Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 4:21 - ಕನ್ನಡ ಸತ್ಯವೇದವು C.L. Bible (BSI)

21 ದೇವರ ಮಂಜೂಷ ಶತ್ರುವಶವಾದುದರಿಂದಲು ಹಾಗೂ ಮಾವನೂ ಗಂಡನೂ ಮೃತರಾಗಿದ್ದರಿಂದಲು, “ದೈವಮಹಿಮೆಯು ಇಸ್ರಯೇಲರನ್ನು ಬಿಟ್ಟುಹೋಯಿತು,” ಎಂದು ಹೇಳಿ ಆ ಕೂಸಿಗೆ ‘ಈಕಾಬೋದ್’ ಎಂದು ಹೆಸರು ಇಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

21 ದೇವರ ಮಂಜೂಷವು ಶತ್ರುವಶವಾದ್ದರಿಂದಲೂ, ಮಾವನೂ, ಗಂಡನೂ ಮೃತರಾದ್ದರಿಂದಲೂ, “ಮಹಿಮೆಯು ಇಸ್ರಾಯೇಲರನ್ನು ಬಿಟ್ಟು ಹೋಯಿತೆಂದು ಹೇಳಿ ಆ ಕೂಸಿಗೆ ಈಕಾಬೋದ್” ಎಂದು ಹೆಸರಿಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

21 ದೇವರ ಮಂಜೂಷವು ಶತ್ರುವಶವಾದದರಿಂದಲೂ ಮಾವನೂ ಗಂಡನೂ ಮೃತಿ ಹೊಂದಿದರಿಂದಲೂ - ಮಹಿಮೆಯು ಇಸ್ರಾಯೇಲ್ಯರನ್ನು ಬಿಟ್ಟುಹೋಯಿತೆಂದು ಹೇಳಿ ಆ ಕೂಸಿಗೆ ಈಕಾಬೋದ್ ಎಂದು ಹೆಸರಿಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

21 ಏಲಿಯ ಸೊಸೆಯು, “ಇಸ್ರೇಲರ ವೈಭವವು ಇಲ್ಲವಾಯಿತು” ಎಂದು ಹೇಳಿದಳು. ಅವಳು ತನ್ನ ಮಗುವಿಗೆ ಈಕಾಬೋದ್ ಎಂಬ ಹೆಸರಿಟ್ಟು ಮೃತಳಾದಳು. ಯೆಹೋವನ ಪವಿತ್ರ ಪೆಟ್ಟಿಗೆಯು ಶತ್ರುವಶವಾದದ್ದರಿಂದ ಮಾವನು ಮತ್ತು ಗಂಡನು ಸತ್ತದ್ದರಿಂದ, ಆಕೆ ತನ್ನ ಮಗನಿಗೆ ಈಕಾಬೋದ್ ಎಂದು ಹೆಸರಿಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

21 ಆದರೆ ಅವಳು ಅದಕ್ಕೆ ಉತ್ತರವಾಗಿ ಅದರ ಮೇಲೆ ಲಕ್ಷ್ಯವಿಡದೆ ದೇವರ ಮಂಜೂಷವು ಶತ್ರು ವಶವಾಯಿತೆಂದೂ ತನ್ನ ಮಾವನೂ ತನ್ನ ಗಂಡನೂ ಮರಣಹೊಂದಿದರಿಂದಲೂ ದೇವರ ಮಹಿಮೆಯು ಇಸ್ರಾಯೇಲರನ್ನು ಬಿಟ್ಟುಹೋಯಿತು ಎಂದು ಹೇಳಿ, ಆ ಕೂಸಿಗೆ, “ಈಕಾಬೋದ್,” ಎಂದು ಹೆಸರಿಟ್ಟಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 4:21
12 ತಿಳಿವುಗಳ ಹೋಲಿಕೆ  

ಪ್ರಿಯವಾದುದೆನಗೆ ನಿನ್ನ ನಿವಾಸದ ಮಂದಿರ I ಸುಪ್ರೀತವಾದುದು ನಿನ್ನ ಮಹಿಮೆಯ ಆಗರ II


ಒಪ್ಪಿಸಿದನು ತನ್ನ ಬಲುಮೆಯನು ಕೈಸೆರೆಗೆ I ತನ್ನ ಮಹಿಮೆಯನು ವಿರೋಧಿಗಳ ಕೈವಶಕೆ II


ತನ್ನ ದೇವತೆಗಳು ದೇವರಲ್ಲದೆ ಇದ್ದರೂ ಅವುಗಳನ್ನು ಯಾವ ಜನಾಂಗವಾದರು ಬದಲಾಯಿಸಿಕೊಂಡಿತೋ? ಆದರೆ ನನ್ನ ಜನ, ತಮ್ಮ ಮಹಿಮೆಯಾದ ನನ್ನನ್ನು ತೊರೆದು ನಿರರ್ಥಕವಾದುವುಗಳನ್ನು ಆರಿಸಿಕೊಂಡಿದ್ದಾರೆ!


ಬಲಿಯಾದರವರ ಯಾಜಕರು ಶತ್ರುಕತ್ತಿಗೆ I ವಿಧವೆಯರು ರೋದಿಸಲಿಲ್ಲ ಅವರ ಸಾವಿಗೆ II


ಒಂದು ವೇಳೆ ಮಕ್ಕಳನ್ನು ಹೆತ್ತು ಸಾಕಿದರೂ ಅವರಾರೂ ಉಳಿಯದಂತೆ ಅವರಿಗೆ ನಿರಂತರವಾಗಿ ಪುತ್ರಶೋಕವನ್ನುಂಟುಮಾಡುವೆನು. ನಾನು ಅವರಿಗೆ ವಿಮುಖನಾಗುವೆನು. ಅವರ ಗತಿ ಹೇಳತೀರದಂತಾಗುವುದು.


ದೇವರ ಮಂಜೂಷ ಶತ್ರುವಶವಾಯಿತು. ಏಲಿಯ ಮಕ್ಕಳಾದ ಹೊಫ್ನಿ ಮತ್ತು ಫೀನೆಹಾಸ ಹತರಾದರು.


ಈಪರಿ ತೊರೆದುಬಿಟ್ಟರು ತಮ್ಮ ಮಹಿಮಾ ದೇವರನು I ಆರಿಸಕೊಂಡರು ಹುಲ್ಲು ತಿನ್ನುವ ಬಸವನ ವಿಗ್ರಹವನು II


ದೇವರ ಮಂಜೂಷ ಶತ್ರುವಶವಾದ್ದರಿಂದಲೇ ಇಸ್ರಯೇಲರ ಮಹಿಮೆ ಮಾಯವಾಯಿತೆಂದು ಹೇಳಿದಳು.


‘ಏಫೋದ’ನ್ನು ಧರಿಸಿಕೊಂಡಿದ್ದ ಅಹೀಯನೂ ಇದ್ದನು. ಈ ಅಹೀಯನು ಶಿಲೋವಿನಲ್ಲಿ ಸರ್ವೇಶ್ವರನ ಯಾಜಕನಾಗಿದ್ದ ಏಲಿಯ ಮರಿಮಗನೂ ಫೀನೆಹಾಸನ ಮೊಮ್ಮಗನೂ ಈಕಾಬೋದನ ಅಣ್ಣನಾದ ಅಹೀಟೂಬನ ಮಗನೂ ಆಗಿದ್ದನು. ಯೋನಾತಾನನು ಹೋದದ್ದು ಜನರಿಗೂ ಗೊತ್ತಿರಲಿಲ್ಲ.


ಇದೆಲ್ಲಾ ನೆರವೇರುವುದು ಎಂಬುದಕ್ಕೆ ಗುರುತಾಗಿ ನಿನ್ನ ಮಕ್ಕಳಾದ ಹೊಫ್ನಿ ಹಾಗು ಫೀನೆಹಾಸ್ ಒಂದೇ ದಿನದಲ್ಲಿ ಸಾಯುವರು.


ಏಲಿಯ ಮನೆಯನ್ನು ಕುರಿತು ತಿಳಿಸಿದ್ದೆಲ್ಲವನ್ನೂ ಆ ದಿನ ತಪ್ಪದೆ ನೆರವೇರಿಸುವೆನು.


ಅಯ್ಯಯ್ಯೋ, ಸ್ವಾಮಿಯೆ ಸಿಟ್ಟುಗೊಂಡಿರುವನಲ್ಲಾ ! ಸಿಯೋನ್ ಕುವರಿಗೆ ಕಾರ್ಮೋಡ ಕವಿದಂತೆ ಮಾಡಿರುವನಲ್ಲಾ ! ಇಸ್ರಯೇಲಿನ ವೈಭವವನ್ನು ಆಗಸದಿಂದ ನೆಲಕ್ಕೆಸೆದುಬಿಟ್ಟಿರುವನಲ್ಲಾ ! ಆ ಸಿಟ್ಟಿನ ದಿನದಂದು ತನ್ನ ಪಾದಪೀಠವಾದ ದೇವಾಲಯವನ್ನೂ ನೆನೆಯದೆಹೋದನಲ್ಲಾ !


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು