Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 25:8 - ಕನ್ನಡ ಸತ್ಯವೇದವು C.L. Bible (BSI)

8 ನಿನ್ನ ಆಳುಗ಼ಳನ್ನೇ ಕೇಳು, ಅವರೇ ಹೇಳುವರು. ಹೀಗಿರುವುದರಿಂದ ಶುಭಕಾಲದಲ್ಲಿ ನಿನ್ನ ಬಳಿಗೆ ಬಂದಿರುವ ನನ್ನ ಸೇವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆ ದೊರಕಲಿ. ಕೃಪೆಮಾಡಿ ನಿನ್ನ ಸೇವಕರಿಗೂ ಮಗನಾದ ದಾವೀದನಿಗೂ ನಿನಗಿರುವುದರಲ್ಲಿ ಸಾಧ್ಯವಾದುದ್ದನ್ನು ಕೊಡು,’ ಎಂದು ಅವನಿಗೆ ಹೇಳಿರಿ,” ಎಂದು ಅವರನ್ನು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನಿನ್ನ ಆಳುಗಳನ್ನು ಕೇಳು, ಅವರೇ ಹೇಳುವರು. ಹೀಗಿರುವುದರಿಂದ ಶುಭಕಾಲದಲ್ಲಿ ನಿನ್ನ ಬಳಿಗೆ ಬಂದಿರುವ ನನ್ನ ಸೇವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಲಿ. ಕೃಪೆಮಾಡಿ ನಿನ್ನ ಸೇವಕರಿಗೂ ಮಗನಾದ ದಾವೀದನಿಗೂ ನಿನಗಿರುವುದರಲ್ಲಿ ಕೊಡು’ ಎಂದು ಹೇಳಿರಿ” ಎಂದು ಅವರನ್ನು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನಿನ್ನ ಆಳುಗಳನ್ನು ಕೇಳು, ಅವರೇ ಹೇಳುವರು. ಹೀಗಿರುವದರಿಂದ ಶುಭಕಾಲದಲ್ಲಿ ನಿನ್ನ ಬಳಿಗೆ ಬಂದಿರುವ ನನ್ನ ಸೇವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಲಿ. ಕೃಪೆಮಾಡಿ ನಿನ್ನ ಸೇವಕರಿಗೂ ಮಗನಾದ ದಾವೀದನಿಗೂ ನಿನಗಿರುವದರಲ್ಲಿ ಕೊಡು ಎಂದು ಹೇಳಿರಿ ಅಂದು ಅವರನ್ನು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನಿನ್ನ ಸೇವಕರನ್ನು ಕೇಳು, ಇದು ನಿಜವೆಂಬುದನ್ನು ಅವರು ನಿನಗೆ ತಿಳಿಸುತ್ತಾರೆ. ನನ್ನ ಯುವಕರ ಬಗ್ಗೆ ದಯವಿಟ್ಟು ದಯಾಳುವಾಗಿರು. ಈ ಶುಭಸಂದರ್ಭದಲ್ಲಿ ನಾವು ನಿಮ್ಮ ಹತ್ತಿರಕ್ಕೆ ಬರುತ್ತೇವೆ. ಸ್ನೇಹಿತನಾದ ದಾವೀದನಿಗಾಗಿ ನಿನಗೆ ಸಾಧ್ಯವಿದ್ದಷ್ಟನ್ನು ದಯವಿಟ್ಟು ಈ ಯುವಕರಿಗೆ ಕೊಡು” ಎಂದು ಹೇಳಿ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನಿನ್ನ ಸೇವಕರನ್ನು ಕೇಳು. ಅವರು ನಿನಗೆ ಹೇಳುವರು. ಆದ್ದರಿಂದ ಈಗ ಈ ಯುವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆ ದೊರಕಲಿ. ಏಕೆಂದರೆ ಒಳ್ಳೆಯ ದಿವಸದಲ್ಲಿ ಬಂದೆವು. ನಿನ್ನ ಕೈಯಲ್ಲಿ ದೊರಕುವುದನ್ನು ನಿನ್ನ ಸೇವಕರಿಗೂ, ನಿನ್ನ ಪುತ್ರನಾದ ದಾವೀದನಿಗೂ ದಯಪಾಲಿಸು ಎಂದು ಅವನಿಗೆ ಹೇಳಿರಿ,’ ” ಎಂದು ಅವರನ್ನು ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 25:8
9 ತಿಳಿವುಗಳ ಹೋಲಿಕೆ  

ಈ ಕಾರಣದಿಂದಾಗಿ ಬಯಲುಪ್ರದೇಶದ ಗ್ರಾಮನಿವಾಸಿ ಯೆಹೂದ್ಯರು ಹದಿನಾಲ್ಕನೇ ದಿನವನ್ನು ಶುಭದಿನವೆಂತಲೂ ನಗರವಾಸಿ ಯೆಹೂದ್ಯರು ಹದಿನೈದನೆಯ ದಿನವನ್ನು ಶುಭದಿನವೆಂತಲೂ ಆಚರಿಸಿ, ಉತ್ಸವ ಭೋಜನಮಾಡಿ, ಒಬ್ಬರಿಗೊಬ್ಬರು ತಿಂಡಿತೀರ್ಥಗಳನ್ನು ವಿನಿಮಯಿಸಿಕೊಳ್ಳುತ್ತಾರೆ.


ನಿಮ್ಮ ತಟ್ಟೆ, ಲೋಟಗಳಲ್ಲಿ ಇರುವುದನ್ನು ಮೊಟ್ಟಮೊದಲು ದಾನಮಾಡಿರಿ. ಆಗ ಸಮಸ್ತವು ನಿಮಗೆ ಶುದ್ಧಿಯಾಗಿರುವುದು.


ನಿನ್ನ ಹಣವನ್ನು ವಿಭಾಗಿಸಿ ಏಳೆಂಟು ಸ್ಥಳಗಳಲ್ಲಿ ಇಡು. ಏಕೆಂದರೆ ಎಲ್ಲಿ, ಎಂಥ ಕೇಡು ಸಂಭವಿಸಬಹುದೆಂದು ನಿನಗೆ ತಿಳಿಯದು.


ಆ ದಿಗಳಲ್ಲಿ ಯೆಹೂದ್ಯರಿಗೆ ಶತ್ರುಗಳ ಕಾಟ ತಪ್ಪಿ ವಿಶ್ರಾಂತಿ ದೊರೆಯಿತು. ಆ ತಿಂಗಳಿನಲ್ಲಿ ಸಂಕಟವು ಪರಿಹಾರವಾಗಿ ಸಂತೋಷ ಪ್ರಾಪ್ತಿಯಾಯಿತು; ದುಃಖವು ಕಳೆದು ಸುಖಕಾಲ ಬಂದಿತು. ಆದ್ದರಿಂದ ಆ ದಿನಗಳಲ್ಲಿ ಹಬ್ಬದ ಭೋಜನಮಾಡಿ ಪರಸ್ಪರ ತಿಂಡಿತೀರ್ಥಗಳನ್ನು ವಿನಿಮಯಮಾಡಿಕೊಳ್ಳಬೇಕು. ಹಾಗೂ ಬಡಬಗ್ಗರಿಗೆ ದಾನಧರ್ಮ ಮಾಡಬೇಕು.


ನೀವು ನನ್ನ ತಂದೆ; ಇಗೋ ನೋಡಿ! ನನ್ನ ಕೈಯಲ್ಲಿ ನಿಮ್ಮ ನಿಲುವಂಗಿಯ ತುಂಡು ಇದೆ; ನಾನು ನಿಮ್ಮನ್ನು ಕೊಲ್ಲದೆ ನಿಮ್ಮ ನಿಲುವಂಗಿಯ ಮೂಲೆಯನ್ನು ಕತ್ತರಿಸಿಕೊಂಡೆನಷ್ಟೆ. ಇದರಿಂದ ನನ್ನಲ್ಲಿ ಯಾವ ದೋಷವೂ ಅಪರಾಧವೂ ಇರುವುದಿಲ್ಲ; ನಾನು ನಿಮಗೆ ವಿರೋಧವಾಗಿ ದ್ರೋಹಮಾಡಲಿಲ್ಲ ಎಂದು ತಿಳಿದುಕೊಳ್ಳಿ; ಆದರೂ ನೀವು ನನ್ನ ಪ್ರಾಣಕ್ಕೆ ಹೊಂಚು ಹಾಕುತ್ತಿರುವಿರಲ್ಲವೆ?


ಸರ್ವೇಶ್ವರ ಪುನಃ, “ಸಮುವೇಲನೇ,” ಎಂದು ಕರೆದರು. ಸಮುವೇಲನು ಕೂಡಲೆ ಎದ್ದು ಏಲಿಯ ಬಳಿಗೆ ಹೋಗಿ, “ಇಗೋ ಬಂದಿದ್ದೇನೆ; ನೀವು ನನ್ನನ್ನು ಕರೆದಿರಲ್ಲವೆ?” ಎಂದನು. ಅವನು, “ಮಗನೇ, ನಾನು ನಿನ್ನನ್ನು ಕರೆಯಲಿಲ್ಲ; ಹೋಗಿ ಮಲಗಿಕೋ,” ಎಂದನು.


ದಾವೀದನ ಸೇವಕರು ಹೋಗಿ ಅವನ ಹೆಸರಿನಲ್ಲಿ ಈ ಮಾತುಗಳನ್ನೆಲ್ಲಾ ನಾಬಾಲನಿಗೆ ತಿಳಿಸಿದರು. ಅಲ್ಲೇ ಉತ್ತರಕ್ಕಾಗಿ ಕಾಯುತ್ತಿದ್ದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು