Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 3:1 - ಕನ್ನಡ ಸತ್ಯವೇದವು C.L. Bible (BSI)

1 ಬಾಲಕ ಸಮುವೇಲನು ಏಲಿಯ ನೇತೃತ್ವದಲ್ಲಿ ಸರ್ವೇಶ್ವರನ ಸೇವೆಮಾಡುತ್ತಾ ಬಂದನು. ಆ ಕಾಲದಲ್ಲಿ ದೇವೋಕ್ತಿಗಳು ವಿರಳ ಆಗಿದ್ದವು; ದೇವದರ್ಶನಗಳು ಅಪರೂಪವಾಗಿಬಿಟ್ಟಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಬಾಲಕನಾದ ಸಮುವೇಲನು ಏಲಿಯ ಕೈಕೆಳಗಿದ್ದುಕೊಂಡು ಯೆಹೋವನ ಸೇವೆಮಾಡುತ್ತಿದ್ದನು. ಆ ಕಾಲದಲ್ಲಿ ದೈವೋಕ್ತಿಗಳು ವಿರಳವಾಗಿದ್ದವು; ದೇವದರ್ಶನಗಳು ಅಪರೂಪವಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಬಾಲಕನಾದ ಸಮುವೇಲನು ಏಲಿಯ ಕೈಕೆಳಗಿದ್ದುಕೊಂಡು ಯೆಹೋವನ ಸೇವೆಮಾಡುತ್ತಿದ್ದನಷ್ಟೆ. ಆ ಕಾಲದಲ್ಲಿ ದೇವೋಕ್ತಿಗಳು ವಿರಳವಾಗಿದ್ದವು, ದೇವದರ್ಶನಗಳು ಅಪರೂಪವಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಬಾಲಕನಾದ ಸಮುವೇಲನು ಏಲಿಯ ಕೈಕೆಳಗಿದ್ದು ಯೆಹೋವನ ಸೇವೆಮಾಡುತ್ತಿದ್ದನು. ಆ ಕಾಲದಲ್ಲಿ ಯೆಹೋವನು ಜನರೊಂದಿಗೆ ಪದೇಪದೇ ಮಾತಾಡುತ್ತಿರಲಿಲ್ಲ; ದರ್ಶನಗಳ ಸಂಖ್ಯೆಯೂ ಕಡಿಮೆಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಬಾಲಕನಾದ ಸಮುಯೇಲನು ಏಲಿಯ ಕೈಕೆಳಗಿದ್ದುಕೊಂಡು ಯೆಹೋವ ದೇವರಿಗೆ ಸೇವೆ ಮಾಡಿಕೊಂಡಿದ್ದನು. ಆ ದಿನಗಳಲ್ಲಿ ಯೆಹೋವ ದೇವರ ವಾಕ್ಯವು ವಿರಳವಾಗಿತ್ತು. ಅಲ್ಲಿ ದೇವದರ್ಶನಗಳು ಅಪರೂಪವಾಗಿದ್ದವು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 3:1
11 ತಿಳಿವುಗಳ ಹೋಲಿಕೆ  

ಆರಾಧನಾ ಚಿಹ್ನೆಗಳಿಲ್ಲ, ಪ್ರವಾದಿಗಳು ನಮಗಿಲ್ಲ I ಈ ಪರಿಸ್ಥಿತಿ ಎಲ್ಲಿಯತನಕ? ಬಲ್ಲವರಾರೂ ಇಲ್ಲ II


ಸರ್ವೇಶ್ವರ, ಶಿಲೋವಿನಲ್ಲಿ ದರ್ಶನಕೊಡುವುದಕ್ಕೆ ಪ್ರಾರಂಭಿಸಿ ದೈವವಾಣಿಯ ಮೂಲಕ ಸಮುವೇಲನಿಗೆ ತಮ್ಮನ್ನೇ ಶೃತಪಡಿಸುತ್ತಾ ಬಂದರು. ಇಸ್ರಯೇಲರೆಲ್ಲರಿಗೆ ಸಮುವೇಲನು ಸರ್ವೇಶ್ವರನ ವಚನಗಳನ್ನು ತಿಳಿಸುತ್ತಾ ಇದ್ದನು.


ಎಲ್ಕಾನನು ರಾಮಾದಲ್ಲಿದ್ದ ತನ್ನ ಮನೆಗೆ ಹಿಂದಿರುಗಿದನು. ಹುಡುಗ ಸಮುವೇಲನು ಯಾಜಕ ಏಲಿಯನ ಕೈಕೆಳಗಿದ್ದು ಸರ್ವೇಶ್ವರನ ಸೇವೆಮಾಡುತ್ತಾ ಬಂದನು.


ಬಾಲಕನಾದ ಸಮುವೇಲನು ‘ಏಫೋದ’ ಎಂಬ ಪ್ರತ್ಯೇಕ ಮಡಿಯಂಗಿಯನ್ನು ತೊಟ್ಟುಕೊಂಡು ಸರ್ವೇಶ್ವರನ ಸಾನ್ನಿಧ್ಯಸೇವೆಯನ್ನು ಮಾಡುತ್ತಿದ್ದನು.


ಅಳಿದುಳಿದ ಜನರು ಅಪರಂಜಿಗಿಂತಲೂ ಓಫೀರಿನ ಬಂಗಾರಕ್ಕಿಂತಲೂ ವಿರಳವಾಗಿರುವಂತೆ ಮಾಡುವೆನು.


ಅನಂತರ ಸಮುವೇಲನು ಮಲಗಿ, ಮುಂಜಾನೆಯಲ್ಲೇ ಎದ್ದು, ಸರ್ವೇಶ್ವರನ ಮಂದಿರದ ಬಾಗಿಲುಗಳನ್ನು ತೆರೆದನು. ತಾನು ಕಂಡದ್ದನ್ನು ಏಲಿಗೆ ತಿಳಿಸಲು ಭಯಪಟ್ಟನು.


ನನ್ನ ಹೃನ್ಮನಗಳಿಗೆ ಸರಿಯಾದುದನ್ನೇ ಮಾಡುವ ಒಬ್ಬ ಶ್ರದ್ಧೆಯುಳ್ಳ ಯಾಜಕನನ್ನು ಎಬ್ಬಿಸುವೆನು. ಅವನು ನನ್ನ ಅಭಿಷಿಕ್ತನ ಬಳಿಯಲ್ಲಿ ಸದಾಕಾಲ ಸೇವೆಮಾಡುವನು.


ನಿನ್ನ ಮನೆಯಲ್ಲಿ ಅಳಿದು ಉಳಿದವರು ಬಂದು ಅವನ ಮುಂದೆ ಅಡ್ಡಬೀಳುವರು; ‘ನಮಗೊಂದು ಬೆಳ್ಳಿಕಾಸನ್ನಾದರೂ ರೊಟ್ಟಿ ಚೂರನ್ನಾದರೂ ಕೊಡು; ಒಂದು ತುತ್ತು ಅನ್ನಕ್ಕೆ ಮಾರ್ಗವಾಗುವ ಹಾಗೆ ದೇವಸ್ಥಾನದ ಸೇವೆಯಲ್ಲಿ ಯಾವುದಕ್ಕಾದರು ನಮ್ಮನ್ನು ಸೇರಿಸಿಕೋ’ ಎಂದು ಬೇಡಿಕೊಳ್ಳುವರು".


ಪ್ರವಾದನೆಗಳಿಲ್ಲದಿರುವಾಗ ಪ್ರಜೆಗಳು ಅಂಕೆಮೀರಿ ನಡೆಯುತ್ತಾರೆ, ಧರ್ಮಶಾಸ್ತ್ರಾನುಸಾರ ನಡೆಯುವವನು ಭಾಗ್ಯವಂತನು.


ಉಪದ್ರವದ ಮೇಲೆ ಉಪದ್ರವ, ಸುದ್ದಿಯ ಮೇಲೆ ಸುದ್ದಿ ಹರಡುವುವು; ‘ದಿವ್ಯದರ್ಶನವಾಯಿತೆ’ ಎಂದು ಪ್ರವಾದಿಯನ್ನು ಕೇಳುತ್ತಲೇ ಇರುವರು; ಯಾಜಕರಲ್ಲಿ ಧರ್ಮೋಪದೇಶ ಅಡಗಿಹೋಗುವುದು, ಹಿರಿಯರಲ್ಲಿ ಸಲಹೆ ಸಮಾಲೋಚನೆ ಇಲ್ಲವಾಗುವುದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು