1 ಸಮುಯೇಲ 22:15 - ಕನ್ನಡ ಸತ್ಯವೇದವು C.L. Bible (BSI)15 ನಾನು ಅವರ ಪರವಾಗಿ ದೇವರ ಸನ್ನಿಧಿಯಲ್ಲಿ ವಿಚಾರಮಾಡಿದ್ದು ಇದೇ ಮೊದಲನೆಯ ಸಾರಿಯೇ? ಇಲ್ಲವೇ ಇಲ್ಲ, ಅರಸರು ತಮ್ಮ ಸೇವಕನಾದ ನನ್ನ ಮೇಲೆ ಹಾಗು ನನ್ನ ಮನೆಯವರ ಮೇಲೆ ಇಂಥ ಅಪವಾದವನ್ನು ಹೊರಿಸಬಾರದು. ಈ ವಿಷಯದಲ್ಲಿ ತಮ್ಮ ಸೇವಕನಾದ ನನಗೆ ಸ್ವಲ್ಪವೂ ಗೊತ್ತಿರಲಿಲ್ಲ,” ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201915 ನಾನು ಅವನಿಗೋಸ್ಕರ ದೇವರ ಸನ್ನಿಧಿಯಲ್ಲಿ ವಿಚಾರಮಾಡಿದ್ದು ಇದೇ ಮೊದಲನೆಯ ಸಾರಿಯೋ? ಇದು ನನಗೆ ದೂರವಾಗಿರಲಿ. ಅರಸನು ತನ್ನ ಸೇವಕರ ಮೇಲೆ ಅವನ ಮನೆಯವರ ಮೇಲೆ ಇಂಥ ಮಾತನ್ನು ಹೊರಿಸಬಾರದು. ಈ ವಿಷಯದಲ್ಲಿ ನಿನ್ನ ಸೇವಕನಿಗೆ ಸ್ವಲ್ಪವೂ ಗೊತ್ತಿರಲಿಲ್ಲ” ಎಂದು ಉತ್ತರ ಕೊಟ್ಟನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)15 ನಾನು ಅವನಿಗೋಸ್ಕರ ದೇವರ ಸನ್ನಿಧಿಯಲ್ಲಿ ವಿಚಾರಮಾಡಿದ್ದು ಇದೇ ಮೊದಲನೆಯ ಸಾರಿಯೋ? ಇದು ನನಗೆ ದೂರವಾಗಿರಲಿ; ಅರಸನು ತನ್ನ ಸೇವಕನ ಮೇಲೆಯೂ ಅವನ ಮನೆಯವರ ಮೇಲೆಯೂ ಇಂಥ ಮಾತನ್ನು ಹೊರಿಸಬಾರದು. ಈ ವಿಷಯದಲ್ಲಿ ನಿನ್ನ ಸೇವಕನಿಗೆ ಸ್ವಲ್ಪವೂ ಗೊತ್ತಿರಲಿಲ್ಲ ಎಂದು ಉತ್ತರಕೊಟ್ಟನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್15 ದಾವೀದನಿಗಾಗಿ ನಾನು ದೇವರಲ್ಲಿ ಪ್ರಾರ್ಥಿಸಿದ್ದು ಅದು ಮೊದಲನೆಯ ಸಲವಂತೂ ಅಲ್ಲವೇ ಅಲ್ಲ. ನನ್ನ ಮೇಲಾಗಲಿ ನನ್ನ ಬಂಧುಗಳ ಮೇಲಾಗಲಿ ತಪ್ಪು ಹೊರಿಸಬೇಡ. ನಾವೆಲ್ಲ ನಿನ್ನ ಸೇವಕರು. ಈಗ ಏನು ನಡೆಯುತ್ತಿದೆಯೋ ಅದು ನನಗೆ ಸ್ವಲ್ಪವೂ ತಿಳಿದಿಲ್ಲ” ಎಂದು ಉತ್ತರಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ15 ನಾನು ಅವನಿಗೋಸ್ಕರ ದೇವರನ್ನು ಕೇಳಿಕೊಂಡದ್ದು ಅದೇ ಮೊದಲನೆಯದೋ? ಅಲ್ಲವೇ ಅಲ್ಲ. ಅರಸನು ತನ್ನ ಸೇವಕನ ಮೇಲಾದರೂ ಇಲ್ಲವೆ ಅವನ ಕುಟುಂಬದವರ ಮೇಲಾದರೂ ಇಂಥ ಅಪವಾದವನ್ನು ಹೊರಿಸಬಾರದು, ಏಕೆಂದರೆ ಆ ಕಾರ್ಯದ ಬಗ್ಗೆ ನಮಗೇನೂ ತಿಳಿದಿಲ್ಲ,” ಎಂದನು. ಅಧ್ಯಾಯವನ್ನು ನೋಡಿ |