1 ಸಮುಯೇಲ 25:20 - ಕನ್ನಡ ಸತ್ಯವೇದವು C.L. Bible (BSI)20 ಆಕೆ ಕತ್ತೆಯ ಮೇಲೆ ಕೂತು ಗುಡ್ಡದ ಮರೆಯಲ್ಲಿ ಹೋಗುತ್ತಿರುವಾಗ ದಾವೀದನೂ ಅವನ ಜನರೂ ಆ ಕಡೆಯಿಂದ ಗುಡ್ಡ ಇಳಿದು ಬಂದರು. ಆಕೆ ಅವರನ್ನು ಎದುರುಗೊಂಡಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201920 ಆಕೆ ಕತ್ತೆಯ ಮೇಲೆ ಕುಳಿತುಕೊಂಡು ಗುಡ್ಡದ ಬದಿಯಲ್ಲಿ ಹೋಗುತ್ತಿರುವಾಗ, ದಾವೀದನೂ ಅವನ ಜನರೂ ಗುಡ್ಡ ಇಳಿದು ಆ ಕಡೆಯಿಂದ ಬರಲು ಆಕೆಯು ಅವರನ್ನು ಎದುರುಗೊಂಡಳು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)20 ಆಕೆ ಕತ್ತೆಯ ಮೇಲೆ ಕೂತು ಗುಡ್ಡದ ಮರೆಯಲ್ಲಿ ಹೋಗುತ್ತಿರುವಾಗ ದಾವೀದನೂ ಅವನ ಜನರೂ ಆ ಕಡೆಯಿಂದ ಗಟ್ಟಾ ಇಳಿದುಬರಲು ಆಕೆಯು ಅವರನ್ನು ಎದುರುಗೊಂಡಳು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್20 ಅಬೀಗೈಲಳು ಕತ್ತೆಯ ಮೇಲೆ ಸವಾರಿ ಮಾಡುತ್ತಾ ಬೆಟ್ಟದ ಮತ್ತೊಂದು ಕಡೆಗೆ ಬಂದು ಬೇರೊಂದು ದಿಕ್ಕಿನಿಂದ ಬರುತ್ತಿದ್ದ ದಾವೀದನನ್ನೂ ಅವನ ಜನರನ್ನೂ ಸಂಧಿಸಿದಳು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ20 ಆಗ, ಅವಳು ಒಂದು ಕತ್ತೆಯ ಮೇಲೆ ಹತ್ತಿಕೊಂಡು ಮಾರ್ಗದಲ್ಲಿ ಬೆಟ್ಟದ ಮರೆಗೆ ಬಂದಾಗ, ದಾವೀದನೂ ಅವನ ಜನರೂ ಅವಳಿಗೆ ಎದುರಾಗಿ ಇಳಿದು ಬಂದರು. ಅವಳು ಅವರನ್ನು ಎದುರುಗೊಂಡಳು. ಅಧ್ಯಾಯವನ್ನು ನೋಡಿ |