Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 22:18 - ಕನ್ನಡ ಸತ್ಯವೇದವು C.L. Bible (BSI)

18 ಆದುದರಿಂದ ಸೌಲನು ಎದೋಮ್ಯನಾದ ದೋಯೇಗನಿಗೆ, “ನೀನು ಹೋಗಿ ಅವರನ್ನು ಕೊಲ್ಲು,” ಎಂದು ಆಜ್ಞಾಪಿಸಿದನು. ಅವನು ನಾರುಮಡಿಯ ಏಫೋದನ್ನು ಧರಿಸಿಕೊಂಡಿದ್ದ ಎಂಬತ್ತೈದು ಮಂದಿ ಯಾಜಕರನ್ನು ಆ ದಿವಸ ಕೊಂದುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆದ್ದರಿಂದ ಸೌಲನು ಎದೋಮ್ಯನಾದ ದೋಯೇಗನಿಗೆ, “ನೀನು ಹೋಗಿ ಅವರನ್ನು ಕೊಲ್ಲು” ಎಂದು ಆಜ್ಞಾಪಿಸಲು, ಅವನು ನಾರು ಬಟ್ಟೆಯ ಎಪೋದನ್ನು ಧರಿಸಿಕೊಂಡಿದ್ದ ಎಂಭತ್ತೈದು ಯಾಜಕರನ್ನು ಆ ದಿನ ಕೊಂದುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಆದದರಿಂದ ಸೌಲನು ಎದೋಮ್ಯನಾದ ದೋಯೇಗನಿಗೆ - ನೀನು ಹೋಗಿ ಅವರನ್ನು ಕೊಲ್ಲು ಎಂದು ಆಜ್ಞಾಪಿಸಲು ಅವನು ನಾರು ಬಟ್ಟೆಯ ಏಫೋದನ್ನು ಧರಿಸಿಕೊಂಡಿದ್ದ ಎಂಭತ್ತೈದು ಮಂದಿ ಯಾಜಕರನ್ನು ಆ ದಿವಸ ಕೊಂದುಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಆದ್ದರಿಂದ ರಾಜನು ದೋಯೇಗನಿಗೆ, “ನೀನು ಹೋಗಿ ಯಾಜಕರನ್ನು ಕೊಂದುಹಾಕು” ಎಂದು ಹೇಳಿದನು. ಆದ್ದರಿಂದ ಎದೋಮ್ಯನಾದ ದೋಯೇಗನು ಹೋಗಿ ಆ ದಿನ ಎಂಭತ್ತೈದು ಮಂದಿ ಯಾಜಕರನ್ನು ಕೊಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಆಗ ಅರಸನು ದೋಯೇಗನಿಗೆ, “ನೀನು ತಿರುಗಿಕೊಂಡು ಯಾಜಕರ ಮೇಲೆ ಬೀಳು,” ಎಂದನು. ಆಗ ಎದೋಮ್ಯನಾದ ದೋಯೇಗನು ತಿರುಗಿಕೊಂಡು ಯಾಜಕರ ಮೇಲೆ ಬಿದ್ದು, ನಾರುಬಟ್ಟೆಯ ಏಫೋದನ್ನು ಧರಿಸಿಕೊಳ್ಳುವವರಾದ ಎಂಬತ್ತೈದು ಯಾಜಕರನ್ನು ಆ ದಿನದಲ್ಲಿ ಕೊಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 22:18
14 ತಿಳಿವುಗಳ ಹೋಲಿಕೆ  

ಅದರ ಪ್ರಮುಖರು ಗರ್ಜಿಸುವ ಸಿಂಹಗಳು. ಅದರ ನ್ಯಾಯಾಧಿಪತಿಗಳು ಹಸಿದ ತೋಳಗಳು. ಕಡಿಯುವುದಕ್ಕೆ ಎಲುಬನ್ನು ಕೂಡ ಮರುದಿನದವರೆಗೆ ಉಳಿಸವು.


“ಒಮ್ರಿ ಅರಸನ ಆಜ್ಞೆಗಳನ್ನೂ ಅಹಾಬ್ ಮನೆತನದ ದುರಾಚಾರಗಳನ್ನೂ ಅವರ ಸಂಪ್ರದಾಯಗಳನ್ನೂ ಅನುಸರಿಸುತ್ತಾ ಬಂದಿದ್ದೀರಿ. ಆದಕಾರಣ ನಿಮ್ಮನ್ನು ವಿನಾಶಗೊಳಿಸುವೆನು; ನಿಮ್ಮ ಜನರನ್ನು ಅಪಹಾಸ್ಯಕ್ಕೆ ಈಡುಮಾಡುವೆನು. ನೀವು ಜನಾಂಗಗಳ ನಿಂದೆಗೆ ಗುರಿಯಾಗುವಿರಿ.”


“ಅವರು ಅಧರ್ಮದಿಂದ ಅರಸನನ್ನು ಆನಂದಗೊಳಿಸುತ್ತಾರೆ; ಅಸತ್ಯದಿಂದ ಅಧಿಕಾರಿಗಳನ್ನು ಸಂತೋಷಪಡಿಸುತ್ತಾರೆ.


ದುರಾಚಾರಗಳನ್ನು ಅನುಸರಿಸಲು ನಿರ್ಧರಿಸಿದ ಕಾರಣ, ಎಫ್ರಯಿಮ್ ನ್ಯಾಯತೀರ್ಪಿಗೆ ಗುರಿಯಾಗಿದೆ; ಹಿಂಸೆಗೀಡಾಗಿದೆ; ನುಚ್ಚುನೂರಾಗಿದೆ.


ಆಗ ಅವರು ಅವನಿಗೆ ವಿರೋಧವಾಗಿ ಒಳಸಂಚುಮಾಡಿ,ಸರ್ವೇಶ್ವರನ ಆಲಯದ ಪ್ರಾಕಾರದಲ್ಲಿ ಅವನನ್ನು ಕಲ್ಲೆಸೆದು ಕೊಂದರು. ಇದು ಅರಸ ಯೆಹೋವಾಷನ ಅಪ್ಪಣೆಯಿಂದಲೇ ಆಯಿತು.


ನಿನ್ನ ಮನೆಯಲ್ಲಿ ಅಳಿದು ಉಳಿದವರು ಬಂದು ಅವನ ಮುಂದೆ ಅಡ್ಡಬೀಳುವರು; ‘ನಮಗೊಂದು ಬೆಳ್ಳಿಕಾಸನ್ನಾದರೂ ರೊಟ್ಟಿ ಚೂರನ್ನಾದರೂ ಕೊಡು; ಒಂದು ತುತ್ತು ಅನ್ನಕ್ಕೆ ಮಾರ್ಗವಾಗುವ ಹಾಗೆ ದೇವಸ್ಥಾನದ ಸೇವೆಯಲ್ಲಿ ಯಾವುದಕ್ಕಾದರು ನಮ್ಮನ್ನು ಸೇರಿಸಿಕೋ’ ಎಂದು ಬೇಡಿಕೊಳ್ಳುವರು".


ಇಸ್ರಯೇಲರ ಕುಟುಂಬಗಳಲ್ಲೆಲ್ಲಾ ಅವರನ್ನೇ, ಯಾಜಕ ಸೇವಾವೃತ್ತಿಗೆ ಆರಿಸಿಕೊಂಡೆ: ಅಂದರೆ, ಬಲಿಯರ್ಪಿಸುವುದಕ್ಕೆ, ಧೂಪಾರತಿ ಎತ್ತುವುದಕ್ಕೆ ಹಾಗು ‘ಏಫೋದ’ನ್ನು ಧರಿಸಿಕೊಳ್ಳುವುದಕ್ಕೆ ಆರಿಸಿಕೊಂಡೆ; ಇಸ್ರಯೇಲರು ಅರ್ಪಿಸುವ ಬಲಿಶೇಷದ ಹಕ್ಕನ್ನೂ ಅವರಿಗೆ ಅನುಗ್ರಹಿಸಿದೆ.


ಬಾಲಕನಾದ ಸಮುವೇಲನು ‘ಏಫೋದ’ ಎಂಬ ಪ್ರತ್ಯೇಕ ಮಡಿಯಂಗಿಯನ್ನು ತೊಟ್ಟುಕೊಂಡು ಸರ್ವೇಶ್ವರನ ಸಾನ್ನಿಧ್ಯಸೇವೆಯನ್ನು ಮಾಡುತ್ತಿದ್ದನು.


“ಆರೋನನ ಮಕ್ಕಳಿಗೆ ತಕ್ಕ ಗೌರವ ಹಾಗು ಶೋಭೆ ಸಿಗುವಂತೆ ನಿಲುವಂಗಿಗಳನ್ನೂ ನಡುಕಟ್ಟುಗಳನ್ನೂ ಹಾಗು ಪೇಟಗಳನ್ನು ಮಾಡಿಸು.


ಬಲಿಯಾದರವರ ಯಾಜಕರು ಶತ್ರುಕತ್ತಿಗೆ I ವಿಧವೆಯರು ರೋದಿಸಲಿಲ್ಲ ಅವರ ಸಾವಿಗೆ II


ದುಷ್ಟನೇ, ನೀತಿವಂತನ ಮನೆಗೆ ಕನ್ನಹಾಕಬೇಡ; ಅವನು ಕೂಡಿಸಿದ್ದನ್ನು ಕೊಳ್ಳೆಹೊಡೆಯಬೇಡ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು