Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 12:8 - ಕನ್ನಡ ಸತ್ಯವೇದವು C.L. Bible (BSI)

8 ಆಗ ಯಾಜಕರು, “ನಾವು ಇನ್ನು ಮುಂದೆ ಜನರಿಂದ ಹಣ ತೆಗೆದುಕೊಳ್ಳುವುದಿಲ್ಲ, ದೇವಾಲಯದ ದುರಸ್ತಿಗಾಗಿ ಕೈಹಾಕುವುದಿಲ್ಲ,” ಎಂಬುದಾಗಿ ಮಾತುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಆಗ ಯಾಜಕರು ಅವನಿಗೆ, “ನಾವು ಇನ್ನು ಮುಂದೆ ಜನರಿಂದ ಹಣ ತೆಗೆದುಕೊಳ್ಳುವುದಿಲ್ಲ. ದೇವಾಲಯದ ದುರಸ್ತಿಗಾಗಿ ಕೈಹಾಕುವುದಿಲ್ಲ” ಎಂಬುದಾಗಿ ಮಾತುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಆಗ ಯಾಜಕರು ಅವನಿಗೆ - ನಾವು ಇನ್ನು ಮುಂದೆ ಜನರಿಂದ ಹಣ ತೆಗೆದುಕೊಳ್ಳುವದಿಲ್ಲ. ದೇವಾಲಯದ ಜೀರ್ಣೋದ್ಧಾರಕ್ಕೆ ಕೈಹಾಕುವದಿಲ್ಲ ಎಂಬದಾಗಿ ಮಾತುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆಗ ಯಾಜಕರು ಅವನಿಗೆ, “ನಾವು ಜನರಿಂದ ಹಣ ತೆಗೆದುಕೊಳ್ಳುವುದಿಲ್ಲ ಮತ್ತು ಆಲಯವನ್ನು ಸರಿಪಡಿಸುವುದಕ್ಕೆ ಕೈ ಹಾಕುವುದಿಲ್ಲ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಆಗ ಯಾಜಕರು, “ನಾವು ಇನ್ನು ಮುಂದೆ ಜನರಿಂದ ಹಣ ತೆಗೆದುಕೊಳ್ಳುವುದಿಲ್ಲ, ದೇವಾಲಯದ ದುರಸ್ತಿಗಾಗಿ ಕೈ ಹಾಕುವುದಿಲ್ಲ,” ಎಂಬುದಾಗಿ ಮಾತುಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 12:8
4 ತಿಳಿವುಗಳ ಹೋಲಿಕೆ  

ಆದುದರಿಂದ ಅವನು ಯೆಹೋಯಾದಾವ ಮೊದಲಾದ ಯಾಜಕರನ್ನು ಕರೆದು, “ನೀವು ಈವರೆಗೂ ದೇವಾಲಯವನ್ನೇಕೆ ದುರಸ್ತು ಮಾಡಲಿಲ್ಲ? ಇನ್ನು ಮುಂದೆ ನಿಮ್ಮ ಪರಿಚಿತರು ತಂದುಕೊಡುವ ಹಣವನ್ನು ನಿಮ್ಮ ಕೈಯಲ್ಲಿಟ್ಟುಕೊಳ್ಳದೆ. ಕೂಡಲೆ ಅದನ್ನು ದೇವಾಲಯದ ದುರಸ್ತಿಗಾಗಿ ಕೊಡಿ,” ಎಂದು ಹೇಳಿದನು.


ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು ಬಂದು, ಅದರ ಮುಚ್ಚಳದಲ್ಲಿ ತೂತುಮಾಡಿ, ಅದನ್ನು ಸರ್ವೇಶ್ವರನ ಆಲಯದ ಬಾಗಿಲಿನ ಬಲಗಡೆಯಲ್ಲಿ, ಬಲಿಪೀಠದ ಹತ್ತಿರ ಇಟ್ಟನು. ದ್ವಾರಪಾಲಕರಾದ ಯಾಜಕರು ಸರ್ವೇಶ್ವರನ ಆಲಯಕ್ಕೆ ತರಲಾದ ಹಣವನ್ನೆಲ್ಲಾ ಅದರಲ್ಲಿಯೇ ಹಾಕಿಸುತ್ತಿದ್ದರು.


“ನೀನು ಪ್ರಧಾನ ಯಾಜಕ ಹಿಲ್ಕೀಯನ ಬಳಿಗೆ ಹೋಗಿ ಅವನಿಗೆ, ‘ದ್ವಾರಪಾಲಕರು ಸರ್ವೇಶ್ವರನ ಆಲಯಕ್ಕೆ ಬರುವ ಜನರಿಂದ ಸಂಗ್ರಹಿಸಿದ ಹಣವನ್ನು ಲೆಕ್ಕಮಾಡಿ ಆಲಯದ ಕೆಲಸ ಮಾಡಿಸುವ ಮೇಸ್ತ್ರಿಗಳಿಗೆ ಅದನ್ನು ಒಪ್ಪಿಸು,’ ಎಂದು ಹೇಳು.


ಅನಂತರ ಅರಸನು ಒಂದು ಪೆಟ್ಟಿಗೆಯನ್ನು ಮಾಡಿಸಿ ಅದನ್ನು ಸರ್ವೇಶ್ವರನ ಆಲಯದ ಬಾಗಿಲಿನ ಹೊರಗೆ ಇರಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು