10 ನೀನು ಮತ್ತು ನಿನ್ನ ಜನರು ಮುಂಜಾನೆಯಲ್ಲಿಯೇ ಹಿಂದಿರುಗಿ ಹೋಗಿ. ನಾನು ನಿನಗೆ ಕೊಟ್ಟಿರುವ ನಗರಕ್ಕೆ ಹಿಂದಿರುಗು. ಅಧಿಪತಿಗಳು ನಿನ್ನ ಬಗ್ಗೆ ಹೇಳುತ್ತಿರುವ ಕೆಟ್ಟ ಮಾತುಗಳಿಗೆ ಗಮನ ನೀಡಬೇಡ. ನೀನು ಒಬ್ಬ ಒಳ್ಳೆಯ ಮನುಷ್ಯ. ಆದ್ದರಿಂದ ಸೂರ್ಯನು ಮೇಲೇರುವಷ್ಟರಲ್ಲಿ ನೀನು ನಮ್ಮನ್ನು ಬಿಟ್ಟುಹೋಗು” ಎಂದು ಹೇಳಿದನು.
ಅರಸ ಸೌಲನಿಗೆ ವಿರುದ್ಧ ಯುದ್ಧಮಾಡಲು ಫಿಲಿಷ್ಟಿಯರೊಂದಿಗೆ ಹೋಗುತ್ತಿದ್ದಾಗ ಮನಸ್ಸೆ ಗೋತ್ರದ ಕೆಲವು ಜನ ಸೈನಿಕರು ಬಂದು ದಾವೀದನ ಪಕ್ಷದಲ್ಲಿ ಸೇರಿಕೊಂಡರು. ದಾವೀದನು ನಿಜವಾಗಿಯೂ ಫಿಲಿಷ್ಟಿಯರಿಗೆ ಸಹಾಯಮಾಡಲಿಲ್ಲ. ತನ್ನ ಮೊದಲಿನ ಯಜಮಾನ ಸೌಲನಿಗೆ ತಮ್ಮನ್ನು ಹಿಡಿದುಕೊಡಬಹುದೆಂಬ ಭಯ ಫಿಲಿಷ್ಟಿಯ ರಾಜರುಗಳಿಗೆ ಇದ್ದುದರಿಂದ ಅವರು ಅವನನ್ನು ಚಿಕ್ಲಗಿಗೆ ಹಿಂದಕ್ಕೆ ಕಳುಹಿಸಿದರು.
ಮಾನವರಿಂದ ಜಯಿಸಲಾಗದ ಶೋಧನೆಗಳೇನೂ ನಿಮಗೆ ಬಂದಿಲ್ಲ. ದೇವರು ಕೊಟ್ಟಮಾತಿಗೆ ತಪ್ಪಲಾರರು. ಗೆಲ್ಲಲಾಗದ ಶೋಧನೆಗಳಿಗೆ ನಿಮ್ಮನ್ನೆಂದೂ ಗುರಿಪಡಿಸಲಾರರು. ಶೋಧನೆಗಳು ಬಂದಾಗ ಅವುಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನೂ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಅವರೇ ಒದಗಿಸುತ್ತಾರೆ.