Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 19:32 - ಕನ್ನಡ ಸತ್ಯವೇದವು C.L. Bible (BSI)

32 “ಅಸ್ಸೀರಿಯದ ಅರಸನನ್ನು ಕುರಿತು ಸರ್ವೇಶ್ವರ ಹೇಳಿರುವ ಮಾತಿದು: ‘ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದರತ್ತ ಬಾಣವನ್ನೆಸೆಯುವುದಿಲ್ಲ, ಕವಚಧಾರಿಗಳನ್ನು ಕಳುಹಿಸುವುದಿಲ್ಲ. ಅದರ ಆಕ್ರಮಣಕ್ಕಾಗಿ ಮಣ್ಣುದಿಬ್ಬಗಳನ್ನು ಎಬ್ಬಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

32 ಯೆಹೋವನು ಅಶ್ಶೂರದ ಅರಸನ ವಿಷಯವಾಗಿ, “ನನ್ನ ಮಾತನ್ನು ಕೇಳು ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ. ಅದಕ್ಕೆ ಬಾಣವನ್ನೆಸೆಯುವುದಿಲ್ಲ. ಗುರಾಣಿ ಹಿಡಿದಿರುವವರನ್ನು ಕಳುಹಿಸುವುದಿಲ್ಲ. ಅದನ್ನು ಕೆಡವಿಬಿಡುವುದಕ್ಕೋಸ್ಕರ ಅದರ ಎದುರಾಗಿ ಮಣ್ಣಿನ ದಿಬ್ಬವನ್ನು ಸೃಷ್ಟಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

32 ಯೆಹೋವನು ಅಶ್ಶೂರದ ಅರಸನ ವಿಷಯವಾಗಿ - ನನ್ನ ಮಾತನ್ನು ಕೇಳು, ಅವನು ಪಟ್ಟಣವನ್ನು ಸಮೀಪಿಸುವದಿಲ್ಲ, ಅದಕ್ಕೆ ಬಾಣವನ್ನೆಸೆಯುವದಿಲ್ಲ, ಗುರಾಣಿಹಿಡಿದಿರುವವರನ್ನು ಕಳುಹಿಸುವದಿಲ್ಲ, ಅದನ್ನು ಕೆಡವಿಬಿಡುವದಕ್ಕೋಸ್ಕರ ಅದರ ಎದುರಾಗಿ ಮಣ್ಣಿನ ದಿಬ್ಬವನ್ನು ಮಾಡುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

32 “ಯೆಹೋವನು ಅಶ್ಶೂರದ ರಾಜನನ್ನು ಕುರಿತು ಹೀಗೆನ್ನುತ್ತಾನೆ: ‘ಅವನು ಈ ನಗರದೊಳಕ್ಕೆ ಬರುವುದಿಲ್ಲ. ಅವನು ಈ ನಗರದಲ್ಲಿ ಒಂದು ಬಾಣವನ್ನೂ ಎಸೆಯುವುದಿಲ್ಲ. ಅವನು ಈ ನಗರದ ವಿರುದ್ಧ ಗುರಾಣಿಗಳೊಂದಿಗೆ ಬರುವುದಿಲ್ಲ. ಅವನು ಈ ನಗರವನ್ನು ಮುತ್ತಲು ಮಣ್ಣಿನ ದಿಬ್ಬವನ್ನು ನಿರ್ಮಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

32 “ಆದ್ದರಿಂದ ಯೆಹೋವ ದೇವರು ಅಸ್ಸೀರಿಯದ ಅರಸನನ್ನು ಕುರಿತು ಹೀಗೆ ಹೇಳುತ್ತಾರೆ: “ ‘ಅವನು ಈ ಪಟ್ಟಣದೊಳಗೆ ಬರುವುದಿಲ್ಲ; ಅಲ್ಲಿ ಬಾಣವನ್ನು ಎಸೆಯುವುದಿಲ್ಲ; ಗುರಾಣಿಯೊಂದಿಗೆ ಅದರ ಮುಂದೆ ಬರಲಾರನು; ಅದಕ್ಕೆ ವಿರೋಧವಾಗಿ ಮುತ್ತಿಗೆ ಹಾಕಲು ದಿಬ್ಬವನ್ನು ನಿರ್ಮಿಸುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 19:32
7 ತಿಳಿವುಗಳ ಹೋಲಿಕೆ  

ಯೋವಾಬನ ಕಡೆಯವರು ಅಬೇಲ್ಬೇತ್ಮಾಕಾ ಊರಿಗೆ ಮುತ್ತಿಗೆಹಾಕಿದರು. ಅದರ ಹೊರಗೋಡೆಯ ಹತ್ತಿರ ಒಂದು ಮಣ್ಣಿನ ದಿಬ್ಬವನ್ನು ಮಾಡಿ ಗೋಡೆಯ ಕೆಳಗೆ ಅಗೆಯುತ್ತಾ ಅದನ್ನು ಕೆಡವಿಬಿಡುವುದಕ್ಕೆ ಪ್ರಯತ್ನಿಸಿದರು.


ಜೆರುಸಲೇಮ್ ಗುರುತಿನ ಬಾಣ ಅವನ ಬಲಗೈಗೆ ಸಿಕ್ಕಿದೆ; ಭಿತ್ತಿಭೇದಕ ಯಂತ್ರಗಳನ್ನು ಪುರದ್ವಾರಗಳೆದುರಿಗೆ ನಿಲ್ಲಿಸಿ, ಬಾಯಿತೆರೆದು ಸಂಹಾರ ಧ್ವನಿಮಾಡಿ, ಹೌದು ಭಿತ್ತಿಭೇದಕಯಂತ್ರಗಳನ್ನು ಪುರದ್ವಾರಗಳೆದುರಿಗೆ ನಿಲ್ಲಿಸಿ, ದಿಬ್ಬಹಾಕಿ, ಒಡ್ಡು ಕಟ್ಟಬೇಕೆಂಬ ಸೂಚನೆ ಅದರಿಂದ ಬಂದಿತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು