Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 4:3 - ಕನ್ನಡ ಸತ್ಯವೇದವು C.L. Bible (BSI)

3 ಇಸ್ರಯೇಲರು ತಮ್ಮ ಪಾಳೆಯಕ್ಕೆ ಹಿಂದಿರುಗಿದ ಮೇಲೆ ಅವರೊಡನೆ ಅವರ ಹಿರಿಯರು, “ಸರ್ವೇಶ್ವರ ಈ ದಿನ ನಮ್ಮನ್ನು ಫಿಲಿಷ್ಟಿಯರಿಂದ ಅಪಜಯಪಡಿಸಿದ್ದೇಕೆ? ಶಿಲೋವಿನಿಂದ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ತರೋಣ; ಅವರು ನಮ್ಮ ಮಧ್ಯದಲ್ಲಿ ಬಂದು ಶತ್ರುಗಳ ಕೈಯಿಂದ ನಮ್ಮನ್ನು ರಕ್ಷಿಸಲಿ,” ಎಂದು ಸಮಾಲೋಚಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಇಸ್ರಾಯೇಲರು ತಮ್ಮ ಪಾಳೆಯಕ್ಕೆ ಹಿಂದಿರುಗಿದ ಮೇಲೆ ಅವರ ಹಿರಿಯರು ಅವರಿಗೆ, “ಯೆಹೋವನು ಈ ಹೊತ್ತು ನಮ್ಮನ್ನು ಫಿಲಿಷ್ಟಿಯರಿಂದ ಅಪಜಯಪಡಿಸಿದ್ದೇಕೆ? ಶೀಲೋವಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರಿಸೋಣ; ಆತನು ನಮ್ಮ ಮಧ್ಯದಲ್ಲಿ ಬಂದು ಶತ್ರುಗಳ ಕೈಯಿಂದ ನಮ್ಮನ್ನು ತಪ್ಪಿಸಲಿ” ಎಂದು ಆಲೋಚನೆ ಹೇಳಿದ್ದರಿಂದ ಅವರು ಜನರನ್ನು ಕಳುಹಿಸಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಇಸ್ರಾಯೇಲ್ಯರು ತಮ್ಮ ಪಾಳೆಯಕ್ಕೆ ಹಿಂದಿರುಗಿದ ಮೇಲೆ ಅವರ ಹಿರಿಯರು ಅವರಿಗೆ - ಯೆಹೋವನು ಈ ಹೊತ್ತು ನಮ್ಮನ್ನು ಫಿಲಿಷ್ಟಿಯರಿಂದ ಅಪಜಯಪಡಿಸಿದ್ದೇಕೆ? ಶೀಲೋವಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರಿಸೋಣ; ಆತನು ನಮ್ಮ ಮಧ್ಯದಲ್ಲಿ ಬಂದು ಶತ್ರುಗಳ ಕೈಗೆ ನಮ್ಮನ್ನು ತಪ್ಪಿಸಲಿ ಎಂದು ಆಲೋಚನೆ ಹೇಳಿದ್ದರಿಂದ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಇಸ್ರೇಲರ ಸೈನಿಕರು ಪಾಳೆಯಕ್ಕೆ ಹಿಂದಿರುಗಿದರು. ಇಸ್ರೇಲರ ಹಿರಿಯರು, “ಫಿಲಿಷ್ಟಿಯರು ನಮ್ಮನ್ನು ಸೋಲಿಸಲು ಯೆಹೋವನು ಅವಕಾಶ ನೀಡಿದ್ದೇಕೆ? ಶೀಲೋವಿನಿಂದ ಯೆಹೋವನ ಪವಿತ್ರ ಒಡಂಬಡಿಕೆಯ ಪೆಟ್ಟಿಗೆಯನ್ನು ತರಿಸೋಣ. ಈ ರೀತಿ ದೇವರು ನಮ್ಮೊಂದಿಗೆ ಯುದ್ಧರಂಗಕ್ಕೆ ಬರಲಿ. ಆತನು ನಮ್ಮನ್ನು ಶತ್ರುಗಳಿಂದ ರಕ್ಷಿಸುತ್ತಾನೆ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಜನರು ಪಾಳೆಯಕ್ಕೆ ಬಂದಾಗ ಇಸ್ರಾಯೇಲಿನ ಹಿರಿಯರು, “ಈ ಹೊತ್ತು ಯೆಹೋವ ದೇವರು ಫಿಲಿಷ್ಟಿಯರ ಮುಂದೆ ನಮ್ಮನ್ನು ಹೊಡೆಸಿದ್ದೇನು? ಯೆಹೋವ ದೇವರ ಒಡಂಬಡಿಕೆಯ ಮಂಜೂಷವು ನಮ್ಮಲ್ಲಿದ್ದು ನಮ್ಮನ್ನು ನಮ್ಮ ಶತ್ರುಗಳಿಂದ ತಪ್ಪಿಸಿ ರಕ್ಷಿಸುವ ಹಾಗೆ, ನಾವು ಅದನ್ನು ಶೀಲೋವಿನಿಂದ ತರಿಸೋಣ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 4:3
34 ತಿಳಿವುಗಳ ಹೋಲಿಕೆ  

ಇದನ್ನೆಲ್ಲಾ ನೀವು ಈಗಾಗಲೇ ಚೆನ್ನಾಗಿ ಅರಿತವರಾಗಿದ್ದೀರಿ. ಆದರೂ ಕೆಲವು ವಿಷಯಗಳನ್ನು ನಿಮ್ಮ ನೆನಪಿಗೆ ತರಲು ಬಯಸುತ್ತೇನೆ: ದೇವರು ತಮ್ಮ ಪ್ರಜೆಗಳನ್ನು ಈಜಿಪ್ಟ್ ದೇಶದಿಂದ ಬಿಡುಗಡೆಮಾಡಿದರು; ವಿಶ್ವಾಸವಿಡದವರನ್ನು ಅನಂತರ ಅವರೇ ನಾಶಮಾಡಿದರು.


ಇದು ದೀಕ್ಷಾಸ್ನಾನವನ್ನು ಸೂಚಿಸುವ ಒಂದು ಸಂಕೇತ. ಈ ದೀಕ್ಷಾಸ್ನಾನ ಯೇಸುಕ್ರಿಸ್ತರ ಪುನರುತ್ಥಾನದ ಮೂಲಕ ನಿಮಗೆ ಜೀವೋದ್ಧಾರವನ್ನು ನೀಡುತ್ತದೆ. ಇದು ಕೇವಲ ದೇಹದ ಮಾಲಿನ್ಯವನ್ನು ಹೋಗಲಾಡಿಸುವಂಥಾದ್ದಲ್ಲ; ಶುದ್ಧಮನಸ್ಸಿನಿಂದ ದೇವರಿಗೆ ಮಾಡುವ ಪ್ರಮಾಣ ವಚನವಾಗಿದೆ.


ಗರ್ಭಗುಡಿಯಲ್ಲಿ ಚಿನ್ನದ ಧೂಪಾರತಿ ಮತ್ತು ಚಿನ್ನದ ತಗಡನ್ನು ಸುತ್ತಲೂ ಹೊದಿಸಿದ್ದ ಒಡಂಬಡಿಕೆಯ ಮಂಜೂಷ ಇದ್ದವು. ಈ ಮಂಜೂಷದಲ್ಲಿ ಮನ್ನವನ್ನು ಇಟ್ಟಿದ್ದ ಚಿನ್ನದ ಪಾತ್ರೆ ಆರೋನನ ಚಿಗುರಿದ ಕೋಲು ಮತ್ತು ಒಡಂಬಡಿಕೆಯ ಶಿಲಾಶಾಸನಗಳು ಇದ್ದವು.


ಅವರು ಭಕ್ತಿಯ ವೇಷ ಧರಿಸಿದ್ದರೂ ಅದರ ನಿಜವಾದ ಶಕ್ತಿಯನ್ನು ಅಲ್ಲಗಳೆಯುವರು. ಇಂಥವರ ಸಹವಾಸ ನಿನಗೆ ಬೇಡ.


‘ಇದು ಸರ್ವೇಶ್ವರನ ಗರ್ಭಗುಡಿ, ಸರ್ವೇಶ್ವರನ ಗರ್ಭಗುಡಿ, ಸರ್ವೇಶ್ವರನ ಗರ್ಭಗುಡಿ, (ಆದುದರಿಂದ ಎಲ್ಲ ಸುಭದ್ರ)’ ಎಂಬ ಮೋಸಕರ ಮಾತುಗಳಲ್ಲಿ ಭರವಸೆ ಇಡಬೇಡಿ.


ನೀವು ನಾಡಿನಲ್ಲಿ ಹೆಚ್ಚಿ ಅಭಿವೃದ್ಧಿಯಾದಾಗ, ‘ಸರ್ವೇಶ್ವರನ ಒಡಂಬಡಿಕೆಯ ಮಂಜೂಷವೆಲ್ಲಿ?’ ಎಂದು ಪ್ರಸ್ತಾಪಿಸುವಂತಿಲ್ಲ. ಅದು ಜ್ಞಾಪಕಕ್ಕೆ ಬರುವುದಿಲ್ಲ, ಯಾರೂ ಅದನ್ನು ಸ್ಮರಿಸುವುದಿಲ್ಲ. ಅದು ಇಲ್ಲವಲ್ಲಾ ಎಂದು ದುಃಖಿಸುವುದಿಲ್ಲ. ಹೊಸದೊಂದನ್ನು ಕಲ್ಪಿಸಿಕೊಳ್ಳುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ.


“ನಾವು ಉಪವಾಸಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ? ನಮ್ಮನ್ನು ನಾವೇ ತಗ್ಗಿಸಿಕೊಂಡಿದ್ದೇವೆ, ನೀನು ಗಮನಿಸದೆ ಇರುವುದೇಕೆ?” ಎಂದುಕೊಳ್ಳುತ್ತಾರೆ.


ಸರ್ವೇಶ್ವರ ಹೀಗೆನ್ನುತ್ತಾರೆ : “ವಿವಾಹ ವಿಚ್ಛೇದನಗೈದ ಗಂಡಸಿನಂತೆ ನಾನು ನಿಮ್ಮ ಜನಾಂಗವನ್ನು ಪರಿತ್ಯಜಿಸಿದುಂಟೊ? ತನ್ನ ಮಕ್ಕಳನ್ನು ಜೀತಕ್ಕೆ ಇರಿಸುವವನಂತೆ ನಾನು ನಿಮ್ಮನ್ನು ನನ್ನ ಸಾಲಗಾರರಿಗೆ ಮಾರಿದುಂಟೊ? ಇಲ್ಲ, ನೀವು ಸೆರೆವಾಸಿಗಳಾದಿರಿ ನಿಮ್ಮ ದೋಷಗಳ ನಿಮಿತ್ತ; ನಿಮ್ಮ ತಾಯಿಯನು ಬಿಡಲಾಯಿತು ನಿಮ್ಮ ದ್ರೋಹಗಳ ನಿಮಿತ್ತ.


ಚಾಚಿದಾ ಬಲಗೈಯನೇಕೆ ಹಿಂದೆಗೆದುಕೊಂಡೆ I ಬಚ್ಚಿಟ್ಟಾ ಕೈಯಿಂದ ನೀನವರನು ಚಚ್ಚಿಬಿಡೈ II


ಹೇ ದೇವಾ, ನಮ್ಮ ನೀಪರಿ ವರ್ಜಿಸಿಬಿಟ್ಟೆ ಏಕೆ? I ನೀ ಪಾಲಿಪ ಮಂದೆಯ ಮೇಲೀಗ ಉರಿಗೋಪವೇಕೆ? II


ಆಗ ಅರಸ ದಾವೀದನು ತನ್ನ ಅರಮನೆಯಲ್ಲಿ ವಾಸಿಸುತ್ತಿದ್ದನು.


ಅರಸನು ಚಾದೋಕನಿಗೆ, “ನೀನು ದೇವರ ಒಡಂಬಡಿಕೆಯ ಮಂಜೂಷವನ್ನು ಹಿಂದಕ್ಕೆ ತೆಗೆದುಕೊಂಡುಹೋಗು; ಸರ್ವೇಶ್ವರನ ದೃಷ್ಟಿಯಲ್ಲಿ ನನಗೆ ದಯೆದೊರಕಿದರೆ ನಾನು ಅವರನ್ನೂ ಅವರ ಆಲಯವನ್ನೂ ನೋಡುವ ಹಾಗೆ ತಾವೇ ನನ್ನನ್ನು ಹಿಂದಕ್ಕೆ ಬರಮಾಡುವರು.


ಅನಂತರ ಸೌಲನು ಅಹೀಯನಿಗೆ, “’ಏಫೋದ’ನ್ನು ತೆಗೆದುಕೊಂಡು ಬಾ,” ಎಂದು ಆಜ್ಞಾಪಿಸಿದನು. (ಆ ದಿನದಂದು ಅಹೀಯನು ಇಸ್ರಯೇಲರ ಮುಂದೆ ಏಫೋದನ್ನು ಹೊತ್ತು ನಡೆಯುತ್ತಿದ್ದನು).


ಯೆಹೋಶುವನು, “ಅಯ್ಯೋ, ಸ್ವಾಮಿ ಸರ್ವೇಶ್ವರಾ, ನೀವು ಈ ಜನರನ್ನು ಜೋರ್ಡನ್ ನದಿ ದಾಟಿಸಿದ್ದೇಕೆ? ನಮ್ಮನ್ನು ಅಮೋರಿಯರ ಕೈಗೊಪ್ಪಿಸಿ ನಾಶಮಾಡಬೇಕೆಂದಿರುವಿರಾ? ನಾವು ಇಷ್ಟೇ ಸಾಕೆಂದು ಜೋರ್ಡನ್ ನದಿಯ ಆಚೆ ಕಡೆಯಲ್ಲೇ ಇದ್ದಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.


‘ಸರ್ವೇಶ್ವರನ ಒಡಂಬಡಿಕೆಯ ಮಂಜೂಷವು ಜೋರ್ಡನನ್ನು ದಾಟುವಾಗ ಅದರ ಮುಂದೆ ಜೋರ್ಡನಿನ ನೀರು ನಿಂತುಹೋಯಿತು,’ ಎಂದು ಹೇಳಿರಿ. ಅದರ ನೀರು ನಿಂತುಹೋಯಿತೆಂಬುದಕ್ಕೆ ಈ ಕಲ್ಲುಗಳು ಇಸ್ರಯೇಲರಿಗೆ ಚಿರಸ್ಮಾರಕಗಳಾಗಿರುವುವು,” ಎಂದು ಹೇಳಿದನು.


‘ಸರ್ವೇಶ್ವರ ಈ ನಾಡಿಗೆ ಹೀಗೆ ಮಾಡಿದ್ದೇಕೆ? ಇಂಥ ಕೋಪಾಗ್ನಿಗೆ ಕಾರಣ ಏನಿರಬಹುದು?’ ಎಂದು ವಿಚಾರಿಸುವರು.


ಮೋಶೆ ಇವರನ್ನು ಮಹಾಯಾಜಕನಾದ ಎಲ್ಲಾಜಾರನ ಮಗ ಫೀನೆಹಾಸನ ಮುಂದಾಳತ್ವದಲ್ಲಿ ಪವಿತ್ರ ಉಪಕರಣಗಳೊಂದಿಗೂ ಯುದ್ಧಕಹಳೆಗಳೊಂದಿಗೂ ಯುದ್ಧಕ್ಕೆ ಕಳುಹಿಸಿದನು.


ಸರ್ವೇಶ್ವರನ ಮಂಜೂಷ ಹೊರಡುವಾಗ ಮೋಶೆ, “ಹೊರಡೋಣವಾಗಲಿ ಸರ್ವೇಶ್ವರಾ, ಎಚ್ಚೆತ್ತು ಚದರಿಹೋಗಲಿ ನಿಮ್ಮ ಶತ್ರುಗಳು ಬೆಂಗೊಟ್ಟು ಓಡಿಹೋಗಲಿ ನಿಮ್ಮ ಹಗೆಗಾರರು” ಎಂದು ಹೇಳುತ್ತಿದ್ದನು.


ಅವರು ಸರ್ವೇಶ್ವರನ ಬೆಟ್ಟವನ್ನು ಬಿಟ್ಟು ಮೂರುದಿನದ ಪ್ರಯಾಣದಷ್ಟು ದೂರಹೋದರು. ಇಳಿದುಕೊಳ್ಳಲು ಸೂಕ್ತವಾದ ಸ್ಥಳವನ್ನು ನೋಡಲು ಸರ್ವೇಶ್ವರನ ಒಡಂಬಡಿಕೆಯ ಮಂಜೂಷವು ಆ ಮೂರು ದಿವಸ ಅವರಿಗೆ ಮುಂದಾಗಿ ಹೋಗುತ್ತಿತ್ತು.


ನೂನನ ಮಗ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ, “ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಹೋಗಿರಿ. ಏಳು ಮಂದಿ ಯಾಜಕರು ಕೊಂಬುಗಳನ್ನು ಹಿಡಿದುಕೊಂಡು ಸರ್ವೇಶ್ವರನ ಮಂಜೂಷದ ಮುಂದೆ ನಡೆಯಲಿ,” ಎಂದು ತಿಳಿಸಿದನು.


ಸರ್ವೇಶ್ವರಾ, ಇಸ್ರಯೇಲರು ಶತ್ರುಗಳಿಗೆ ಬೆನ್ನು ತೋರಿಸಿದ್ದಾರಲ್ಲಾ! ನಾನು ಏನು ತಾನೇ ಹೇಳಲಿ!


ಅನಂತರ ಆಕೆ ಮಗನನ್ನು ಶಿಲೋವಿನಲ್ಲಿದ್ದ ಸರ್ವೇಶ್ವರನ ಮಂದಿರಕ್ಕೆ ತಂದಳು. ಅವನು ಇನ್ನೂ ಚಿಕ್ಕವನು ಆಗಿದ್ದನು. ಜೊತೆಗೆ ಅವರು ಮೂರು ವರ್ಷದ ಹೋರಿಯೊಂದನ್ನು, ಹತ್ತು ಕಿಲೋಗ್ರಾಂ ಹಿಟ್ಟನ್ನು ಹಾಗೂ ಒಂದು ತಿತ್ತಿ ದ್ರಾಕ್ಷಾರಸವನ್ನೂ ತಂದಿದ್ದರು.


ಇವರು ಇಸ್ರಯೇಲರಿಗೆ ಎದುರಾಗಿ ವ್ಯೂಹಕಟ್ಟಿ ಯುದ್ಧಮಾಡಿದರು. ಇಸ್ರಯೇಲರು ಸೋತರು. ರಣರಂಗದಲ್ಲಿ ಸುಮಾರು ನಾಲ್ಕು ಸಾವಿರಮಂದಿ ಇಸ್ರಯೇಲರನ್ನು ಫಿಲಿಷ್ಟಿಯರು ಸಂಹರಿಸಿದರು.


ನಾನು ಹೇಳುವುದನ್ನು ಕೇಳಿ : ಸರ್ವೇಶ್ವರ ಸ್ವಾಮಿಯ ಕೈ ನಿಮ್ಮನ್ನು ರಕ್ಷಿಸಲಾಗದಂಥ ಮೋಟುಗೈಯಲ್ಲ, ಅವರ ಕಿವಿ ಕಿವುಡಲ್ಲ.


ಬದಲಿಗೆ, ನಿಮ್ಮ ಅಪರಾಧಗಳೇ ನಿಮ್ಮನ್ನು ಜೀವದಿಂದ ಬೇರ್ಪಡಿಸುತ್ತಾ ಬಂದಿವೆ. ಅವರು ನಿಮಗೆ ಕಿವಿಗೊಡದಂತೆ ನಿಮ್ಮ ಪಾಪಗಳೇ ಅವರನ್ನು ವಿಮುಖರನ್ನಾಗಿ ಮಾಡಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು