Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 20:31 - ಕನ್ನಡ ಸತ್ಯವೇದವು C.L. Bible (BSI)

31 ಆ ಜೆಸ್ಸೆಯನ ಮಗ ಭೂಲೋಕದಲ್ಲಿ ಇರುವವರೆಗೆ ನಿನಗಾಗಲಿ, ರಾಜನಾಗುವ ಹಕ್ಕುಬಾಧ್ಯತೆಗಳಿಗಾಗಲಿ ಉಳಿವಿಲ್ಲ. ಆದುದರಿಂದ ಹೋಗು, ಅವನನ್ನು ಕರೆಯಿಸಿ ನನ್ನ ಬಳಿಗೆ ತೆಗೆದುಕೊಂಡು ಬಾ; ಅವನು ಸಾಯಬೇಕು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಆ ಇಷಯನ ಮಗನು ಭೂಲೋಕದಲ್ಲಿರುವವರೆಗೆ ನಿನಗಾದರೂ, ನಿನ್ನ ರಾಜ್ಯಕ್ಕಾದರೂ ನೆಲೆಯಿಲ್ಲ. ಆದುದರಿಂದ ಅವನನ್ನು ಕರಿಸಿ ನನ್ನ ಬಳಿಗೆ ತೆಗೆದುಕೊಂಡು ಬಾ. ಅವನು ಸಾಯಬೇಕು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಆ ಇಷಯನ ಮಗನು ಭೂಲೋಕದಲ್ಲಿರುವವರೆಗೆ ನಿನಗಾದರೂ ನಿನ್ನ ರಾಜ್ಯಕ್ಕಾದರೂ ನೆಲೆಯಿಲ್ಲ; ಆದದರಿಂದ ಅವನನ್ನು ಕರಿಸಿ ನನ್ನ ಬಳಿಗೆ ತೆಗೆದುಕೊಂಡು ಬಾ; ಅವನು ಸಾಯಬೇಕು ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಇಷಯನ ಮಗ ಬದುಕಿರುವವರೆಗೆ ನೀನು ರಾಜನಾಗುವುದೇ ಇಲ್ಲ; ನಿನಗೆ ರಾಜ್ಯಾಧಿಕಾರವೂ ಸಿಗುವುದಿಲ್ಲ. ಈಗ ದಾವೀದನನ್ನು ಕರೆದುಕೊಂಡು ಬಾ! ಅವನೊಬ್ಬ ಸತ್ತಮನುಷ್ಯ!” ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಏಕೆಂದರೆ ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳವರೆಗೂ ನೀನಾದರೂ, ನಿನ್ನ ರಾಜ್ಯವಾದರೂ ಸ್ಥಿರವಾಗುವುದಿಲ್ಲ. ಆದ್ದರಿಂದ ಈಗ ನೀನು ಅವನನ್ನು ಕರೆಕಳುಹಿಸಿ, ನನ್ನ ಬಳಿಗೆ ತೆಗೆದುಕೊಂಡು ಬಾ. ಏಕೆಂದರೆ ಅವನು ನಿಜವಾಗಿ ಸಾಯಲೇಬೇಕು,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 20:31
9 ತಿಳಿವುಗಳ ಹೋಲಿಕೆ  

ಸೇವಕನ ಮೇಲೆ ದಯವಿರಲಿ. ನೀನು ಸರ್ವೇಶ್ವರನ ಸನ್ನಿಧಿಯಲ್ಲಿ ನನ್ನೊಡನೆ ಒಡಂಬಡಿಕೆ ಮಾಡಿಕೊಂಡಿರುವೆಯಲ್ಲವೆ? ನಾನು ಅಪರಾಧಿಯಾಗಿದ್ದರೆ, ನನ್ನನ್ನು ನಿನ್ನ ತಂದೆಗೆ ಒಪ್ಪಿಸಬೇಕಾಗಿಲ್ಲ, ನೀನೆ ಕೊಂದುಹಾಕು,” ಎಂದು ಹೇಳಿದನು.


ಸೌಲನು ಯೋನಾತಾನನ ಮಾತುಗಳನ್ನು ಆಲಿಸಿದನು. “ಸರ್ವೇಶ್ವರನಾಣೆ, ಅವನನ್ನು ಕೊಲ್ಲುವುದಿಲ್ಲ,” ಎಂದು ಪ್ರಮಾಣಮಾಡಿದನು.


ಸೆರೆಹೋಗಿರುವವರ ನರಳಾಟಕೆ ಕಿವಿಗೊಡು ನೀನು I ನಿನ್ನ ಶಕ್ತಿ ಕಾದಿಡಲಿ ಸಾವಿಗೀಡಾಗಿರುವ ಅವರನು II


ನನ್ನ ತಂದೆಯ ಮನೆಯವರೆಲ್ಲರೂ ಅರಸರಾದ ನನ್ನ ಒಡೆಯರ ದೃಷ್ಟಿಯಲ್ಲಿ ಮರಣಕ್ಕೆ ಪಾತ್ರರಾಗಿದ್ದರು. ಆದರೂ ತಮ್ಮ ಸೇವಕನಾದ ನನ್ನನ್ನು ಭೋಜನಕ್ಕೆ ತಮ್ಮ ಪಂಕ್ತಿಯಲ್ಲಿ ಕುಳ್ಳಿರಿಸಿಕೊಂಡಿರಿ. ಅರಸರಿಗೆ ಹೆಚ್ಚಾಗಿ ಮೊರೆ ಇಡುವುದಕ್ಕೆ ನಾನು ಯೋಗ್ಯನಲ್ಲ,” ಎಂದು ಉತ್ತರಕೊಟ್ಟನು.


ನೀನು ಹೀಗೆ ಮಾಡುವುದು ಸರಿಯಲ್ಲ. ಸರ್ವೇಶ್ವರನಾಣೆ, ಅವರ ಅಭಿಷಿಕ್ತನಾಗಿರುವ ನಿಮ್ಮ ಒಡೆಯನನ್ನು ಕಾಯದಿರುವ ನೀವು ಮರಣಕ್ಕೆ ಪಾತ್ರರೆಂಬುದೇನೋ ನಿಜ. ಅರಸನ ತಲೆಯ ಬಳಿಯಲ್ಲಿದ್ದ ಭರ್ಜಿ, ತಂಬಿಗೆ ಏನಾದವೋ, ನೋಡು,” ಎಂದು ಕೂಗಿ ಹೇಳಿದನು.


ಆಗ ಸೌಲನು ಸಿಡಿದೆದ್ದು ಯೋನಾತಾನನಿಗೆ, “ಎಲೋ, ದುಷ್ಟದಾಸಿಯ ಮಗನೇ, ನೀನು ಜೆಸ್ಸೆಯನ ಮಗನೊಡನೆ ಸ್ನೇಹದಿಂದ ಇರುವುದು ನನಗೆ ಗೊತ್ತಿಲ್ಲವೇ? ಈ ಸ್ನೇಹದಿಂದ ನಿನಗೂ ಹೆತ್ತವಳಿಗೂ ಮಾನಭಂಗ ತರುತ್ತಾ ಇರುವೆ.


ದಾವೀದನಿಗೆ, “ಭಯಪಡಬೇಡ; ನೀನು ನನ್ನ ತಂದೆಯಾದ ಸೌಲನ ಕೈಗೆ ಸಿಕ್ಕಿಬೀಳುವುದಿಲ್ಲ; ನೀನು ಇಸ್ರಯೇಲರ ಅರಸನಾಗುವೆ; ನಾನು ನಿನಗೆ ಎರಡನೆಯವನಾಗಿರುವೆನು. ಹೀಗಾಗುವುದೆಂದು ನನ್ನ ತಂದೆ ಸೌಲ ತಿಳಿದುಕೊಂಡಿದ್ದಾರೆ.” ಎಂದು ಹೇಳಿ ದೇವರ ಹೆಸರಿನಲ್ಲಿ ಧೈರ್ಯತುಂಬಿದನು.


ಇದನ್ನು ಕೇಳಿದ್ದೇ ದಾವೀದನು ಆ ವ್ಯಕ್ತಿಯ ಮೇಲೆ ಕಡುಕೋಪಗೊಂಡು ನಾತಾನನಿಗೆ, “ಸರ್ವೇಶ್ವರನಾಣೆ, ಆ ವ್ಯಕ್ತಿ ಸಾಯಲೇ ಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು