Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 25:10 - ಕನ್ನಡ ಸತ್ಯವೇದವು C.L. Bible (BSI)

10 ನಾಬಾಲನು ಅವರಿಗೆ, “ದಾವೀದನಾರು? ಜೆಸ್ಸೆಯನ ಮಗನಾರು? ಯಜಮಾನರನ್ನು ಬಿಟ್ಟು ಓಡಿಹೋದ ಗುಲಾಮರು ಈಗಿನ ಕಾಲದಲ್ಲಿ ಎಷ್ಟುಮಂದಿಯಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ನಾಬಾಲನು ಅವರಿಗೆ, “ದಾವೀದನಾರು? ಇಷಯನ ಮಗನಾರು? ಯಜಮಾನರನ್ನು ಬಿಟ್ಟು ಹೋದ ಸೇವಕರು ಈಗಿನ ಕಾಲದಲ್ಲಿ ಎಷ್ಟು ಮಂದಿಯಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ನಾಬಾಲನು ಅವರಿಗೆ - ದಾವೀದನಾರು? ಇಷಯನ ಮಗನಾರು? ಯಜಮಾನರನ್ನು ಬಿಟ್ಟು ಓಡಿಹೋದ ಸೇವಕರು ಈಗಿನ ಕಾಲದಲ್ಲಿ ಎಷ್ಟು ಮಂದಿಯಿಲ್ಲ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಆದರೆ ನಾಬಾಲನು ಅವರನ್ನು ಕೀಳಾಗಿ ಕಂಡು, “ದಾವೀದನು ಯಾರು? ಈ ಇಷಯನ ಮಗನೆಂಬವನು ಯಾರು? ಇತ್ತೀಚಿನ ದಿನಗಳಲ್ಲಿ ತಮ್ಮ ಒಡೆಯರ ಹತ್ತಿರದಿಂದ ಓಡಿ ಹೋಗಿರುವ ಅನೇಕ ಗುಲಾಮರುಗಳಿದ್ದಾರೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ನಾಬಾಲನು ದಾವೀದನ ಸೇವಕರಿಗೆ ಉತ್ತರವಾಗಿ, “ದಾವೀದನು ಯಾರು? ಇಷಯನ ಮಗನು ಯಾರು? ತಮ್ಮ ಯಜಮಾನನನ್ನು ಬಿಟ್ಟು ಅಗಲಿ ಹೋಗುವ ಸೇವಕರು ಈ ದಿವಸಗಳಲ್ಲಿ ಅನೇಕರು ಉಂಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 25:10
14 ತಿಳಿವುಗಳ ಹೋಲಿಕೆ  

ಎಬೇದನ ಮಗನಾದ ಗಾಳನೂ ಅವರ ಸಂಗಡ ಕೂಡಿಕೊಂಡು, “ಅಬೀಮೆಲೆಕನು ಎಷ್ಟರವನು? ಶೆಕೆಮಿನವರಾದ ನಾವು ಎಷ್ಟರವರು? ನಾವು ಅಬೀಮೆಲೆಕನಿಗೆ ಏಕೆ ಸೇವೆಮಾಡಬೇಕು? ಅವನು ಯೆರುಬ್ಬಾಳನ ಮಗನಲ್ಲವೇ? ಅವನ ಪುರಾಧಿಕಾರಿ ಜೆಬುನಲ್ಲವೇ? ನಾವು ಅವನಿಗೆ ಏಕೆ ಸೇವೆಮಾಡಬೇಕು? ಶೆಕೆಮನ ತಂದೆಯಾದ ಹಮೋರನ ವಂಶದವರಿಗೇ ಸೇವೆಮಾಡೋಣ.


ಕಳ್ಳನ ಸಾಧನಗಳು ಕೆಟ್ಟವುಗಳೇ. ಅವನ ಯೋಜನೆಗಳು ಅಬದ್ಧವಾದುವೇ. ದೀನದಲಿತರ ಕೋರಿಕೆಗಳು ನ್ಯಾಯಬದ್ಧವಾಗಿದ್ದರೂ ಸುಳ್ಳುಮಾತುಗಳಿಂದ ಅವರನ್ನು ಹಾಳುಮಾಡುತ್ತಾನೆ.


ಇನ್ನು ಮೇಲೆ ಮೂರ್ಖನು ಮಹಾತ್ಮನೆನಿಸಿಕೊಳ್ಳನು. ಕಳ್ಳನು ಒಳ್ಳೆಯವನೆನಿಸಿಕೊಳ್ಳನು.


ಹಿಂದಿನ ಕಾಲ ಈ ಕಾಲಕ್ಕಿಂತ ಮೇಲಾದುದಕ್ಕೆ ಕಾರಣ ಕೇಳಬೇಡ; ಇದು ಬುದ್ಧಿವಂತನು ಕೇಳುವ ಪ್ರಶ್ನೆಯಲ್ಲ.


ಅರಸನು ತಮ್ಮ ಮಾತನ್ನು ಲಕ್ಷಿಸಲಿಲ್ಲ ಎಂದು ನೋಡಿ ಇಸ್ರಯೇಲರೆಲ್ಲರೂ ಅವನಿಗೆ, “ದಾವೀದನಿಗೂ ನಮಗೂ ಏನೂ ಸಂಬಂಧವಿಲ್ಲ; ಜೆಸ್ಸೆಯ ಮಗನಿಗೂ ನಮಗೂ ಯಾವ ಬಾಧ್ಯತೆಯೂ ಇಲ್ಲ; ಇಸ್ರಯೇಲರೇ, ನಿಮ್ಮ ನಿಮ್ಮ ನಿವಾಸಗಳಿಗೆ ತೆರಳಿರಿ; ದಾವೀದನವರು ತಮ್ಮ ಕುಲವನ್ನು ತಾವೇ ನೋಡಿಕೊಳ್ಳಲಿ!” ಎಂದು ಹೇಳಿ ತಮ್ಮ ಮನೆಗಳಿಗೆ ಹೊರಟುಹೋದರು.


ಬೆನ್ಯಾಮೀನ್ ಕುಲದವನೂ ಬಿಕ್ರೀಯ ಮಗನೂ ಆದ ಶೆಬನೆಂಬ ಒಬ್ಬ ನೀಚ ವ್ಯಕ್ತಿ ಅಲ್ಲಿಗೆ ಹೇಗೋ ಬಂದಿದ್ದನು. ಅವನು ಕಹಳೆಯನ್ನು ಊದಿ, “ಇಸ್ರಯೇಲರೇ, ದಾವೀದನಿಗೂ ನಮಗೂ ಏನೂ ಸಂಬಂಧವಿಲ್ಲ. ಜೆಸ್ಸೆಯನ ಮಗನಲ್ಲಿ ನಮಗೆ ಹಕ್ಕುಭಾದ್ಯತೆಯಿಲ್ಲ. ಪ್ರತಿ ಒಬ್ಬನೂ ನಮ್ಮ ನಮ್ಮ ನಿವಾಸಗಳಿಗೆ ತೆರಳೋಣ,” ಎಂದನು.


ಇದಲ್ಲದೆ ಶೋಷಿತರು, ಸಾಲಗಾರರು ಹಾಗು ಮನನೊಂದವರು ಆಗಿದ್ದ ಜನಸಾಮಾನ್ಯರು ಬಂದು ಅವನನ್ನು ಆಶ್ರಯಿಸಿಕೊಂಡರು. ಹೀಗೆ ಅವನು ಸುಮಾರು ನಾನೂರು ಜನರಿಗೆ ನಾಯಕನಾದನು.


ಆಗ ಸೌಲನು ಸಿಡಿದೆದ್ದು ಯೋನಾತಾನನಿಗೆ, “ಎಲೋ, ದುಷ್ಟದಾಸಿಯ ಮಗನೇ, ನೀನು ಜೆಸ್ಸೆಯನ ಮಗನೊಡನೆ ಸ್ನೇಹದಿಂದ ಇರುವುದು ನನಗೆ ಗೊತ್ತಿಲ್ಲವೇ? ಈ ಸ್ನೇಹದಿಂದ ನಿನಗೂ ಹೆತ್ತವಳಿಗೂ ಮಾನಭಂಗ ತರುತ್ತಾ ಇರುವೆ.


ಅದಕ್ಕೆ ಫರೋಹನು, “ 'ಸರ್ವೇಶ್ವರ' ಎಂಬುವನು ಯಾರು? ನಾನು ಅವನ ಮಾತನ್ನು ಕೇಳಿ ಇಸ್ರಯೇಲರನ್ನು ಹೋಗಬಿಡಬೇಕೊ? ಆ ಸರ್ವೇಶ್ವರನು ಯಾರೋ ನನಗೆ ಗೊತ್ತಿಲ್ಲ. ಇಸ್ರಯೇಲರನ್ನು ನಾನು ಹೋಗಬಿಡುವುದಿಲ್ಲ,” ಎಂದು ಬಿಟ್ಟನು.


ದಾವೀದನ ಸೇವಕರು ಹೋಗಿ ಅವನ ಹೆಸರಿನಲ್ಲಿ ಈ ಮಾತುಗಳನ್ನೆಲ್ಲಾ ನಾಬಾಲನಿಗೆ ತಿಳಿಸಿದರು. ಅಲ್ಲೇ ಉತ್ತರಕ್ಕಾಗಿ ಕಾಯುತ್ತಿದ್ದರು.


ಮೃದುವಾದ ಮಾತು ಸಿಟ್ಟನ್ನಾರಿಸುತ್ತದೆ; ಬಿರುಸಾದ ನುಡಿ ಸಿಟ್ಟನ್ನೇರಿಸುತ್ತದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು