Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 25:25 - ಕನ್ನಡ ಸತ್ಯವೇದವು C.L. Bible (BSI)

25 ಒಡೆಯಾ, ಮಂದಮತಿಯಾದ ಆ ನಾಬಾಲನನ್ನು ತಾವು ಲಕ್ಷಿಸಬೇಡಿ. ಅವನ ಹೆಸರು ನಾಬಾಲ್; ಅದಕ್ಕೆ ತಕ್ಕಂತೆ ಮೂರ್ಖನೇ ಆಗಿರುತ್ತಾನೆ. ನಿಮ್ಮ ದಾಸಿಯಾದ ನಾನು, ತಾವು ಕಳುಹಿಸಿದ ಸೇವಕರನ್ನು ನೋಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ಸ್ವಾಮಿಯು ಆ ಮೂರ್ಖನಾದ ನಾಬಾಲನನ್ನು ಲಕ್ಷಿಸದಿರಲಿ. ಅವನ ಹೆಸರು ನಾಬಾಲ. ಹೆಸರಿಗೆ ತಕ್ಕಂತೆ ಅವನು ಮೂರ್ಖನೇ ಆಗಿದ್ದಾನೆ. ನಿನ್ನ ದಾಸಿಯಾದ ನಾನು ಸ್ವಾಮಿಯು ಕಳುಹಿಸಿದ ಸೇವಕರನ್ನು ನೋಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ಸ್ವಾವಿುಯು ಮೂರ್ಖನಾದ ಆ ನಾಬಾಲನನ್ನು ಲಕ್ಷಿಸದಿರಲಿ. ಅವನ ಹೆಸರು ನಾಬಾಲ್; ಅದಕ್ಕೆ ತಕ್ಕಂತೆ ಅವನು ಮೂರ್ಖನೇ ಆಗಿರುತ್ತಾನೆ. ನಿನ್ನ ದಾಸಿಯಾದ ನಾನು ಸ್ವಾವಿುಯು ಕಳುಹಿಸಿದ ಸೇವಕರನ್ನು ನೋಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 ನೀನು ಕಳುಹಿಸಿದ ಜನರನ್ನು ನಾನು ನೋಡಲಿಲ್ಲ. ಒಡೆಯನೇ, ಮೂರ್ಖನಾದ ಆ ಮನುಷ್ಯನ ಮೇಲೆ ಯಾವ ಲಕ್ಷ್ಯವನ್ನೂ ಇಡಬೇಡ. ಅವನು ತನ್ನ ಹೆಸರಿಗೆ ತಕ್ಕಂತೆ ಇದ್ದಾನೆ. ಅವನ ಹೆಸರಿನ ಅರ್ಥವೂ ‘ಮೂರ್ಖ’ ಮತ್ತು ಅವನು ನಿಜವಾಗಿಯೂ ಮೂರ್ಖ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ನನ್ನ ಒಡೆಯನೇ, ದಯಮಾಡಿ ದುಷ್ಟನಾದ ನಾಬಾಲನ ಮೇಲೆ ಲಕ್ಷ್ಯವಿಡಬೇಡ. ಏಕೆಂದರೆ ಅವನ ಹೆಸರು ಹೇಗೋ, ಹಾಗೆಯೇ ಅವನು. ಅವನು ನಾಬಾಲನೆಂಬ ಹೆಸರುಳ್ಳವನು. ಬುದ್ಧಿಹೀನತೆ ಅವನಲ್ಲಿ ಇದೆ. ಆದರೆ ನನ್ನ ಒಡೆಯನಾದ ನೀನು ಕಳುಹಿಸಿದ ನಿನ್ನ ಸೇವಕರನ್ನು ನಿನ್ನ ದಾಸಿಯಾದ ನಾನು ನೋಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 25:25
9 ತಿಳಿವುಗಳ ಹೋಲಿಕೆ  

ಈಗ ಮಾಡಬೇಕಾದುದ್ದನ್ನು ನೀವೇ ಆಲೋಚಿಸಿ ತೀರ್ಮಾನಿಸಿ. ನಮ್ಮ ಯಜಮಾನರಿಗೂ ಅವರ ಕುಟುಂಬದವರೆಲ್ಲರಿಗೂ ಕೇಡು ಹತ್ತಿರವಾಗಿದೆ; ಮಂದಮತಿಯಾದ ಅವರೊಡನೆ ಮಾತಾಡುವುದು ಅಸಾಧ್ಯ,” ಎಂದು ಹೇಳಿದನು.


ನನ್ನ ನಾಮಕ್ಕೆ ಮಹಿಮೆ ಸಲ್ಲಿಸಬೇಕು. ಇದನ್ನು ನೀವು ಮನದಟ್ಟು ಮಾಡಿಕೊಳ್ಳಬೇಕು. ನನ್ನ ಈ ಮಾತಿಗೆ ಕಿವಿಗೊಡದಿದ್ದರೆ ನಿಮಗೆ ಶಾಪವನ್ನು ತರುವೆನು. ನಿಮ್ಮ ವರಮಾನಗಳನ್ನೆಲ್ಲ ಶಾಪವಾಗಿ ಮಾರ್ಪಡಿಸುವೆನು; ಈಗಾಗಲೇ ಮಾರ್ಪಡಿಸಿರುವೆನು. ನನ್ನ ಆಜ್ಞೆಯನ್ನು ನಿಮ್ಮಲ್ಲಿ ಯಾರೂ ಮನದಟ್ಟು ಮಾಡಿಕೊಂಡಿಲ್ಲ.


ಆದುದರಿಂದ ರಾಜಪುತ್ರರೆಲ್ಲರೂ ಸತ್ತರೆಂಬ ಸುದ್ದಿಗೆ ಅರಸರು ಲಕ್ಷ್ಯಕೊಡದಿರಲಿ; ಅಮ್ನೋನನೊಬ್ಬನೇ ಸತ್ತಿದ್ದಾನಷ್ಟೆ,” ಎಂದು ಹೇಳಿ ಸಂತೈಸಿದನು.


ಎಂದೇ ಸುರಿಸಿದನಾತ ರೋಷಾಗ್ನಿಯನು, ಯುದ್ಧದ ರೌದ್ರವನು ಅವರ ಮೇಲೆಲ್ಲ; ಸುತ್ತಲು ಉರಿ ಹತ್ತಿದರೂ ಅವರು ಅರಿಯಲಿಲ್ಲ, ದಹಿಸಿದರೂ ಅವರು ಕಲಿಯಲಿಲ್ಲ.


ಒಡೆಯಾ, ತಾವು ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ಸರ್ವೇಶ್ವರ ತಮ್ಮನ್ನು ಕಾಪಾಡಿದ್ದಾರೆ. ಸರ್ವೇಶ್ವರನಾಣೆ, ನಿಮ್ಮ ಜೀವದಾಣೆ, ನಿಮ್ಮ ವಿರೋಧಿಗಳೂ ನಿಮಗೆ ಕೇಡು ಬಗೆಯುವವರೂ ನಾಬಾಲನ ಗತಿಯನ್ನು ಹೊಂದಲಿ!


ಆಮೇಲೆ ಅವನ ಪಾದಗಳ ಮೇಲೆ ಬಿದ್ದು, “ಒಡೆಯಾ, ಅಪರಾಧವು ನನ್ನ ಮೇಲಿರಲಿ; ನಿಮ್ಮ ದಾಸಿಯಾದ ನಾನು ಮಾತಾಡುವುದಕ್ಕೆ ಅಪ್ಪಣೆಯಾಗಲಿ. ನನ್ನ ಮಾತನ್ನು ಆಲಿಸಬೇಕು;


ಇನ್ನು ಮೇಲೆ ಮೂರ್ಖನು ಮಹಾತ್ಮನೆನಿಸಿಕೊಳ್ಳನು. ಕಳ್ಳನು ಒಳ್ಳೆಯವನೆನಿಸಿಕೊಳ್ಳನು.


ಅವನ ಹೆಂಡತಿಯ ಹೆಸರು ಅಬೀಗೈಲ್. ಆಕೆ ಬಹು ಬುದ್ಧಿವಂತೆ ಹಾಗು ಸುಂದರಿ. ಕಾಲೇಬನ ವಂಶದವನಾದ ಆ ಮನುಷ್ಯನಾದರೊ ನಿಷ್ಠುರನು ಹಾಗು ದುಷ್ಕರ್ಮಿ. ಅವನು ಬಹು ಧನವಂತನೂ ಆಗಿದ್ದ. ಅವನಿಗೆ ಮೂರು ಸಾವಿರ ಕುರಿಗಳೂ ಸಾವಿರ ಆಡುಗಳೂ ಇದ್ದವು. ಅವನು ಒಮ್ಮೆ ಕರ್ಮೆಲಿನಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸುತ್ತಿದ್ದನು.


ನೀತಿವಂತನು ದಲಿತರ ಹಕ್ಕುಬಾಧ್ಯತೆಯನ್ನು ಕಾದಿರಿಸುವನು; ದುಷ್ಟರಿಗಿಲ್ಲ ಅದನ್ನು ಗ್ರಹಿಸುವಷ್ಟು ಅಕ್ಕರೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು