Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 28:3 - ಕನ್ನಡ ಸತ್ಯವೇದವು C.L. Bible (BSI)

3 ಸಮುವೇಲನು ಮರಣಹೊಂದಿದ್ದನು. ಇಸ್ರಯೇಲರು ಅವನಿಗಾಗಿ ಸಂತಾಪ ಸೂಚಿಸುತ್ತಾ ಅವನ ಶವವನ್ನು ಅವನ ಸ್ವಂತ ಊರಾದ ರಾಮಾದಲ್ಲಿ ಸಮಾಧಿಮಾಡಿದ್ದರು. ಸೌಲನು ಭೂತಪ್ರೇತಗಳನ್ನು ವಿಚಾರಿಸುವವರನ್ನೂ ಬೇತಾಳಿಕರನ್ನೂ ನಾಡಿನಿಂದ ಹೊರಡಿಸಿಬಿಟ್ಟಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಸಮುವೇಲನು ಮರಣ ಹೊಂದಿದನು. ಇಸ್ರಾಯೇಲರು ಅವನಿಗೋಸ್ಕರ ಗೋಳಾಡಿ, ಅವನ ಶವವನ್ನು ಅವನ ಸ್ವಂತ ಊರಾದ ರಾಮದಲ್ಲಿ ಸಮಾಧಿಮಾಡಿದ್ದರು. ಸೌಲನು ಸತ್ತವರಲ್ಲಿ ವಿಚಾರಿಸುವವರನ್ನೂ, ಬೇತಾಳಿಕರನ್ನೂ ದೇಶದಿಂದ ಹೊರಡಿಸಿಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಸಮುವೇಲನು ಮೃತಿಹೊಂದಿದ್ದನು. ಇಸ್ರಾಯೇಲ್ಯರು ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಅವನ ಸ್ವಂತ ಊರಾದ ರಾಮದಲ್ಲಿ ಸಮಾಧಿಮಾಡಿದ್ದರು. ಸೌಲನು ಸತ್ತವರಲ್ಲಿ ವಿಚಾರಿಸುವವರನ್ನೂ ಬೇತಾಳಿಕರನ್ನೂ ದೇಶದಿಂದ ಹೊರಡಿಸಿಬಿಟ್ಟಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಸಮುವೇಲನು ಮರಣಹೊಂದಿದನು. ಸಮುವೇಲನ ಮರಣಕ್ಕಾಗಿ ಇಸ್ರೇಲರೆಲ್ಲಾ ತಮ್ಮ ಸಂತಾಪವನ್ನು ಸೂಚಿಸಿದರು. ಅವರು ಸಮುವೇಲನನ್ನು ಅವನ ಊರಾದ ರಾಮದಲ್ಲಿ ಸಮಾಧಿಮಾಡಿದರು. ಸೌಲನು ಈ ಮೊದಲು, ಸತ್ತವರ ಆತ್ಮದೊಂದಿಗೆ ಮಾತನಾಡುವವರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರದಿಂದ ಇಸ್ರೇಲಿನಿಂದ ಓಡಿಸಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಸಮುಯೇಲನು ಮರಣಹೊಂದಿದನು. ಇಸ್ರಾಯೇಲರೆಲ್ಲರು ಅವನಿಗೋಸ್ಕರ ಗೋಳಾಡಿ, ಅವನ ಸ್ವಂತ ಪಟ್ಟಣವಾದ ರಾಮದಲ್ಲಿ ಅವನನ್ನು ಹೂಳಿಟ್ಟರು. ಇದಲ್ಲದೆ ಸೌಲನು ಮಾಂತ್ರಿಕಳನ್ನೂ, ಭೂತಪ್ರೇತಗಳನ್ನು ಆರಾಧಿಸುವವರನ್ನೂ ದೇಶದಲ್ಲಿಂದ ಹೊರಡಿಸಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 28:3
12 ತಿಳಿವುಗಳ ಹೋಲಿಕೆ  

ಸಮುವೇಲನು ಮರಣಹೊಂದಿದನು. ಇಸ್ರಯೇಲರೆಲ್ಲರೂ ಕೂಡಿಬಂದು ಅವನಿಗಾಗಿ ಸಂತಾಪಸೂಚಿಸುತ್ತಾ ಅವನ ಶವವನ್ನು ರಾಮಾದಲ್ಲಿದ್ದ ಅವನ ಮನೆಯ ಅಂಗಳದಲ್ಲೇ ಸಮಾಧಿಮಾಡಿದರು. ದಾವೀದನು ಹೊರಟು ಪಾರಾನ್ ಮರುಭೂಮಿಗೆ ಹೋದನು.


ಭೂತಪ್ರೇತಗಳನ್ನು ವಿಚಾರಿಸುವವರು ಸ್ತ್ರೀಯರಾಗಲಿ ಪುರುಷರಾಗಲಿ ಮರಣಶಿಕ್ಷೆ ಹೊಂದಬೇಕು. ಕಲ್ಲೆಸೆದು ಅವರನ್ನು ಕೊಲ್ಲಬೇಕು; ಆ ಶಿಕ್ಷೆಗೆ ಅವರೇ ಕಾರಣರು.


“ಭೂತಪ್ರೇತಗಳನ್ನು ವಿಚಾರಿಸುವವರ ಬಳಿಗೆ ಹೋಗಬೇಡ; ಅವರ ಆಲೋಚನೆಯನ್ನು ಕೇಳಿ ಅಶುದ್ಧನಾಗಬೇಡ. ನಾನು ಸರ್ವೇಶ್ವರ.


“ಮಾಟಗಾರ್ತಿಯನ್ನು ಬದುಕಲು ಬಿಡಬಾರದು.


ಆಗ ಆಕೆ ಅವನಿಗೆ, “ಸೌಲನು ಮಾಡಿದ್ದು ನಿನಗೆ ಗೊತ್ತುಂಟು; ಅವನು ಭೂತಪ್ರೇತಗಳನ್ನು ವಿಚಾರಿಸುವವರನ್ನು ಹಾಗು ಬೇತಾಳಿಕರನ್ನು ನಾಡಿನಿಂದ ಹೊರಡಿಸಿಬಿಟ್ಟನಲ್ಲವೇ? ಹೀಗಿದ್ದರೂ ನಾನು ಸಾಯುವಂತೆ ನೀನು ನನ್ನ ಪ್ರಾಣಕ್ಕೆ ಉರಲೊಡ್ಡುವುದೇಕೆ?” ಎಂದಳು.


ತಂತ್ರಮಂತ್ರಗಳಷ್ಟೇ ಕೆಟ್ಟದು ಪ್ರತಿಭಟನೆ ಕಳ್ಳಭಕ್ತಿಗೂ ವಿಗ್ರಹಾರಾಧನೆಗೂ ಸಮಾನ ಹಟಮಾರಿತನ. ನೀ ತಳ್ಳಿಬಿಟ್ಟೆ ಸರ್ವೇಶ್ವರನ ಆದೇಶವನ್ನು; ತಳ್ಳಿಬಿಟ್ಟರವರು ನಿನ್ನ ಅರಸುತನವನ್ನು,” ಎಂದು ನುಡಿದನು.


ಅಲ್ಲಿ ಅವನ ಸ್ವಂತ ಮನೆ ಇದ್ದುದರಿಂದ ಅಲ್ಲಿಯೇ ಸರ್ವೇಶ್ವರನಿಗೆ ಒಂದು ಬಲಿಪೀಠವನ್ನು ಕಟ್ಟಿಸಿ ಇಸ್ರಯೇಲರನ್ನು ಪಾಲಿಸುತ್ತಿದ್ದನು.


“ಯಾರಾದರು ಭೂತ-ಪ್ರೇತಗಳನ್ನು ವಿಚಾರಿಸುವವರ ಬಳಿಗೆ ಹೋಗಿ, ಅವರ ಆಲೋಚನೆಯನ್ನು ಕೇಳಿ, ದೇವದ್ರೋಹಿಯಾದರೆ ನಾನು ಅಂಥ ವ್ಯಕ್ತಿಗೆ ವಿಮುಖನಾಗಿ ಅವನನ್ನು ತನ್ನ ಜನತೆಯಿಂದ ತೆಗೆದುಹಾಕುವೆನು.


ಅವಳ ತಂದೆ ಅವಳನ್ನು ಅವನಿಗೆ ಕೊಡಲು ಒಪ್ಪದೆ ಹೋದರೆ ಆ ವ್ಯಕ್ತಿ ತಕ್ಕ ತೆರವನ್ನು ಹೇಗೂ ಕೊಡಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು