Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




2 ಅರಸುಗಳು 10:10 - ಕನ್ನಡ ಸತ್ಯವೇದವು C.L. Bible (BSI)

10 ಇಗೋ, ಅಹಾಬನ ಮನೆಯವರನ್ನುಕುರಿತು ಸರ್ವೇಶ್ವರ ಹೇಳಿದ ಮಾತುಗಳೆಲ್ಲಾ ತಪ್ಪದೆ ನೆರವೇರುವುದೆಂದು ತಿಳಿದುಕೊಳ್ಳಿರಿ. ಸರ್ವೇಶ್ವರ ತಮ್ಮ ದಾಸನಾದ ಎಲೀಯನ ಮುಖಾಂತರ ಹೇಳಿದ್ದನ್ನು ನೆರವೇರಿಸಿದ್ದಾರಷ್ಟೇ,” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಇಗೋ, ಯೆಹೋವನ ವಾಕ್ಯವು ಅಹಾಬನ ಮನೆಯವರನ್ನು ಕುರಿತು ಹೇಳಿದ ಮಾತುಗಳೆಲ್ಲಾ ತಪ್ಪದೆ ನೆರವೇರುವುದೆಂದು ತಿಳಿದುಕೊಳ್ಳಿರಿ. ಯೆಹೋವನು ತನ್ನ ಸೇವಕನಾದ ಎಲೀಯನ ಮುಖಾಂತರವಾಗಿ ಹೇಳಿದ್ದನ್ನು ಮಾಡಿದ್ದಾನಷ್ಟೇ” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಇಗೋ ಯೆಹೋವನು ಅಹಾಬನ ಮನೆಯವರನ್ನು ಕುರಿತು ಹೇಳಿದ ಮಾತುಗಳೆಲ್ಲಾ ತಪ್ಪದೆ ನೆರವೇರುವವೆಂದು ತಿಳಿದುಕೊಳ್ಳಿರಿ. ಯೆಹೋವನು ತನ್ನ ಸೇವಕನಾದ ಎಲೀಯನ ಮುಖಾಂತರವಾಗಿ ಹೇಳಿದ್ದನ್ನು ಮಾಡಿದ್ದಾನಷ್ಟೆ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಯೆಹೋವನು ಹೇಳಿದ್ದೆಲ್ಲವೂ ಸಂಭವಿಸುತ್ತದೆ ಎಂಬುದನ್ನು ನೀವು ತಿಳಿದಿರಬೇಕು. ಅಹಾಬನ ಕುಟುಂಬಕ್ಕೆ ಇವುಗಳು ಸಂಭವಿಸುತ್ತವೆಯೆಂದು ಯೆಹೋವನು ಎಲೀಯನ ಮೂಲಕ ತಿಳಿಸಿದ್ದನು. ಅಂತೆಯೇ ಆತನು ಮಾಡಿದ್ದಾನೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಯೆಹೋವ ದೇವರು ಅಹಾಬನ ಮನೆಯನ್ನು ಕುರಿತು ಹೇಳಿದ ಯೆಹೋವ ದೇವರ ಮಾತುಗಳಲ್ಲಿ ಒಂದೂ ವ್ಯರ್ಥವಾಗುವುದಿಲ್ಲವೆಂದು ನೀವು ತಿಳಿದುಕೊಳ್ಳಿರಿ. ಯೆಹೋವ ದೇವರು ತಮ್ಮ ಸೇವಕನಾದ ಎಲೀಯನ ಮುಖಾಂತರ ಹೇಳಿದ್ದನ್ನು ನೆರವೇರಿಸಿದ್ದಾರೆ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




2 ಅರಸುಗಳು 10:10
13 ತಿಳಿವುಗಳ ಹೋಲಿಕೆ  

“ಅಹಾಬನು ನನ್ನ ಮುಂದೆ ತನ್ನನ್ನೇ ತಗ್ಗಿಸಿಕೊಂಡದ್ದನ್ನು ನೋಡಿದಿಯಲ್ಲವೇ? ಅವನು ಹೀಗೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡಿಸುವುದಿಲ್ಲ. ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಬರಮಾಡುವೆನು,” ಎಂದು ಹೇಳಿದರು.


ಅವನಿಗೆ, “ನೀನು ಕೊಲೆಮಾಡಿ, ಸೊತ್ತನ್ನು ಸಂಪಾದಿಸಿಕೊಂಡೆಯಲ್ಲವೇ? ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವುವು, ಎನ್ನುತ್ತಾರೆ ಸರ್ವೇಶ್ವರ’ ಎಂದು ಹೇಳು.”


ಆದರೂ ನನ್ನ ದಾಸರಾದ ಪ್ರವಾದಿಗಳಿಗೆ ನಾನು ಕೊಟ್ಟ ಆಜ್ಞೆಗಳು, ವಿಧಿನಿಯಮಗಳು ನಿಮ್ಮ ಪಿತೃಗಳ ಮರಣದ ನಂತರವೂ ಶಾಶ್ವತವಾಗಿ ಉಳಿದಿವೆಯಲ್ಲವೆ? ಅವರು ಪಶ್ಚಾತ್ತಾಪಪಟ್ಟು, ‘ಸೇನಾಧೀಶ್ವರ ಸರ್ವೇಶ್ವರ ನಮ್ಮ ದುರ್ಮಾರ್ಗ ಹಾಗೂ ದುಷ್ಕೃತ್ಯಗಳಿಗೆ ತಕ್ಕಂತೆ ಏನು ಮಾಡಬೇಕೆಂದು ಸಂಕಲ್ಪಿಸಿದ್ದರೋ, ಅದನ್ನು ನಮಗೆ ಮಾಡಿಯೇ ಮಾಡಿದ್ದಾರೆ’ ಎಂದು ಹೇಳಿಕೊಂಡರಲ್ಲವೆ?”


ಅವರು ಹಿಂದಿರುಗಿ, ಯೇಹುವಿನ ಹತ್ತಿರ ಬಂದು, ಆ ಸಂಗತಿಯನ್ನು ತಿಳಿಸಿದರು. ಅವನು ಅವರಿಗೆ, “’ನಾಯಿಗಳು ಈಜೆಬೆಲಳ ದೇಹಮಾಂಸವನ್ನು ಜೆಸ್ರೀಲಿನ ಹೊಲದಲ್ಲಿ ತಿಂದುಬಿಡುವುವು;


ಇಸ್ರಯೇಲರ ನಿತ್ಯಾಧಾರವಾದ ಅವರು ಸುಳ್ಳಾಡುವವರಲ್ಲ; ಮಾತನ್ನು ಹಿಂತೆಗೆದುಕೊಳ್ಳುವವರಲ್ಲ; ಏಕೆಂದರೆ ಅವರು ಮನಸ್ಸು ಬದಲಾಯಿಸುವಂಥ ಮನುಷ್ಯರಲ್ಲ,” ಎಂದು ಹೇಳಿದನು.


ಸಮುವೇಲನು ದೊಡ್ಡವನಾಗುತ್ತಾ ಬಂದನು. ಸರ್ವೇಶ್ವರ ಅವನೊಡನೆ ಇದ್ದರು. ಆದುದರಿಂದಲೆ ಅವನು ಪ್ರವಾದನೆ ಮಾಡಿದವುಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ.


ಭೂಮ್ಯಾಕಾಶಗಳು ಗತಿಸಿಹೋಗುವುವು, ಆದರೆ ನನ್ನ ಮಾತುಗಳು ಶಾಶ್ವತವಾಗಿ ಉಳಿಯುವುವು.


ಸಮಾರಿಯವನ್ನು ಸೇರಿದ ನಂತರ ಅಲ್ಲಿ ಉಳಿದಿದ್ದ ಅಹಾಬನ ಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟನು. ಹೀಗೆ ಎಲೀಯನ ಮುಖಾಂತರ ಸರ್ವೇಶ್ವರ ಹೇಳಿಸಿದ ಮಾತು ನೆರವೇರಿತು.


ನಿನ್ನ ಸಂತಾನದವರು ನಾಲ್ಕನೆಯ ತಲೆಯವರೆಗೂ ಇಸ್ರಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು ಎಂಬುದಾಗಿ ಯೇಹುವಿಗೆ ಸರ್ವೇಶ್ವರ ಮುಂತಿಳಿಸಿದ ಮಾತು ನೆರವೇರಿತು.


ಕೂಡಲೆ ಅರಸನು ಹಾಮಾನನಿಗೆ, “ನೀನು ಹೇಳಿದ ಪ್ರಕಾರವೇ ಬೇಗನೆ ಹೋಗಿ ರಾಜವಸ್ತ್ರಗಳನ್ನೂ ಪಟ್ಟದ ಕುದುರೆಯನ್ನೂ ತೆಗೆದುಕೊಂಡು ಅರಮನೆಯ ಬಾಗಿಲಲ್ಲಿ ಕುಳಿತಿರುವ ಮೊರ್ದೆಕೈ ಎಂಬ ಯೆಹೂದ್ಯನಿಗೆ ಹಾಗೆಯೇ ಮಾಡು. ನೀನು ಸಲಹೆ ಮಾಡಿದವುಗಳಲ್ಲಿ ಒಂದನ್ನೂ ಬಿಡದೆ, ಚಾಚೂತಪ್ಪದೆ ನೆರವೇರಿಸು,” ಎಂದು ಅಪ್ಪಣೆಮಾಡಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು