Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 7:6 - ಕನ್ನಡ ಸತ್ಯವೇದವು C.L. Bible (BSI)

6 ಅಂತೆಯೇ ಅವರು ಅಲ್ಲಿ ಕೂಡಿಬಂದು, ನೀರು ಸೇದಿ ಸರ್ವೇಶ್ವರನ ಮುಂದೆ ಹೊಯ್ದು, ಆ ದಿವಸ ಉಪವಾಸವಿದ್ದು, ದ್ರೋಹಿಗಳಾಗಿದ್ದೇವೆಂದು ಸರ್ವೇಶ್ವರನಿಗೆ ಅರಿಕೆಮಾಡಿದರು. ಸಮುವೇಲನು ಮಿಚ್ಪೆಯಲ್ಲಿ ಇಸ್ರಯೇಲರ ವ್ಯಾಜ್ಯಗಳನ್ನು ತೀರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಅವರು ಅಲ್ಲಿ ಕೂಡಿಬಂದು, ನೀರು ಸೇದಿ, ಯೆಹೋವನ ಮುಂದೆ ಹೊಯ್ದು, ಆ ದಿನ ಉಪವಾಸವಿದ್ದು, “ನಾವು ನಿನಗೆ ದ್ರೋಹಿಗಳಾಗಿದ್ದೇವೆ” ಎಂದು ಯೆಹೋವನಿಗೆ ಅರಿಕೆಮಾಡಿದರು. ಆನಂತರ ಸಮುವೇಲನು ನ್ಯಾಯಪಾಲಕನಾಗಿದ್ದು, ಮಿಚ್ಪೆಯಲ್ಲಿ ಇಸ್ರಾಯೇಲ್ಯರ ವ್ಯಾಜ್ಯಗಳನ್ನು ತೀರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

6 ಅವರು ಅಲ್ಲಿ ಕೂಡಿಬಂದು ನೀರು ಸೇದಿ ಯೆಹೋವನ ಮುಂದೆ ಹೊಯ್ದು ಆ ದಿವಸ ಉಪವಾಸವಿದ್ದು - ನಿನಗೆ ದ್ರೋಹಿಗಳಾಗಿದ್ದೇವೆಂದು ಆತನಿಗೆ ಅರಿಕೆ ಮಾಡಿದರು. ಸಮುವೇಲನು ವಿುಚ್ಪೆಯಲ್ಲಿ ಇಸ್ರಾಯೇಲ್ಯರ ವ್ಯಾಜ್ಯಗಳನ್ನು ತೀರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

6 ಇಸ್ರೇಲರೆಲ್ಲರು ಮಿಚ್ಪೆಯಲ್ಲಿ ಒಟ್ಟುಗೂಡಿದರು. ಅವರು ನೀರನ್ನು ತೆಗೆದುಕೊಂಡು ಬಂದು ಯೆಹೋವನ ಮುಂದೆ ಅದನ್ನು ಸುರಿದರು. ಈ ರೀತಿ ಅಂದು ಅವರು ಉಪವಾಸವನ್ನು ಆರಂಭಿಸಿದರು. ಅಂದು ಅವರು ಯಾವ ಆಹಾರವನ್ನೂ ತೆಗೆದುಕೊಳ್ಳಲಿಲ್ಲ. ಅಲ್ಲದೆ ಅವರು ತಮ್ಮ ಪಾಪಗಳನ್ನು ಅರಿಕೆ ಮಾಡಿದರು. “ನಾವು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇವೆ” ಎಂದು ಅವರು ಹೇಳಿದರು. ಹೀಗಿರಲು, ಸಮುವೇಲನು ಇಸ್ರೇಲರ ನ್ಯಾಯಾಧೀಶನಾಗಿ ಮಿಚ್ಪೆಯಲ್ಲಿ ಸೇವೆ ಸಲ್ಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

6 ಅವರೆಲ್ಲರು ಮಿಚ್ಪೆಯಲ್ಲಿ ಒಟ್ಟಾಗಿ ಕೂಡಿಬಂದು, ಯೆಹೋವ ದೇವರ ಮುಂದೆ ನೀರು ತಂದು ಹೊಯ್ದು, ಆ ದಿವಸದಲ್ಲಿ ಉಪವಾಸ ಮಾಡಿ, “ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿದ್ದೇವೆ” ಎಂದು ಅಲ್ಲಿ ಹೇಳಿದರು. ಸಮುಯೇಲನು ಇಸ್ರಾಯೇಲರಿಗೆ ಮಿಚ್ಪೆಯಲ್ಲಿ ನ್ಯಾಯ ತೀರಿಸುತ್ತಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 7:6
47 ತಿಳಿವುಗಳ ಹೋಲಿಕೆ  

ನೆಲದ ಮೇಲೆ ಚೆಲ್ಲಿ ತಿರುಗಿ ತುಂಬಿಕೊಳ್ಳಲಾಗದ ನೀರಿನಂತೆ ಇದ್ದೇವೆ ನಾವು. ಮನುಷ್ಯರ ಪ್ರಾಣತೆಗೆಯುವುದಕ್ಕೆ ದೇವರಿಗೆ ಇಷ್ಟ ಇಲ್ಲ; ಹೊರದೂಡಲಾದವನು ತಿರುಗಿ ಬಳಿಗೆ ಬರುವ ಹಾಗೆ ಅವರು ಸದುಪಾಯಗಳನ್ನು ಕಲ್ಪಿಸುವವರಾಗಿರುತ್ತಾರೆ.


ಆಕೆ, “ಇಲ್ಲ ಸ್ವಾಮಿ, ನಾನು ಕುಡಿದಿಲ್ಲ, ನಾನು ಬಹಳ ದುಃಖಪೀಡಿತಳು; ದ್ರಾಕ್ಷಾರಸವನ್ನಾಗಲಿ ಬೇರೆ ಯಾವ ಮದ್ಯವನ್ನಾಗಲಿ ಕುಡಿದವಳಲ್ಲ. ನನ್ನ ಮನೋವೇದನೆಯನ್ನು ಸರ್ವೇಶ್ವರನ ಮುಂದೆ ತೋಡಿಕೊಳ್ಳುತ್ತಾ ಇದ್ದೇನೆ.


ಆಗ ಅವರು ಸರ್ವೇಶ್ವರನಿಗೆ, “ನಾವು ನಮ್ಮ ದೇವರಾದ ನಿಮ್ಮನ್ನು ಬಿಟ್ಟು ಬಾಳನ ಪ್ರತಿಮೆಗಳನ್ನು ಪೂಜಿಸಿ ನಿಮಗೆ ವಿರುದ್ಧವಾಗಿ ಪಾಪಮಾಡಿದ್ದೇವೆ,” ಎಂದು ಮೊರೆಯಿಟ್ಟರು.


ಸರ್ವೇಶ್ವರ ಇಂತೆನ್ನುತ್ತಾರೆ: “ಈಗಲಾದರೂ ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಳ್ಳಿ. ಉಪವಾಸ ಕೈಗೊಂಡು, ಅತ್ತು ಗೋಳಾಡಿ.”


ನನ್ನ ತಲೆ ಒಂದು ಚಿಲುಮೆಯಾಗಿರಬಾರದಿತ್ತೆ? ನನ್ನ ಕಣ್ಣು ಒಂದು ಒರತೆಯಾಗಿರಬಾರದಿತ್ತೆ? ಆಗ ನನ್ನ ಜನರಲ್ಲಿ ಹತರಾದವರಿಗಾಗಿ ಹಗಲಿರುಳು ಅಳುತ್ತಿದ್ದೆ.


ನಮ್ಮ ಪಿತೃಗಳಂತೆಯೆ ಪಾಪಿಗಳು ನಾವು I ಅಕ್ರಮಗೈದೆವು, ಅಪರಾಧಿಗಳಾದೆವು II


ಜನರೇ, ಸದಾ ಭರವಸೆ ಇಡಿ ದೇವನಲಿ I ತೋಡಿಕೊಳ್ಳಿ ನಿಮ್ಮ ಅಳಲನು ಆತನಲಿ II


ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ;


ನಿನ್ನ ಶಾಸ್ತ್ರವನು ಜನ ಪಾಲಿಸದ ಕಾರಣ I ಹರಿಯುತ್ತಿದೆ ಧಾರೆಯಾಗಿ ನನ್ನ ಕಣ್ಕಣ II


ಅವರು ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಪಶ್ಚಾತ್ತಾಪಪಟ್ಟು,


“ನರಪುತ್ರನೇ, ಇವರಿಗೆ ನ್ಯಾಯತೀರಿಸಲು ನೀನೂ ಮನಸ್ಸು ಮಾಡಿರುವೆಯಾ? ಇವರ ಪಿತೃಗಳ ದುರಾಚಾರಗಳನ್ನು ಇವರಿಗೆ ಹೀಗೆ ತಿಳಿಸು -


“ಸರ್ವೇಶ್ವರನು ಪರಲೋಕದಿಂದ ಕಟಾಕ್ಷಿಸಿ ನೋಡುವವರೆಗೂ


ಕಂಬನಿಗರೆದು ಇಂಗಿಹೋಗಿದೆ ಕಣ್ಣು ಕುದಿಯುತ್ತಿದೆ ನನ್ನೊಳಗೆ ಕರುಳು ! ನನ್ನ ಜನತೆಯೆಂಬ ಯುವತಿ ಹಾಳಾಗಿ ಮಕ್ಕಳು ಹಾದಿಬೀದಿಗಳಲ್ಲಿ ಮೂರ್ಛೆಹೋಗಿ ನನ್ನ ಕರುಳು ಕರಗಿಹೋಗಿದೆ ನೀರಾಗಿ.


ತಿರುಗಿಸಲ್ಪಟ್ಟ ಮೇಲೆಯೆ ನಾನು ಪಶ್ಚಾತ್ತಾಪ ಪಟ್ಟೆ ತಿಳುವಳಿಕೆ ಹೊಂದಿದ ಮೇಲೆಯೆ ಕೆನ್ನೆಗೆ ಹಾಕಿಕೊಂಡೆ ನನ್ನ ಯೌವನ ನಡತೆ ನನಗೆ ಅವಮಾನದ ಹೊರೆ ಈ ಕಾರಣ ಲಜ್ಜೆಗೊಂಡೆ. ಹೌದು, ನಾಚಿಕೆಯಿಂದ ತಲೆತಗ್ಗಿಸಿದೆ’.”


“ಎಲ್ಲಿ? ನಿನ್ನ ದೇವನೆಲ್ಲಿ?” ಎಂದು ಜನ ಜರೆಯುತಿರಲು I ಕಂಬನಿಯೆ ನನಗನ್ನಪಾನವಾಗಿಹುದು ಹಗಲಿರುಳು II


ದಣಿದಿರುವೆ ನಾ ದುಃಖದಿಂದ ನರಳಿ ನರಳಿ I ತೊಯ್ದಿದೆ ಹಾಸಿಗೆ ಇರುಳಿರುಳ ಕಂಬನಿಯಲಿ I ತೇಲಿದೆ ಮಂಚ ಈ ಕಣ್ಣೀರ ಪ್ರವಾಹದಲಿ II


ಆದುದರಿಂದ ನಾನು ಹೇಳಿದ್ದೆಲ್ಲಕ್ಕಾಗಿ ವಿಷಾದಿಸುತ್ತೇನೆ ಬೂದಿಯಲು, ಧೂಳಿನಲು ಕುಳಿತು ಪಶ್ಚಾತ್ತಾಪಪಡುತ್ತೇನೆ.”


“ಅಯ್ಯೋ, ನಾನು ಅಲ್ಪನೇ ಸರಿ ತಮಗೇನು ಪ್ರತ್ಯುತ್ತರ ಹೇಳಲಿ? ಬಾಯ ಮೇಲೆ ಕೈಯಿಡುವೆ ಮೌನತಾಳಿ.


ಆಗ ಅವನು ಜನರ ಮುಂದೆ ಈ ಪರಿ ಹಾಡುವನು: ‘ಪಾಪ ಮಾಡಿದೆ; ಸನ್ಮಾರ್ಗ ಬಿಟ್ಟು ನಡೆದೆ ಆದರೂ ದಂಡಿಸಲಿಲ್ಲ ದೇವರು ನನ್ನ ಪಾಪಕ್ಕೆ ತಕ್ಕಂತೆ.


ಗೆಳೆಯರು ನನ್ನನ್ನು ಹೀಗಳೆಯುತ್ತಿರುವರು ನಾನೋ ಸುರಿಸುತ್ತಿರುವೆ ದೇವರ ಮುಂದೆ ಕಣ್ಣೀರು.


ಎಂದೇ ನೀವಿತ್ತಿರಿ ಅವರನು ಕ್ರೂರ ಶತ್ರುಗಳ ವಶಕೆ ಆದರೆ ಸಂಕಟದಲಿ ಮೊರೆಯಿಡಲು, ಪರದಿಂದ ಕಿವಿಗೊಟ್ಟಿರವರಿಗೆ! ರಕ್ಷಕರನು ಕಳುಹಿಸಿದಿರಿ ಕರುಣಾತಿಶಯದಿಂದ ಈ ಪರಿ ಬಿಡಿಸಿದಿರಿ ವಿರೋಧಿಗಳ ಕೈಯಿಂದ.


ಯೆಹೋಷಾಫಾಟನು ಇದನ್ನು ಕೇಳಿ ಭಯಪಟ್ಟು, ಸರ್ವೇಶ್ವರನನ್ನೇ ಆಶ್ರಯಿಸಿಕೊಳ್ಳಬೇಕೆಂದು ನಿರ್ಣಯಿಸಿಕೊಂಡನು. ಯೆಹೂದ್ಯರೆಲ್ಲರೂ ಉಪವಾಸಮಾಡಬೇಕೆಂದು ಪ್ರಕಟಿಸಿದನು.


ಸರ್ವೇಶ್ವರನ ಆತ್ಮ ಅವನ ಮೇಲೆ ಬಂದುದರಿಂದ ಅವನು ಇಸ್ರಯೇಲರಿಗೆ ನ್ಯಾಯ ದೊರಕಿಸಲು ಯುದ್ಧಕ್ಕೆ ಹೊರಟನು. ಎರಡು ನದಿಗಳ ಮಧ್ಯೆಯಿರುವ ಅರಾಮ್ ರಾಜ್ಯದ ಅರಸ ಕೂಷನ್ ರಿಷಾತಯಿಮನನ್ನು ಸರ್ವೇಶ್ವರ ಆತನ ಕೈಗೊಪ್ಪಿಸಿದ್ದರಿಂದ ಅವನನ್ನು ಸಂಪೂರ್ಣವಾಗಿ ಸೋಲಿಸಿಬಿಟ್ಟನು.


“ಆದರೆ ಅವರು ತಾವೂ ತಮ್ಮ ಪಿತೃಗಳೂ ನನಗೆ ದ್ರೋಹಿಗಳಾಗಿ ಪಾಪ ಮಾಡಿದವರೆಂದು ಒಪ್ಪಿಕೊಂಡು, ನನಗೆ ವಿರೋಧವಾಗಿ ನಡೆದದ್ದರಿಂದಲೇ


ಅಂತೆಯೇ ಲಾಬಾನನು, “ನಾವು ಒಬ್ಬರನ್ನೊಬ್ಬರು ಬಿಟ್ಟು ಅಗಲಿದಾಗಲು ಸರ್ವೇಶ್ವರ ನಮ್ಮಿಬ್ಬರನ್ನೂ ನೋಡಿಕೊಳ್ಳುತ್ತಾ ಇರಲಿ” ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ ‘ಮಿಚ್ಪಾ’ ಎಂದು ಹೆಸರಾಯಿತು.


ಇದು ನಿಮಗೆ ಶಾಶ್ವತವಾದ ನಿಯಮ: ಸ್ವದೇಶೀಯರಾದ ನೀವೂ ನಿಮ್ಮಲ್ಲಿ ವಾಸಮಾಡುವ ಅನ್ಯದೇಶದವರೆಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನ ಸಕಲ ವಿಧವಾದ ದುಡಿಮೆಗಳನ್ನೂ ಬಿಟ್ಟು ತಮ್ಮನ್ನೇ ಪರಿತ್ಯಜಿಸಿಕೊಳ್ಳಬೇಕು.


ಸಮುವೇಲನು ಜೀವದಿಂದಿರುವವರೆಗೆ ಇಸ್ರಯೇಲರನ್ನು ಪಾಲಿಸುತ್ತಿದ್ದನು.


ಯೋಷೀಯನ ಮಗನೂ ಜುದೇಯದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಐದನೆಯ ವರ್ಷದ ಒಂಬತ್ತನೆಯ ಒಂಬತ್ತನೆಯ ತಿಂಗಳಲ್ಲಿ ಜೆರುಸಲೇಮಿನವರೆಲ್ಲರು ಹಾಗು ಜುದೇಯದ ಊರುಗಳಿಂದ ಜೆರುಸಲೇಮಿಗೆ ಬಂದಿದ್ದವರೆಲ್ಲರು ಸರ್ವೇಶ್ವರನ ಸಮ್ಮುಖದಲ್ಲಿ ಉಪವಾಸವ್ರತವನ್ನು ಗೊತ್ತುಮಾಡಿ ಪ್ರಕಟಿಸಿದ್ದರು.


ಮಿಚ್ಫೆ, ಕೆಫೀರಾ, ಮೋಚಾ, ರೆಕೆಮ್, ಇರ್ಪೇಲ್, ತರಲಾ, ಚೇಲ,‌


ಸರ್ವೇಶ್ವರನ ದೂತನು ಹೇಳಿದ ಈ ಮಾತುಗಳನ್ನು ಕೇಳಿ ಇಸ್ರಯೇಲರೆಲ್ಲರು ಗಟ್ಟಿಯಾಗಿ ಅತ್ತರು.


ಇಸ್ರಯೇಲರು ಮರಳಿ ಸರ್ವೇಶ್ವರನಿಗೆ, “ಪಾಪ ಮಾಡಿದ್ದೇವೆ; ನಿಮಗೆ ಸರಿ ತೋರಿದಂತೆ ನಮಗೆ ಮಾಡಿ; ಆದರೆ ಈ ಸಾರಿ ಹೇಗೂ ನಮ್ಮನ್ನು ರಕ್ಷಿಸಬೇಕು,” ಎಂದು ಮೊರೆಯಿಟ್ಟರು. ಅನ್ಯದೇವತೆಗಳನ್ನು ಹೊರಗೆ ಹಾಕಿ ಸರ್ವೇಶ್ವರನನ್ನು ಪೂಜಿಸತೊಡಗಿದರು.


(ಇಸ್ರಯೇಲರು ಹೋಗಿ ಸರ್ವೇಶ್ವರನ ಮುಂದೆ ದುಃಖಿಸುತ್ತಾ, “ನಾವು ನಮ್ಮ ಬಂಧುಗಳಾದ ಬೆನ್ಯಾಮೀನ್ಯರೊಡನೆ ಯುದ್ಧಮಾಡಬೇಕೆ?” ಎಂದು ಕೇಳಲು ಅವರು, “ಹೋಗಿ ಯುದ್ಧಮಾಡಿ,” ಎಂದರು.


ಆಗ ಎಲ್ಲ ಜನರು ಬೇತೇಲಿಗೆ ಹೋಗಿ ಅಲ್ಲಿ ಸರ್ವೇಶ್ವರನ ಮುಂದೆ ಅಳುತ್ತಾ ಕುಳಿತು, ಸಾಯಂಕಾಲದವರೆಗೆ ಉಪವಾಸಮಾಡಿದರು. ಇದಲ್ಲದೆ ಅವರು ಸರ್ವೇಶ್ವರನಿಗೆ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಸಮರ್ಪಿಸಿದರು.


ಸಮುವೇಲನು ಇಸ್ರಯೇಲರನ್ನು ಮಿಚ್ಪೆಗೆ ಕರೆಯಿಸಿ ಸರ್ವೇಶ್ವರನ ಸನ್ನಿಧಿಯಲ್ಲಿ ಸಭೆ ಸೇರಿಸಿದನು.


ಆಗ ಅವರು, “ನಾವು ಸರ್ವೇಶ್ವರನಾದ ನಿಮ್ಮನ್ನು ಬಿಟ್ಟು ಬಾಳ್, ಅಷ್ಟೋರೆತ್ ಎಂಬ ದೇವತೆಗಳನ್ನು ಪೂಜಿಸಿ ಪಾಪಮಾಡಿದ್ದೇವೆ. ಈಗ ಕೃಪೆಮಾಡಿ ನಮ್ಮನ್ನು ಶತ್ರುಗಳ ಕೈಯಿಂದ ಬಿಡಿಸಿರಿ; ನಾವು ಇನ್ನು ಮುಂದೆ ನಿಮ್ಮನ್ನೇ ಪೂಜಿಸಿ, ಸೇವೆಮಾಡುತ್ತೇವೆ,” ಎಂದು ಮೊರೆಯಿಟ್ಟರು.


ಪ್ರಸಿದ್ಧರಾದ ಮೂವರು ರಣವೀರರು ಫಿಲಿಷ್ಟಿಯರ ಪಾಳೆಯವನ್ನು ಹಾದುಹೋಗಿ ಬಾವಿಯಿಂದ ನೀರನ್ನು ಸೇದಿಕೊಂಡು ದಾವೀದನಿಗೆ ತಂದುಕೊಟ್ಟರು. “ನಾನು ಈ ನೀರನ್ನು ಎಂದೆಂದಿಗೂ ಕುಡಿಯಬಾರದು. ಇದನ್ನು ಕುಡಿದರೆ, ತಮ್ಮ ಪ್ರಾಣಗಳನ್ನೇ ಪಣವಾಗಿಟ್ಟ ಈ ಮೂವರ ರಕ್ತವನ್ನು ಕುಡಿದಂತಾಗುವುದು,” ಎಂದು ಹೇಳಿ,


ನಿಟ್ಟುಸಿರೇ ನನ್ನ ಮುಂದಿರುವ ಊಟ ಜಲಧಾರೆಯಂತಿದೆ ನನ್ನ ನರಳಾಟ.


ನಮ್ಮ ಕಿರೀಟ ಬಿದ್ದುಹೋಗಿದೆ ತಲೆಮೇಲಿಂದ ಈ ಕೇಡೆಲ್ಲಾ ಬಂದೊದಗಿದೆ ನಮ್ಮ ಪಾಪದ ನಿಮಿತ್ತ.


“ಯಾಜಕರೇ, ಕೇಳಿ: ಇಸ್ರಯೇಲ್ ಮನೆತನದವರೇ, ಗಮನಿಸಿ. ರಾಜವಂಶದವರೇ ಕಿವಿಗೊಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು