Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 22:8 - ಕನ್ನಡ ಸತ್ಯವೇದವು C.L. Bible (BSI)

8 ನನ್ನ ಮಗನು ಜೆಸ್ಸೆಯನ ಮಗನೊಡನೆ ಒಪ್ಪಂದಮಾಡಿಕೊಂಡದ್ದನ್ನು ನಿಮ್ಮಲ್ಲಿ ಒಬ್ಬನಾದರೂ ನನಗೆ ತಿಳಿಸಲಿಲ್ಲ. ನನ್ನ ಸೇವಕನೊಬ್ಬ ನನಗೆ ವಿರೋಧವಾಗಿ ಒಳಸಂಚುಮಾಡುವ ಹಾಗೆ ನನ್ನ ಮಗನೇ ಅವನನ್ನು ಎತ್ತಿಕಟ್ಟಿದ್ದಾನೆಂದು ಒಬ್ಬನಾದರೂ ನನಗೆ ಏಕೆ ತಿಳಿಸಲಿಲ್ಲ? ನನ್ನ ಹಿತಚಿಂತೆ ನಿಮಗೆ ಕಿಂಚಿತ್ತೂ ಇಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನನ್ನ ಮಗನು ಇಷಯನ ಮಗನೊಡನೆ ಒಡಂಬಡಿಕೆ ಮಾಡಿಕೊಂಡದ್ದನ್ನು ನಿಮ್ಮಲ್ಲಿ ಒಬ್ಬನಾದರೂ ನನಗೆ ತಿಳಿಸಲಿಲ್ಲವಲ್ಲಾ. ನನ್ನ ಸೇವಕನು ನನಗೆ ವಿರೋಧವಾಗಿ ಒಳಸಂಚುಮಾಡುವ ಹಾಗೆ ನನ್ನ ಮಗನೇ, ಅವನನ್ನು ಎಬ್ಬಿಸಿದ್ದಾನೆಂಬುದನ್ನು ಒಬ್ಬನಾದರೂ ನನಗೆ ಯಾಕೆ ತಿಳಿಸಲಿಲ್ಲ? ನೀವು ನನ್ನ ಚಿಂತೆಯನ್ನೇ ಬಿಟ್ಟಿದ್ದೀರಿ” ಅಂದನು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನನ್ನ ಮಗನು ಇಷಯನ ಮಗನೊಡನೆ ಒಡಂಬಡಿಕೆ ಮಾಡಿಕೊಂಡದ್ದನ್ನು ನಿಮ್ಮಲ್ಲಿ ಒಬ್ಬನಾದರೂ ನನಗೆ ತಿಳಿಸಲಿಲ್ಲವಲ್ಲಾ; ನನ್ನ ಸೇವಕನು ನನಗೆ ವಿರೋಧವಾಗಿ ಒಳಸಂಚುಮಾಡುವ ಹಾಗೆ ನನ್ನ ಮಗನೇ ಅವನನ್ನು ಎಬ್ಬಿಸಿದನೆಂದು ಒಬ್ಬನಾದರೂ ನನಗೆ ಯಾಕೆ ತಿಳಿಸಲಿಲ್ಲ; ನೀವು ನನ್ನ ಚಿಂತೆಯನ್ನೇ ಬಿಟ್ಟಿರಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನೀವು ನನ್ನ ವಿರುದ್ಧವಾಗಿ ಸಂಚುನಡೆಸುತ್ತಿರುವಿರಿ! ನೀವು ರಹಸ್ಯಯೋಜನೆಗಳನ್ನು ಮಾಡಿದ್ದೀರಿ. ನನ್ನ ಮಗ ಯೋನಾತಾನನ ಬಗ್ಗೆ ನಿಮ್ಮಲ್ಲಿ ಒಬ್ಬರೂ ನನಗೆ ತಿಳಿಸಲಿಲ್ಲ! ಅವನು ಇಷಯನ ಮಗನ ಜೊತೆ ಒಪ್ಪಂದ ಮಾಡಿಕೊಂಡಿದ್ದಾನೆಂದು ನಿಮ್ಮಲ್ಲಿ ಒಬ್ಬರೂ ನನಗೆ ತಿಳಿಸಲಿಲ್ಲ! ನಿಮ್ಮಲ್ಲಿ ಒಬ್ಬರೂ ನನ್ನ ಬಗ್ಗೆ ಚಿಂತಿಸುವುದಿಲ್ಲ! ನನ್ನ ಮಗ ಯೋನಾತಾನನು ದಾವೀದನನ್ನು ಪ್ರೋತ್ಸಾಹಿಸಿದ್ದಾನೆಂದು ನಿಮ್ಮಲ್ಲಿ ಒಬ್ಬರೂ ನನಗೆ ತಿಳಿಸಲಿಲ್ಲ. ಅಡಗಿಕೊಂಡು ನನ್ನ ಮೇಲೆ ಆಕ್ರಮಣ ಮಾಡುವಂತೆ ನನ್ನ ಸೇವಕನಾದ ದಾವೀದನಿಗೆ ಯೋನಾತಾನನು ಹೇಳಿಕೊಟ್ಟಿದ್ದಾನೆ! ಈಗ ದಾವೀದನು ಮಾಡುತ್ತಿರುವುದು ಅದನ್ನೇ!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಇದಲ್ಲದೆ ನಿಮ್ಮಲ್ಲಿ ನನ್ನ ಮಗನು ಇಷಯನ ಮಗನ ಸಂಗಡ ಒಡಂಬಡಿಕೆ ಮಾಡಿಕೊಂಡಿದ್ದನ್ನು ನನಗೆ ಯಾವನೂ ತಿಳಿಸಲಿಲ್ಲ. ನಿಮ್ಮಲ್ಲಿ ಯಾವನಾದರೂ ನನಗೋಸ್ಕರ ಚಿಂತಿಸಿ, ನನ್ನ ಮಗನು ಈ ಹೊತ್ತು ನನ್ನ ನಿಮಿತ್ತ ಅಡಗಿಕೊಂಡಿರುವಂತೆ ನನ್ನ ಸೇವಕನನ್ನು ನನಗೆ ವಿರೋಧವಾಗಿ ಒಳಸಂಚುಮಾಡಿ ಎಬ್ಬಿಸಿದ್ದನ್ನು ಯಾವನೂ ನನಗೆ ತಿಳಿಸಲಿಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 22:8
12 ತಿಳಿವುಗಳ ಹೋಲಿಕೆ  

ಯೋನಾತಾನನು ದಾವೀದನನ್ನು ತನ್ನ ಪ್ರಾಣಸ್ನೇಹಿತನನ್ನಾಗಿ ಪ್ರೀತಿಸುತ್ತಿದ್ದುದರಿಂದ ಅವನೊಂದಿಗೆ ಒಂದು ಒಪ್ಪಂದಮಾಡಿಕೊಂಡನು.


ಆಗ ಸೌಲನು ಅವರಿಗೆ, “ನೀವು ನನ್ನ ಮೇಲೆ ಕನಿಕರಪಟ್ಟದ್ದರಿಂದ ಸರ್ವೇಶ್ವರನ ಆಶೀರ್ವಾದ ನಿಮ್ಮ ಮೇಲಿರಲಿ!


ದೇವರು ಅವನ ಕಿವಿಗಳನ್ನು ತೆರೆಯುತ್ತಾನೆ ಉಪದೇಶಮಾಡಿ ಎಚ್ಚರಿಕೆ ನೀಡುತ್ತಾನೆ.


ಅನಂತರ ಯೋನಾತಾನನು ದಾವೀದನಿಗೆ, “ಸಮಾಧಾನದಿಂದ ಹೋಗು; ನಾವು ಸರ್ವೇಶ್ವರನ ಹೆಸರಿನಲ್ಲಿ ಆಣೆಯಿಟ್ಟು ಒಪ್ಪಂದಮಾಡಿಕೊಂಡಿದ್ದೇವಲ್ಲವೆ? ಅವರೇ ನನಗೂ ನಿನಗೂ ನನ್ನ ಸಂತಾನಕ್ಕೂ ನಿನ್ನ ಸಂತಾನಕ್ಕೂ ಸದಾ ಸಂಬಂಧಸಾಕ್ಷಿಯಾಗಿರಲಿ,” ಎಂದು ಹೇಳಿದನು. ಬಳಿಕ ದಾವೀದನು ಹೊರಟುಹೋದನು. ಇತ್ತ ಯೋನಾತಾನನು ಊರಿಗೆ ಹಿಂದಿರುಗಿದನು.


ಸೇವಕನ ಮೇಲೆ ದಯವಿರಲಿ. ನೀನು ಸರ್ವೇಶ್ವರನ ಸನ್ನಿಧಿಯಲ್ಲಿ ನನ್ನೊಡನೆ ಒಡಂಬಡಿಕೆ ಮಾಡಿಕೊಂಡಿರುವೆಯಲ್ಲವೆ? ನಾನು ಅಪರಾಧಿಯಾಗಿದ್ದರೆ, ನನ್ನನ್ನು ನಿನ್ನ ತಂದೆಗೆ ಒಪ್ಪಿಸಬೇಕಾಗಿಲ್ಲ, ನೀನೆ ಕೊಂದುಹಾಕು,” ಎಂದು ಹೇಳಿದನು.


ಯೋನಾತಾನನು ಅವನಿಗೆ, “ಇದು ಎಂದಿಗೂ ಆಗಲೇಬಾರದು; ನಿನಗೆ ಮರಣವಾಗಕೂಡದು. ನನ್ನ ತಂದೆ ಚಿಕ್ಕಕಾರ್ಯವನ್ನಾಗಲಿ ದೊಡ್ಡಕಾರ್ಯವನ್ನಾಗಲಿ ನನಗೆ ತಿಳಿಸದೆ ಮಾಡುವುದಿಲ್ಲ; ಇಂಥ ಕಾರ್ಯವನ್ನು ನನಗೆ ಹೇಗೆ ಮರೆಮಾಡಿಯಾರು? ಇಲ್ಲ, ಇದು ನಿಜವಲ್ಲ,” ಎಂದು ಹೇಳಿದನು.


ಆಗ ಸೌಲನು, “ನೀನು ನನಗೆ ವಿರೋಧವಾಗಿ ಜೆಸ್ಸೆಯನ ಮಗನೊಡನೆ ಒಳಸಂಚುಮಾಡಿದ್ದೇಕೆ? ಅವನು ನನಗೆ ವಿರೋಧವಾಗಿ ಎದ್ದು ನನ್ನ ಜೀವಕ್ಕಾಗಿ ಹೊಂಚುಹಾಕುವಂತೆ ನೀನು ಅವನಿಗೆ ರೊಟ್ಟಿ ಹಾಗು ಕತ್ತಿಯನ್ನು ಕೊಟ್ಟು ದೈವೋತ್ತರವನ್ನು ತಿಳಿಸಿದ್ದೇಕೆ?” ಎಂದು ಕೇಳಿದನು.


ದಾವೀದನ ಮತ್ತು ಸೌಲನ ಸಂಭಾಷಣೆ ಮುಗಿಯಿತು. ಇದಾದ ಕೂಡಲೆ ಯೋನಾತಾನನು ಹಾಗು ದಾವೀದನು ಪ್ರಾಣ ಗೆಳೆಯರಾದರು. ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು.


ಈ ಕಾರಣ ಸಿರಿಯಾದ ಅರಸನು ಕಳವಳಗೊಂಡು, ತನ್ನ ಸೇನಾಪತಿಗಳನ್ನು ಕರೆದು, “ನಮ್ಮವರಲ್ಲಿ ಇಸ್ರಯೇಲರ ಅರಸನ ಪಕ್ಷದವರು ಯಾರೋ ಇದ್ದಾರೆ; ನನಗೆ ನೀವು ಯಾರೂ ತಿಳಿಸುವುದಿಲ್ಲವೇ?’ ಎಂದು ಕೇಳಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು