Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 8:11 - ಕನ್ನಡ ಸತ್ಯವೇದವು C.L. Bible (BSI)

11 ಸರ್ವೇಶ್ವರನ ಮಾತುಗಳನ್ನೆಲ್ಲಾ ತಿಳಿಸಿದನು. “ಅರಸನ ಅಧಿಕಾರ ಎಷ್ಟೆಂದು ಕೇಳಿರಿ; ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು; ಅವರು ಅವರ ರಥಗಳ ಮುಂದೆ ಓಡಬೇಕಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 “ಅರಸನಿಗಿರುವ ಅಧಿಕಾರವೆಷ್ಟೆಂದು ಕೇಳಿರಿ, ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು. ಅವರು ಅವನ ರಥಗಳ ಮುಂದೆ ಓಡುವವರಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಅವರಿಗೆ - ಅರಸನ ಅಧಿಕಾರವೆಷ್ಟೆಂದು ಕೇಳಿರಿ - ಅವನು ನಿಮ್ಮ ಮಕ್ಕಳನ್ನು ತೆಗೆದುಕೊಂಡು ತನ್ನ ಸಾರಥಿಗಳನ್ನಾಗಿಯೂ ರಾಹುತರನ್ನಾಗಿಯೂ ಮಾಡಿಕೊಳ್ಳುವನು; ಅವರು ಅವನ ರಥಗಳ ಮುಂದೆ ಓಡುವವರಾಗಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಸಮುವೇಲನು, “ನೀವು ನಿಮ್ಮನ್ನು ಆಳಲು ರಾಜನು ಬೇಕೆಂದರೆ, ಅವನು ಬಲವಂತದಿಂದ ಹೀಗೆಲ್ಲ ಮಾಡುತ್ತಾನೆ: ಅವನು ನಿಮ್ಮ ಗಂಡುಮಕ್ಕಳನ್ನು ತೆಗೆದುಕೊಂಡು ತನ್ನ ಸೇವಕರನ್ನಾಗಿಯೂ ಸೈನಿಕರನ್ನಾಗಿಯೂ ಮಾಡಿಕೊಳ್ಳುವನು. ಅವರು ಅವನ ರಥಸೈನ್ಯದಲ್ಲಿಯೂ ಅಶ್ವಸೈನ್ಯದಲ್ಲಿಯೂ ಸೇರಿ ಹೋರಾಡಬೇಕಾಗುತ್ತದೆ. ನಿನ್ನ ಮಕ್ಕಳು ರಾಜನ ರಥದ ಮುಂದೆ ಓಡುವ ಬೆಂಗಾವಲಿನವರಾಗಬೇಕಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಅವನು, “ನಿಮ್ಮನ್ನು ಆಳುವ ಅರಸನ ಅಧಿಕಾರವು ಏನೆಂದರೆ, ಅವನು ನಿಮ್ಮ ಪುತ್ರರನ್ನು ತನ್ನ ರಥಗಳಿಗೋಸ್ಕರ ಸಾರಥಿಗಳನ್ನಾಗಿಯೂ ಕುದುರೆ ಸವಾರರನ್ನಾಗಿಯೂ ತೆಗೆದುಕೊಳ್ಳುವನು. ಕೆಲವರು ಅವನ ರಥಗಳ ಮುಂದೆ ಓಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 8:11
14 ತಿಳಿವುಗಳ ಹೋಲಿಕೆ  

ಸೌಲನ ಜೀವಮಾನದಲ್ಲೆಲ್ಲಾ ಫಿಲಿಷ್ಟಿಯರಿಗೂ ಇಸ್ರಯೇಲರಿಗೂ ಘೋರ ಯುದ್ಧ ಇದ್ದುದರಿಂದ ಅವನು ಎಲ್ಲಿಯಾದರೂ ಒಬ್ಬ ಬಲಿಷ್ಠನೂ ಪರಾಕ್ರಮಶಾಲಿಯೂ ಆದ ಮನುಷ್ಯನನ್ನು ಕಂಡಕೂಡಲೆ, ಅವನನ್ನು ತನ್ನ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಿದ್ದನು.


ತರುವಾಯ ಸಮುವೇಲನು ಜನರಿಗೆ ರಾಜನೀತಿಯನ್ನು ಬೋಧಿಸಿ, ಅದನ್ನು ಒಂದು ಪುಸ್ತಕದಲ್ಲಿ ಬರೆದು, ಸರ್ವೇಶ್ವರನ ಸನ್ನಿಧಿಯಲ್ಲಿಟ್ಟನು; ಆಮೇಲೆ ಜನರನ್ನು ಅವರವರ ಮನೆಗಳಿಗೆ ಕಳುಹಿಸಿಬಿಟ್ಟನು.


ಸ್ವಲ್ಪಕಾಲವಾದನಂತರ ಅಬ್ಷಾಲೋಮನು ತನ್ನ ಮುಂದೆ ಮೈಗಾವಲಾಗಿ ಓಡುವುದಕ್ಕೆ ಐವತ್ತು ಮಂದಿ ಆಳುಗಳನ್ನು ನೇಮಿಸಿದನು. ಅದಕ್ಕಾಗಿ ಒಂದು ರಥವನ್ನೂ ಕುದುರೆಗಳನ್ನೂ ಪಡೆದುಕೊಂಡನು.


ಸೊಲೊಮೋನನು ರಥಗಳನ್ನೂ ರಾಹುತರನ್ನೂ ಸಂಗ್ರಹಿಸುತ್ತಿದ್ದನು. ಅವನ ರಥಗಳು ಸಾವಿರದ ನಾನೂರು; ರಾಹುತರು ಹನ್ನೆರಡು ಸಾವಿರ. ಇವುಗಳಲ್ಲಿ ಕೆಲವನ್ನು ಜೆರುಸಲೇಮಿನಲ್ಲಿ ತನ್ನ ಬಳಿಯಲ್ಲೇ ಇರಿಸಿದ್ದನು; ಉಳಿದವುಗಳನ್ನು ರಥಗಳಿಗಾಗಿಯೇ ನೇಮಿಸಿದ್ದ ಪಟ್ಟಣಗಳಲ್ಲಿ ಇರಿಸಿದ್ದನು.


ಸರ್ವೇಶ್ವರನ ಹಸ್ತ ಎಲೀಯನ ಸಂಗಡ ಇದ್ದುದರಿಂದ ಅವನು ನಡುಕಟ್ಟಿಕೊಂಡು ಅಹಾಬನ ಮುಂದೆ ಓಡುತ್ತಾ ಜೆಸ್ರೀಲನ್ನು ಸೇರಿದನು.


ಅವರು ಅವನಿಗೆ, “ನಿಮ್ಮ ತಂದೆ ನಮ್ಮ ಮೇಲೆ ಹೇರಿರುವ ನೊಗವನ್ನು ಹಗುರ ಮಾಡು ಎಂದು ನಿಮ್ಮನ್ನು ಬೇಡಿಕೊಂಡ ಜನರಿಗೆ ನೀವು, ‘ನನ್ನ ತಂದೆಯ ಸೊಂಟಕ್ಕಿಂತ ನನ್ನ ಈ ಕಿರಿಬೆರಳು ದಪ್ಪ;


“ನಿಮ್ಮ ತಂದೆ ನಮ್ಮ ಮೇಲೆ ಭಾರವಾದ ನೊಗವನ್ನು ಹೇರಿದ್ದರು; ಅವರು ನೇಮಿಸಿದ್ದ ಬಿಟ್ಟೀ ಕೆಲಸವನ್ನು ನೀನು ಕಡಿಮೆಮಾಡಿ, ನಮ್ಮ ಮೇಲಿರುವ ಭಾರವನ್ನು ಹಗುರಮಾಡುವುದಾದರೆ ನಾವು ನಿನಗೆ ಸೇವೆಮಾಡುತ್ತೇವೆ,” ಎಂದನು.


ಈಗಾಗಲೇ ಅಬ್ಷಾಲೋಮನು ಸತ್ತುಹೋಗಿದ್ದನು. ದಾವೀದನಿಗೆ ಹಗ್ಗೀತಳಲ್ಲಿ ಹುಟ್ಟಿದ ಅದೋನಿಯನೇ ಜೀವದಿಂದ ಉಳಿದವರಲ್ಲಿ ಹಿರಿಯ ಮಗ. ಅವನು ಬಹಳ ಸುಂದರನು. ದಾವೀದನು ಯಾವುದೇ ವಿಷಯದಲ್ಲಿ ಅವನನ್ನು ಎಂದೂ ಗದರಿಸಿರಲಿಲ್ಲ. ತಾನೇ ರಾಜನಾಗಬೇಕೆಂಬ ಆಕಾಂಕ್ಷೆ ಅವನದು. ಎಂದೇ ತನಗೋಸ್ಕರ ರಥ, ರಥಾಶ್ವಗಳನ್ನು ಹಾಗು ಐವತ್ತು ಮಂದಿ ಬೆಂಗಾವಲಿಗರನ್ನು ನೇಮಿಸಿಕೊಂಡಿದ್ದನು.


ನೀನು ಈಗ ಅವರು ಕೇಳಿಕೊಂಡಂತೆ ಮಾಡು; ಆದರೆ ಅವರ ಮೇಲೆ ರಾಜರಿಗಿರುವ ಅಧಿಕಾರ ಎಷ್ಟು ಘನವಾದುದೆಂಬುದನ್ನು ಅವರಿಗೆ ತಿಳಿಸಿ ಎಚ್ಚರಿಸದೆ ಇರಬೇಡ,” ಎಂದು ಹೇಳಿದರು.


ಅರಸ ರೆಹಬ್ಬಾಮನು ಅವುಗಳಿಗೆ ಬದಲಾಗಿ ತಾಮ್ರದ ಗುರಾಣಿಗಳನ್ನು ಮಾಡಿಸಿ ಅವುಗಳನ್ನು ಅರಮನೆಯ ದ್ವಾರಪಾಲಕರಾಗಿದ್ದ ಮೈಗಾವಲಿನವರ ದಳವಾಯಿಗಳಿಗೆ ಒಪ್ಪಿಸಿದ್ದನು.


ಆಗ ಅವನು ತನ್ನ ಸುತ್ತಲೂ ನಿಂತಿದ್ದ ಪರಿವಾರದವರಿಗೆ, “ಬೆನ್ಯಾಮೀನನ ಕುಲಪುತ್ರರೇ ಕೇಳಿ; ನೀವೆಲ್ಲರೂ ನನಗೆ ವಿರೋಧವಾಗಿ ಒಳಸಂಚು ಮಾಡುವುದೇಕೆ? ಜೆಸ್ಸೆಯನ ಮಗನು ನಿಮ್ಮೆಲ್ಲರಿಗೂ ಹೊಲಗಳನ್ನೂ ದ್ರಾಕ್ಷಿತೋಟಗಳನ್ನೂ ಕೊಡುತ್ತಾನೆಯೇ? ಎಲ್ಲರನ್ನು ಸಹಸ್ರಾಧಿಪತಿಗಳನ್ನಾಗಲಿ, ಶತಾಧಿಪತಿಗಳನ್ನಾಗಲಿ ಮಾಡುತ್ತಾನೆಯೆ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು