2 ಅರಸುಗಳು 18:7 - ಕನ್ನಡ ಸತ್ಯವೇದವು C.L. Bible (BSI)7 ಸರ್ವೇಶ್ವರ ಇವನ ಸಂಗಡ ಇದ್ದುದರಿಂದ ಎಲ್ಲಿಗೆ ಹೋದರೂ ಕೃತಾರ್ಥನಾಗಿ ಬರುತ್ತಿದ್ದನು. ಇವನು ಅಸ್ಸೀರಿಯದ ಅರಸನಿಗೆ ವಿರುದ್ಧ ದಂಗೆಯೆದ್ದು ಸ್ವತಂತ್ರನಾದನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ಯೆಹೋವನು ಹಿಜ್ಕೀಯನ ಸಂಗಡ ಇದ್ದುದರಿಂದ ಅವನು ಹೋದ ಎಲ್ಲ ಕಡೆ ಅಭಿವೃದ್ಧಿ ಹೊಂದಿದನು. ಇವನು ಅಶ್ಶೂರದ ಅರಸನಿಗೆ ವಿರುದ್ಧವಾಗಿ ದಂಗೆ ಎದ್ದು ಸ್ವತಂತ್ರನಾದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ಯೆಹೋವನು ಇವನ ಸಂಗಡ ಇದ್ದದರಿಂದ ಎಲ್ಲಿಗೆ ಹೋದರೂ ಕೃತಾರ್ಥನಾಗಿ ಬರುತ್ತಿದ್ದನು. ಇವನು ಅಶ್ಶೂರದ ಅರಸನಿಗೆ ವಿರೋಧವಾಗಿ ತಿರುಗಿಬಿದ್ದು ಸ್ವತಂತ್ರನಾದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ಯೆಹೋವನು ಹಿಜ್ಕೀಯನೊಂದಿಗಿದ್ದನು. ಹಿಜ್ಕೀಯನು ತಾನು ಮಾಡಿದ್ದರಲ್ಲೆಲ್ಲಾ ಜಯಗಳಿಸಿದನು. ಹಿಜ್ಕೀಯನು ಅಶ್ಶೂರದ ರಾಜನೊಂದಿಗಿದ್ದ ಸಂಬಂಧವನ್ನು ಕಡಿದುಹಾಕಿದನು. ಅಶ್ಶೂರದ ರಾಜನ ಸೇವೆಯನ್ನು ಹಿಜ್ಕೀಯನು ನಿಲ್ಲಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಯೆಹೋವ ದೇವರು ಅವನ ಸಂಗಡ ಇದ್ದರು. ಹಿಜ್ಕೀಯನು ಯಾವ ಕಡೆಗೆ ಹೋದರೂ ಅವನಿಗೆ ಸಫಲವಾಯಿತು. ಅವನು ಅಸ್ಸೀರಿಯದ ಅರಸನನ್ನು ಸೇವಿಸದೆ, ಅವನ ಮೇಲೆ ತಿರುಗಿಬಿದ್ದನು. ಅಧ್ಯಾಯವನ್ನು ನೋಡಿ |