Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 30:22 - ಕನ್ನಡ ಸತ್ಯವೇದವು C.L. Bible (BSI)

22 ಆಗ ದಾವೀದನ ಜೊತೆಯಲ್ಲಿ ಹೋಗಿದ್ದ ಜನರಲ್ಲಿ ದುಷ್ಟರೂ ಮೂರ್ಖರೂ ಆದ ಕೆಲವು ಮಂದಿ, “ಇವರು ನಮ್ಮ ಸಂಗಡ ಬಾರದ್ದರಿಂದ ನಾವು ಬಿಡಿಸಿಕೊಂಡು ಬಂದ ಕೊಳ್ಳೆಯಲ್ಲಿ ಇವರಿಗೆ ಏನೂ ಸಿಕ್ಕುವುದಿಲ್ಲ. ತಮ್ಮ ತಮ್ಮ ಮಡದಿ ಮಕ್ಕಳನ್ನು ಕರೆದುಕೊಂಡು ಹೋಗಿಬಿಡಲಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

22 ಆಗ ದಾವೀದನ ಜೊತೆಯಲ್ಲಿ ಹೋಗಿದ್ದ ಜನರಲ್ಲಿ ದುಷ್ಟರೂ ಮೂರ್ಖರೂ ಆದ ಕೆಲವು ಮಂದಿ, “ಇವರು ನಮ್ಮ ಸಂಗಡ ಬಾರದ್ದರಿಂದ, ನಾವು ತೆಗೆದುಕೊಂಡು ಬಂದಿರುವ ಕೊಳ್ಳೆಯಲ್ಲಿ ಇವರಿಗೆ ಏನೂ ಸಿಕ್ಕುವುದಿಲ್ಲ. ತಮ್ಮ ತಮ್ಮ ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋಗಿಬಿಡಲಿ” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

22 ಆಗ ದಾವೀದನ ಜೊತೆಯಲ್ಲಿ ಹೋಗಿದ್ದ ಜನರಲ್ಲಿ ದುಷ್ಟರೂ ಮುರ್ಖರೂ ಆದ ಕೆಲವು ಮಂದಿ - ಇವರು ನಮ್ಮ ಸಂಗಡ ಬಾರದ್ದರಿಂದ ನಾವು ಬಿಡಿಸಿಕೊಂಡು ಬಂದ ಕೊಳ್ಳೆಯಲ್ಲಿ ಇವರಿಗೆ ಏನೂ ಸಿಕ್ಕುವದಿಲ್ಲ. ತಮ್ಮತಮ್ಮ ಹೆಂಡರುಮಕ್ಕಳನ್ನು ಕರಕೊಂಡು ಹೋಗಿಬಿಡಲಿ ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

22 ಆದರೆ ದಾವೀದನ ಜೊತೆಯಲ್ಲಿ ಹೋಗಿದ್ದ ಜನರ ಗುಂಪಿನಲ್ಲಿ ಕೆಟ್ಟ ಜನರೂ ಕಿಡಿಗೇಡಿಗಳೂ ಇದ್ದರು. ಆ ಕೀಡಿಗೇಡಿಗಳು, “ಈ ಇನ್ನೂರು ಜನರು ನಮ್ಮೊಡನೆ ಬರಲಿಲ್ಲ. ಆದ್ದರಿಂದ ನಾವು ವಶಪಡಿಸಿಕೊಂಡ ವಸ್ತುಗಳಲ್ಲಿ ಯಾವುದನ್ನೂ ಇವರಿಗೆ ಕೊಡುವುದಿಲ್ಲ. ಇವರು ತಮ್ಮ ಹೆಂಡತಿಯರನ್ನು ಮತ್ತು ಮಕ್ಕಳನ್ನು ಮಾತ್ರ ತೆಗೆದುಕೊಳ್ಳಬಹುದು” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

22 ಆಗ ದಾವೀದನ ಸಂಗಡ ಬಂದ ಮನುಷ್ಯರಲ್ಲಿ ದುಷ್ಟರಾದ ಕೆಲವರು, “ನಮ್ಮ ಸಂಗಡ ಬಾರದೆ ಇದ್ದುದರಿಂದ, ನಾವು ತೆಗೆದುಕೊಂಡು ಬಂದ ಕೊಳ್ಳೆಯ ವಸ್ತುಗಳಲ್ಲಿ ಅವರಿಗೆ ಒಂದನ್ನೂ ಕೊಡುವುದಿಲ್ಲ. ಪ್ರತಿಯೊಬ್ಬನು ತನ್ನ ತನ್ನ ಹೆಂಡತಿ, ಮಕ್ಕಳನ್ನು ಮಾತ್ರವೇ ಕರೆದುಕೊಂಡು ಹೋಗಲಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 30:22
10 ತಿಳಿವುಗಳ ಹೋಲಿಕೆ  

“ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ, ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇದೇ.”


ಅಲ್ಲಿ ವಾಸವಾಗಿರುವ ಇಸ್ರಯೇಲರಲ್ಲಿ ಕೆಲವು ಮಂದಿ ದುಷ್ಟರು, ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ತಮ್ಮ ಊರಿನವರಿಗೆ ಸೂಚಿಸಬಹುದು. ‘ಆ ದೇವರುಗಳನ್ನು ಪೂಜಿಸೋಣ ಬನ್ನಿ’ ಎಂದು ಹೇಳಿ ಅವರನ್ನು ಸನ್ಮಾರ್ಗದಿಂದ ತಪ್ಪಿಸಬಹುದು.


ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತರು. ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆಂಬುದಾಗಿ ಜನರ ಎದುರಿನಲ್ಲೆ ಅವನಿಗೆ ವಿರುದ್ಧ ಸಾಕ್ಷಿಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು.


ಅವನು ದೇವರನ್ನೂ ಅರಸನನ್ನೂ ಶಪಿಸಿದವನು ಎಂಬುದಾಗಿ ಇಬ್ಬರು ದುಷ್ಟಮನುಷ್ಯರಿಂದ ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಿಸಿರಿ; ಅವನನ್ನು ಹೊರಗೆ ಒಯ್ದು, ಕಲ್ಲೆಸೆದು ಕೊಲ್ಲಿರಿ,” ಎಂದು ಬರೆದಿದ್ದಳು.


ಒಡೆಯಾ, ಮಂದಮತಿಯಾದ ಆ ನಾಬಾಲನನ್ನು ತಾವು ಲಕ್ಷಿಸಬೇಡಿ. ಅವನ ಹೆಸರು ನಾಬಾಲ್; ಅದಕ್ಕೆ ತಕ್ಕಂತೆ ಮೂರ್ಖನೇ ಆಗಿರುತ್ತಾನೆ. ನಿಮ್ಮ ದಾಸಿಯಾದ ನಾನು, ತಾವು ಕಳುಹಿಸಿದ ಸೇವಕರನ್ನು ನೋಡಲಿಲ್ಲ.


ಈಗ ಮಾಡಬೇಕಾದುದ್ದನ್ನು ನೀವೇ ಆಲೋಚಿಸಿ ತೀರ್ಮಾನಿಸಿ. ನಮ್ಮ ಯಜಮಾನರಿಗೂ ಅವರ ಕುಟುಂಬದವರೆಲ್ಲರಿಗೂ ಕೇಡು ಹತ್ತಿರವಾಗಿದೆ; ಮಂದಮತಿಯಾದ ಅವರೊಡನೆ ಮಾತಾಡುವುದು ಅಸಾಧ್ಯ,” ಎಂದು ಹೇಳಿದನು.


ಇದಲ್ಲದೆ ಶೋಷಿತರು, ಸಾಲಗಾರರು ಹಾಗು ಮನನೊಂದವರು ಆಗಿದ್ದ ಜನಸಾಮಾನ್ಯರು ಬಂದು ಅವನನ್ನು ಆಶ್ರಯಿಸಿಕೊಂಡರು. ಹೀಗೆ ಅವನು ಸುಮಾರು ನಾನೂರು ಜನರಿಗೆ ನಾಯಕನಾದನು.


ಅವರು ಭೋಜನದಿಂದ ತೃಪ್ತಿಪಡುವಷ್ಟರಲ್ಲಿ ಆ ಊರಲ್ಲಿದ್ದ ನೀಚ ಜನರು ಬಂದು, ಆ ಮನೆಯನ್ನು ಸುತ್ತಿಕೊಂಡು, ಕದಗಳನ್ನು ಬಡಿದು, ಮನೆಯ ಯಜಮಾನನಾದ ಮುದುಕನಿಗೆ, “ನಿನ್ನ ಮನೆಗೆ ಬಂದಿರುವಂಥ ಮನುಷ್ಯನನ್ನು ಹೊರಗೆ ತೆಗೆದುಕೊಂಡು ಬಾ; ಅವನೊಡನೆ ನಮಗೆ ಸಂಗಮವಾಗಬೇಕು,” ಎಂದು ಕೂಗಿದರು.


ಅನಂತರ ದಾವೀದನು ಮೊದಲು ಆಯಾಸದಿಂದ ತನ್ನ ಹಿಂದೆ ಬರಲಾರದೆ ಬೆಸೋರ್ ಹಳ್ಳದ ಹತ್ತಿರ ಉಳಿದಿದ್ದ ಇನ್ನೂರು ಜನರ ಬಳಿಗೆ ಹೋದನು. ಅವನನ್ನೂ ಅವನೊಂದಿಗಿದ್ದ ಜನರನ್ನೂ ಎದುರುಗೊಳ್ಳಲು ಆ ಜನರು ಬಂದರು. ದಾವೀದನು ಅವರನ್ನು ಸಂಧಿಸಿ ಕ್ಷೇಮಸಮಾಚಾರವನ್ನು ವಿಚಾರಿಸಿದನು.


ಆಗ ದಾವೀದನು ಅವರಿಗೆ, “ಸಹೋದರರೇ, ಸರ್ವೇಶ್ವರ ನಮ್ಮನ್ನು ಕಾಪಾಡಿ, ನಮಗೆ ವಿರುದ್ಧ ಬಂದಿದ್ದ ಶತ್ರುಗಳ ಗುಂಪನ್ನು ನಮ್ಮ ಕೈಗೆ ಒಪ್ಪಿಸಿ, ನಮಗೆ ಇಷ್ಟನ್ನೆಲ್ಲಾ ಅನುಗ್ರಹಿಸಿದ ಮೇಲೆ ನೀವು ಹೀಗೆ ಮಾಡಬಾರದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು