದಾರೆ!”


“ತೃಪ್ತಿಯಾಗಿ ತಿಂದನು ಯಕೋಬನು, ಕೊಬ್ಬಿಹೋದನು ಆ ಯೆಶೂರನು; ತೊರೆದುಬಿಟ್ಟನು ತನ್ನ ಪೊರೆಬಂಡೆಯನು ಮರೆತುಬಿಟ್ಟನು ತನ್ನ ಸೃಷ್ಟಿಕರ್ತನನು.


ತನ್ನ ಪೂರ್ವಜರ ದೇವರಾದ ಸರ್ವೇಶ್ವರನನ್ನೂ ಅವರು ಮೆಚ್ಚುವ ಮಾರ್ಗವನ್ನೂ ಬಿಟ್ಟು ತನ್ನ ತಂದೆಯ ಮಾರ್ಗದಲ್ಲೇ ನಡೆದನು.


ಆಕಾಶಮಂಡಲವೇ, ಕೇಳು; ಭೂಮಂಡಲವೇ, ಆಲಿಸು; ಸರ್ವೇಶ್ವರಸ್ವಾಮಿ ಆಡುತ್ತಿರುವ ಮಾತುಗಳಿಗೆ ಕಿವಿಗೊಡು: “ನಾನು ಸಾಕಿ ಸಲಹಿದ ಮಕ್ಕಳೇ ನನಗೆ ದ್ರೋಹವೆಸಗಿದ್ದಾರೆ.


ಎಲೈ ಪಾಪಿಷ್ಠ ಜನವೇ, ದೋಷಭರಿತ ಪ್ರಜೆಯೇ, ದುಷ್ಟಪೀಳಿಗೆಯೇ, ಭ್ರಷ್ಟಸಂತಾನವೇ, ನಿಮ್ಮ ಗತಿಯನ್ನು ಏನೆಂದು ಹೇಳಲಿ. ನೀವು ಸರ್ವೇಶ್ವರನನ್ನು ತೊರೆದಿದ್ದೀರಿ. ಇಸ್ರಯೇಲರ ಪರಮಪಾವನ ಸ್ವಾಮಿಯನ್ನು ಧಿಕ್ಕರಿಸಿದ್ದೀರಿ. ಅವರಿಗೆ ಬೆನ್ನುಮಾಡಿ ಬೇರೆಯಾಗಿದ್ದೀರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು