Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 17:17 - ಕನ್ನಡ ಸತ್ಯವೇದವು C.L. Bible (BSI)

17 ತಮ್ಮ ಗಂಡುಹೆಣ್ಣು ಮಕ್ಕಳನ್ನು ಬಲಿಯಗ್ನಿಪರೀಕ್ಷೆಗೆ ಗುರಿಮಾಡಿದರು. ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟವುಗಳನ್ನು ಮಾಡಿದರು. ಕಣಿಹೇಳುವುದು, ಯಂತ್ರಮಂತ್ರಗಳನ್ನು ಮಾಡುವುದು, ಮೊದಲಾದ ದುಷ್ಕೃತ್ಯಗಳಿಗೆ ತಮ್ಮನ್ನೇ ಮಾರಿಬಿಟ್ಟು ಸರ್ವೇಶ್ವರನಿಗೆ ಕೋಪವನ್ನೆಬ್ಬಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ತಮ್ಮ ಗಂಡು ಹೆಣ್ಣು ಮಕ್ಕಳನ್ನು ಆಹುತಿ ಕೊಟ್ಟರು. ಯೆಹೋವನ ದೃಷ್ಟಿಯಲ್ಲಿ ನೀಚಕೃತ್ಯಗಳಾಗಿರುವ ಕಣಿಹೇಳುವುದು, ಮಾಟ ಮಂತ್ರಗಳನ್ನು ಮಾಡುವುದು ಮೊದಲಾದ ದುಷ್ಕೃತ್ಯಗಳಿಗೆ ತಮ್ಮನ್ನು ತೊಡಗಿಸಿಕೊಂಡು, ಯೆಹೋವನಿಗೆ ಕೋಪವನ್ನೆಬ್ಬಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ತಮ್ಮ ಗಂಡು ಹೆಣ್ಣು ಮಕ್ಕಳನ್ನು ಆಹುತಿಕೊಟ್ಟರು; ಯೆಹೋವನ ದೃಷ್ಟಿಯಲ್ಲಿ ಕೆಟ್ಟವುಗಳಾಗಿರುವ ಕಣಿಹೇಳುವದು, ಯಂತ್ರಮಂತ್ರಗಳನ್ನು ಮಾಡುವದು ಮೊದಲಾದ ದುಷ್ಕೃತ್ಯಗಳಿಗೆ ತಮ್ಮನ್ನು ಮಾರಿಬಿಟ್ಟು ಆತನಿಗೆ ಕೋಪವನ್ನೆಬ್ಬಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಅವರು ತಮ್ಮ ಗಂಡುಮಕ್ಕಳನ್ನು ಮತ್ತು ಹೆಣ್ಣುಮಕ್ಕಳನ್ನು ಬೆಂಕಿಯಲ್ಲಿ ಆಹುತಿಕೊಟ್ಟರು. ಅವರು ಭವಿಷ್ಯವನ್ನು ತಿಳಿಯಲು ಮಾಂತ್ರಿಕ ವಿದ್ಯೆಯನ್ನು ಮತ್ತು ಕಣಿಹೇಳುವುದನ್ನು ಕಲಿತರು. ಯೆಹೋವನು ಕೆಟ್ಟದ್ದೆಂದು ಹೇಳಿದ್ದಕ್ಕೆ ತಮ್ಮನ್ನು ತಾವು ಮಾರಿಕೊಂಡು ಯೆಹೋವನಿಗೆ ಕೋಪವನ್ನು ಉಂಟುಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಕಣಿಗಳನ್ನೂ, ಶಕುನಗಳನ್ನೂ ಬಳಸಿ, ಯೆಹೋವ ದೇವರಿಗೆ ಕೋಪ ಬರುವಂತೆ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 17:17
33 ತಿಳಿವುಗಳ ಹೋಲಿಕೆ  

ಇದಲ್ಲದೆ ಅವನು ತನ್ನ ಮಗನನ್ನು ಬಲಿಯಗ್ನಿಪರೀಕ್ಷೆಗೆ ಗುರಿಯಾಗಿಸಿದನು. ಕಣಿ ಹೇಳಿಸುವುದು, ತಂತ್ರಮಂತ್ರಗಳನ್ನು ಮಾಡಿಸುವುದು, ಭೂತಪ್ರೇತಗಳನ್ನು ವಿಚಾರಿಸುವವರನ್ನು ಸಂಪರ್ಕಿಸುವುದು ಇವೇ ಮೊದಲಾದ ದುಷ್ಕೃತ್ಯಗಳಿಂದ ಸರ್ವೇಶ್ವರನಿಗೆ ಕೋಪವನ್ನೆಬ್ಬಿಸಿದನು.


ಇಸ್ರಯೇಲ್ ರಾಜರ ಮಾರ್ಗದಲ್ಲೇ ನಡೆದನು; ಇದಲ್ಲದೆ ಇಸ್ರಯೇಲರ ನಾಡಿನಿಂದ ಸರ್ವೇಶ್ವರ ಓಡಿಸಿಬಿಟ್ಟ ಜನಾಂಗಗಳ ಅಸಹ್ಯ ಆಚಾರಗಳನ್ನು ಅನುಸರಿಸಿ ತನ್ನ ಮಗನನ್ನೆ ಬಲಿಯಗ್ನಿಪರೀಕ್ಷೆಗೆ ಗುರಿಮಾಡಿದನು.


ಅವರು ವ್ಯಭಿಚಾರಿಣಿಯರು, ಅವರ ಕೈ ರಕ್ತಸಿಕ್ತವಾಗಿದೆ, ತಮ್ಮ ವಿಗ್ರಹಗಳಿಂದ ವ್ಯಭಿಚಾರ ಮಾಡಿದ್ದಾರೆ, ನನಗೆ ಹೆತ್ತ ತಮ್ಮ ಗಂಡುಮಕ್ಕಳನ್ನು ಆ ವಿಗ್ರಹಗಳಿಗೆ ಬಲಿಯಾಗಿ ಆಹುತಿಕೊಟ್ಟಿದ್ದಾರೆ.


ಅಹಾಬನು ಎಲೀಯನನ್ನು ನೋಡಿ, “ಎಲೈ ವೈರಿಯೇ, ನೀನು ನನ್ನನ್ನು ಕಂಡುಹಿಡಿದೆಯಾ?” ಎಂದು ಕೇಳಿದನು. ಅವನು, “ಹೌದು, ಕಂಡುಹಿಡಿದೆ, ನೀನು ನಿನ್ನನ್ನು ಪಾಪಕ್ಕೆ ಮಾರಿಬಿಟ್ಟು, ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾದೆ.


ನಿನ್ನ ನುರಿತ ಮಂತ್ರತಂತ್ರಗಳನ್ನು ನಿಲ್ಲಿಸಿಬಿಡುವೆನು. ನಿನ್ನ ಮಂತ್ರವಾದಿಗಳನ್ನು ನಿರ್ಮೂಲಮಾಡುವೆನು.


ಹೆಂಡತಿ ಈಜೆಬೆಲಳಿಂದ ಪ್ರಚೋದಿತನಾಗಿ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ.


“ರಕ್ತ ಸಹಿತವಾದ ಯಾವ ಮಾಂಸವನ್ನೂ ತಿನ್ನಬೇಡ. ತಂತ್ರಮಂತ್ರಗಳನ್ನು ಮಾಡಬೇಡ; ಶಕುನಗಳನ್ನು ನೋಡಬೇಡ.


ನಿಮ್ಮ ಮಕ್ಕಳಲ್ಲಿ ಯಾರನ್ನೂ ಮೋಲೆಕ ದೇವತೆಗೆ ಸಮರ್ಪಿಸಿ ನಿಮ್ಮ ದೇವರ ಹೆಸರನ್ನು ಅಪಕೀರ್ತಿಗೆ ಗುರಿಮಾಡಬಾರದು; ಸರ್ವೇಶ್ವರ ನಾನೇ.


ನಾವು ಅಹಂಕಾರಿಗಳಾಗಿರಬಾರದು; ಒಬ್ಬರನ್ನೊಬ್ಬರು ಕೆಣಕಬಾರದು; ಒಬ್ಬರ ಮೇಲೊಬ್ಬರು ಹೊಟ್ಟೆಕಿಚ್ಚು ಪಡಬಾರದು.


ಒಂದು ದಿನ ನಾವು ಪ್ರಾರ್ಥನಾ ಸ್ಥಳಕ್ಕೆ ಹೋಗುತ್ತಿದ್ದೆವು. ಗಾರುಡಗಾತಿಯಾದ ಒಬ್ಬ ದಾಸಿ ನಮ್ಮನ್ನು ಎದುರುಗೊಂಡಳು. ಆ ಹುಡುಗಿ ಕಣಿಶಕುನ ಹೇಳಿ ತನ್ನ ಯಜಮಾನನಿಗೆ ತುಂಬಾ ಹಣ ಸಂಪಾದಿಸುತ್ತಿದ್ದಳು.


ತಮ್ಮ ಮಕ್ಕಳನ್ನು ಕೊಂದು, ತಮ್ಮ ವಿಗ್ರಹಗಳಿಗೆ ಅರ್ಪಿಸಿದ ದಿನದಲ್ಲೇ ನನ್ನ ಪವಿತ್ರಾಲಯವನ್ನು ಸೇರಿ ಅಪವಿತ್ರಮಾಡಿದರು; ಹೌದು, ನನ್ನ ಮಂದಿರದ ನಟ್ಟನಡುವೆ ಇದನ್ನು ನಡೆಸಿದರು.


ನೀವು ಬಲಿಯರ್ಪಿಸುತ್ತಾ, ನಿಮ್ಮ ಮಕ್ಕಳನ್ನು ಆಹುತಿಕೊಟ್ಟು ಇಂದಿನವರೆಗೂ ನಿಮ್ಮನ್ನು ಅಶುದ್ಧಮಾಡಿಕೊಂಡಿರಿ. ಹೀಗಿರುವಾಗ ಇಸ್ರಯೇಲ್ ವಂಶದವರೇ, ನಾನು ನಿಮ್ಮಂಥವರಿಗೆ ದೈವೋತ್ತರವನ್ನು ದಯಪಾಲಿಸಬಹುದೇ? ನನ್ನ ಜೀವದಾಣೆ, ನಿಮಗೆ ದೈವೋತ್ತರವನ್ನು ದಯಪಾಲಿಸೆನು; ಇದು ಸರ್ವೇಶ್ವರನಾದ ದೇವರ ನುಡಿ.


ಅವರು ತಮ್ಮ ಚೊಚ್ಚಲುಮಕ್ಕಳನ್ನು ಆಹುತಿಕೊಟ್ಟು ಅರ್ಪಿಸುತ್ತಿದ್ದ ಬಲಿಗಳಿಂದಲೇ ಅವರನ್ನು ಹೊಲೆಗೆಡಿಸಿ, ಕೇವಲ ದುರವಸ್ಥೆಗೆ ತಂದೆನು.


“ನೀವು ಬಾಬಿಲೋನಿನ ಅರಸನಿಗೆ ಅಡಿಯಾಳುಗಳು ಆಗುವುದಿಲ್ಲ’ ಎಂದು ನಿಮಗೆ ನುಡಿಯುವ ನಿಮ್ಮ ಪ್ರವಾದಿಗಳು ಶಕುನದವರು, ಕನಸಿಗರು, ಕಣಿಯವರು, ಮಾಟಗಾರರು. ಅವರಿಗೆ ಕಿವಿಗೊಡಲೇಬೇಡಿ.


ಸರ್ವೇಶ್ವರ ಹೀಗೆನ್ನುತ್ತಾರೆ : “ವಿವಾಹ ವಿಚ್ಛೇದನಗೈದ ಗಂಡಸಿನಂತೆ ನಾನು ನಿಮ್ಮ ಜನಾಂಗವನ್ನು ಪರಿತ್ಯಜಿಸಿದುಂಟೊ? ತನ್ನ ಮಕ್ಕಳನ್ನು ಜೀತಕ್ಕೆ ಇರಿಸುವವನಂತೆ ನಾನು ನಿಮ್ಮನ್ನು ನನ್ನ ಸಾಲಗಾರರಿಗೆ ಮಾರಿದುಂಟೊ? ಇಲ್ಲ, ನೀವು ಸೆರೆವಾಸಿಗಳಾದಿರಿ ನಿಮ್ಮ ದೋಷಗಳ ನಿಮಿತ್ತ; ನಿಮ್ಮ ತಾಯಿಯನು ಬಿಡಲಾಯಿತು ನಿಮ್ಮ ದ್ರೋಹಗಳ ನಿಮಿತ್ತ.


ಒಂದೇ ದಿನದೊಳಗೆ, ಒಂದೇ ಕ್ಷಣದೊಳಗೆ ಪುತ್ರಶೋಕ, ವೈಧವ್ಯ - ಇವೆರಡು ಒದಗುವುವು ನಿನಗೆ. ಎಷ್ಟೇ ಮಂತ್ರತಂತ್ರಗಳನು ನಡೆಸಿದರೂ ಅನುಭವಿಸುವೆ ನೀ ಪೂರ್ತಿಯಾಗಿ ಇವುಗಳನು.


‘ಲೊಚಗುಟ್ಟುವ, ಪಿಟಿಪಿಟಿಗುಟ್ಟುವ, ಕಣಿಹೇಳುವವರ ಮತ್ತು ಪ್ರೇತವಿಚಾರಕರ ಸಲಹೆ ಕೇಳಿ’ ಎಂದು ಜನರು ನಿಮಗೆ ಹೇಳಿಯಾರು. ಆಗ, ‘ದೇವರನ್ನೇ ಏಕೆ ವಿಚಾರಿಸಬಾರದು? ಜೀವಿತರಿಗಾಗಿ ಸತ್ತವರನ್ನು ವಿಚಾರಿಸುವುದು ಸರಿಯಲ್ಲ’ ಎಂದು ಅಂಥವರಿಗೆ ನೀವು ಹೇಳಬೇಕು.


ಇದಲ್ಲದೆ, ಅವನು ತನ್ನ ಮಕ್ಕಳನ್ನು ಬೆನ್‍ಹಿನ್ನೋಮ್ ಕಣಿವೆಯಲ್ಲಿ ಬಲಿಯಗ್ನಿ ಪರೀಕ್ಷೆಗೆ ಗುರಿಪಡಿಸಿದನು; ಕಣಿ ಹೇಳಿಸುವುದು, ಶಕುನ ನೋಡಿಸುವುದು, ತಂತ್ರಮಂತ್ರಗಳನ್ನು ಮಾಡಿಸುವುದು, ಭೂತಪ್ರೇತಗಳನ್ನು ವಿಚಾರಿಸುವವರನ್ನು ಸಂಪರ್ಕಿಸುವುದು ಇವೇ ಮೊದಲಾದ ದುಷ್ಕೃತ್ಯಗಳಿಂದ ಸರ್ವೇಶ್ವರನಿಗೆ ಕೋಪ ಬರಿಸಿದನು.


ಅವನು ಬೆನ್‍ಹಿನ್ನೋಮ್ ಎಂಬ ಕಣಿವೆಯಲ್ಲಿ ಧೂಪ ಹಾಕಿಸಿದ್ದಲ್ಲದೆ ಸರ್ವೇಶ್ವರಸ್ವಾಮಿ ಇಸ್ರಯೇಲರ ನಾಡಿನಿಂದ ಓಡಿಸಿಬಿಟ್ಟ ಜನಾಂಗಗಳ ಅಸಹ್ಯಕಾರ್ಯಗಳನ್ನು ಅನುಸರಿಸಿ ತನ್ನ ಮಕ್ಕಳನ್ನು ಬಲಿಯಗ್ನಿ ಪರೀಕ್ಷೆಗೆ ಗುರಿಪಡಿಸಿದ್ದನು.


ತಮ್ಮ ನಾಡಿನಿಂದ ಸರ್ವೇಶ್ವರ ಹೊರಡಿಸಿಬಿಟ್ಟಿದ್ದ ಅನ್ಯಜನಾಂಗಗಳಂತೆ ಎಲ್ಲಾ ಪೂಜಾಸ್ಥಳಗಳಲ್ಲಿ ಧೂಪಾರತಿಯೆತ್ತಿ ತಮ್ಮ ದುಷ್ಕೃತ್ಯಗಳಿಂದ ಅವರನ್ನು ರೇಗಿಸಿದರು;


ಧರ್ಮಶಾಸ್ತ್ರ ಪಾರಮಾರ್ಥಿಕವಾದುದೆಂದು ನಾವು ಬಲ್ಲೆವು. ನಾನಾದರೋ ನರಮಾನವನು; ಪಾಪಕ್ಕೆ ನನ್ನನ್ನೇ ಗುಲಾಮನನ್ನಾಗಿ ಮಾರಿಕೊಂಡವನು.


“ನೀವು ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆಯುವಷ್ಟು ಕಾಲ ಆ ನಾಡಿನಲ್ಲಿದ್ದು, ಯಾವುದಾದರೊಂದು ವಿಗ್ರಹವನ್ನು ಮಾಡಿಕೊಂಡು ದ್ರೋಹಿಗಳಾಗಿ ನಿಮ್ಮ ದೇವರಾದ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ಅವರನ್ನು ಸಿಟ್ಟುಗೊಳಿಸಿದ್ದೇ ಆದರೆ


ಹಮಾತಿನವರು ಅಷೀಮಾ, ಅವ್ವೀಯರು ನಿಭಜ್ ಮತ್ತು ತರ್ತಕ್ ಎಂಬ ದೇವತೆಗಳನ್ನು ಪೂಜಿಸುತ್ತಿದ್ದರು. ಸೆಫರ್ವಯಿಮಿನವರು ತಮ್ಮ ಕುಲದೇವತೆಗಳಾಗಿರುವ ಅದ್ರೆಮ್ಮೆಲೆಕ್ ಹಾಗು ಅನಮೆಲೆಕ್ ಎಂಬುವುಗಳಿಗಾಗಿ ತಮ್ಮ ಮಕ್ಕಳನ್ನು ಬಲಿಯಗ್ನಿ ಪರೀಕ್ಷೆಗೆ ಗುರಿಮಾಡುತ್ತಿದ್ದರು.


ತಮ್ಮ ಗಂಡುಹೆಣ್ಣು ಮಕ್ಕಳನ್ನೂ ಆಹುತಿಕೊಡುವುದಕ್ಕೆ ಬೆನ್‍ಹಿನ್ನೋಮ್ ಕಣಿವೆಯಲ್ಲಿನ ತೋಫೆತೆಂಬ ಬಲಿಪೀಠವನ್ನು ಕಟ್ಟಿದ್ದಾರೆ. ಇಂಥ ಕಾರ್ಯವನ್ನು ನಾನು ವಿಧಿಸಿಲ್ಲ. ಅದು ನನ್ನ ಮನಸ್ಸಿಗೂ ಸುಳಿದಿಲ್ಲ.


ತಮ್ಮ ಮಕ್ಕಳನ್ನು ಬಾಳ್‍ದೇವತೆಗೆ ಆಹುತಿಕೊಡಲು ಆ ದೇವತೆಗೆ ಬಲಿಪೀಠಗಳನ್ನು ಕೂಡ ಏರ್ಪಡಿಸಿದ್ದಾರೆ. ನಾನು ಇಂಥ ಆಚಾರಗಳನ್ನು ವಿಧಿಸಲಿಲ್ಲ. ಅದರ ಮಾತನ್ನೇ ಎತ್ತಲಿಲ್ಲ. ಅಂಥದ್ದು ನನ್ನ ಮನಸ್ಸಿಗೂ ತೋಚಿದ್ದಿಲ್ಲ.


ಆದರೆ ಸರ್ವೇಶ್ವರ ಸ್ವಾಮಿಯೇ ಹೇಳುವಂತೆ ನೀವು ಅವರಿಗೆ ಕಿವಿಗೊಡದೆ ನಿಮ್ಮ ಕೈಕೃತಿಗಳಾದ ವಿಗ್ರಹಗಳಿಂದ ಅವರನ್ನು ಕೆಣಕಿ ನಿಮಗೇ ಕೇಡನ್ನು ತಂದುಕೊಂಡಿದ್ದೀರಿ.


ನಿನ್ನ ಈ ಸೂಳೆತನ ಅಲ್ಪಕಾರ್ಯವೆಂದು ಭಾವಿಸಿದೆಯೋ? ಅದನ್ನು ಮೀರಿಸಬೇಕೆಂದು ನೀನು ನನ್ನ ಮಕ್ಕಳನ್ನು ಹತಿಸಿ ಮೂರ್ತಿಗಳಿಗೆ ಆಹುತಿಯಾಗಿಟ್ಟೆ!


“ಭೂತಪ್ರೇತಗಳನ್ನು ವಿಚಾರಿಸುವವರ ಬಳಿಗೆ ಹೋಗಬೇಡ; ಅವರ ಆಲೋಚನೆಯನ್ನು ಕೇಳಿ ಅಶುದ್ಧನಾಗಬೇಡ. ನಾನು ಸರ್ವೇಶ್ವರ.


ರೇಗಿಸಿದರಾತನನು ಅನ್ಯದೇವರುಗಳನು ಪೂಜಿಸುತ ಸಿಟ್ಟಿಗೇರಿಸಿದರು ನಿಷಿದ್ಧಾಚಾರಗಳನು ನಡೆಸುತ.


ಸರ್ವೇಶ್ವರ ಇಸ್ರಯೇಲರನ್ನು ಹೊಡೆಯುವರು. ಆಗ ಅವರು ನೀರಿನಲ್ಲಿರುವ ಆಪು ಹುಲ್ಲೋ ಎಂಬಂತೆ ಹೊಯ್ದಾಡುವರು. ಅಶೇರ ವಿಗ್ರಹಸ್ತಂಭಗಳನ್ನು ಮಾಡಿಕೊಂಡು ಸರ್ವೇಶ್ವರನಿಗೆ ಕೋಪವನ್ನೆಬ್ಬಿಸಿದ ಅವರನ್ನು, ಅವರ ಪಿತೃಗಳಿಗೆ ಕೊಟ್ಟ ನಾಡಿನಿಂದ ಬೇರುಸಹಿತ ಕಿತ್ತುಹಾಕಿ ಯೂಫ್ರೆಟಿಸ್ ನದಿಯ ಆಚೆಯಲ್ಲಿರುವ ದೇಶದಲ್ಲೆಲ್ಲಾ ಚದರಿಸಿಬಿಡುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು