Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 20:12 - ಕನ್ನಡ ಸತ್ಯವೇದವು C.L. Bible (BSI)

12 ಅವರಿಬ್ಬರೂ ಅಡವಿಗೆ ಹೋದರು. ಅಲ್ಲಿ ಯೋನಾತಾನನು ದಾವೀದನಿಗೆ, “ಇಸ್ರಯೇಲ್ ದೇವರಾದ ಸರ್ವೇಶ್ವರನೇ ಸಾಕ್ಷಿ! ನಾನು ನಾಳೆ ಇಲ್ಲವೆ ನಾಡಿದ್ದು ನಿನ್ನ ವಿಷಯದಲ್ಲಿ ನನ್ನ ತಂದೆಯೊಡನೆ ಮಾತಾಡಿ, ನಿನ್ನ ಮೇಲೆ ಅವರಿಗೆ ದಯೆಯುಂಟೆಂದು ಗೊತ್ತಾದರೆ ಕೂಡಲೆ ನಿನಗೆ ತಿಳಿಯಪಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಅವರಿಬ್ಬರೂ ಹೊಲಕ್ಕೆ ಹೋದ ಮೇಲೆ ಯೋನಾತಾನನು ದಾವೀದನಿಗೆ, “ಇಸ್ರಾಯೇಲರ ದೇವರಾದ ಯೆಹೋವನೇ ಸಾಕ್ಷಿ, ನಾನು ನಾಳೆ ಇಲ್ಲವೆ ನಾಡಿದ್ದು ನಿನ್ನ ವಿಷಯದಲ್ಲಿ ನನ್ನ ತಂದೆಯೊಡನೆ ಮಾತನಾಡಿ, ನಿನ್ನ ಮೇಲೆ ಅವನಿಗೆ ದಯೆ ಉಂಟೆಂದು ಗೊತ್ತಾದರೆ ಕೂಡಲೆ ನಿನಗೆ ತಿಳಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಅವರಿಬ್ಬರೂ ಅಡವಿಗೆ ಹೋದ ಮೇಲೆ ಯೋನಾತಾನನು ದಾವೀದನಿಗೆ - ಇಸ್ರಾಯೇಲ್‍ದೇವರಾದ ಯೆಹೋವನೇ ಸಾಕ್ಷಿ; ನಾನು ನಾಳೆ ಇಲ್ಲವೆ ನಾಡದು ನಿನ್ನ ವಿಷಯದಲ್ಲಿ ನನ್ನ ತಂದೆಯೊಡನೆ ಮಾತಾಡಿ ನಿನ್ನ ಮೇಲೆ ಅವನಿಗೆ ದಯವುಂಟೆಂದು ಗೊತ್ತಾದರೆ ಕೂಡಲೆ ನಿನಗೆ ತಿಳಿಯಪಡಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಯೋನಾತಾನನು ದಾವೀದನಿಗೆ, “ನಾನು ಇಸ್ರೇಲರ ದೇವರಾದ ಯೆಹೋವನ ಎದುರಿನಲ್ಲಿ ಈ ಪ್ರಮಾಣವನ್ನು ಮಾಡುತ್ತೇನೆ. ನನ್ನ ತಂದೆಯು ನಿನ್ನ ಬಗ್ಗೆ ಒಳ್ಳೆಯ ಭಾವನೆಯನ್ನು ಹೊಂದಿರುವನೊ ಇಲ್ಲವೊ ಎಂಬುದನ್ನು ತಿಳಿದುಕೊಳ್ಳುತ್ತೇನೆ. ನಂತರ ಸಂದೇಶವೊಂದನ್ನು ನಾನು ಮೂರು ದಿನಗಳೊಳಗಾಗಿ ನಿನಗೆ ಕಳುಹಿಸಿಕೊಡುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಯೋನಾತಾನನು ದಾವೀದನಿಗೆ, “ಇಸ್ರಾಯೇಲರ ದೇವರಾದ ಯೆಹೋವ ದೇವರೇ, ನಾನು ನಾಳೆ ನಾಡಿದ್ದರೊಳಗೆ ನನ್ನ ತಂದೆಯನ್ನು ವಿಚಾರಿಸಲು, ದಾವೀದನ ಮೇಲೆ ದಯೆ ಇದ್ದರೆ ನಿನಗೆ ತಿಳಿಸುವ ಹಾಗೆ ಹೇಳಿಕಳುಹಿಸದೆ ಇದ್ದರೆ, ಯೆಹೋವ ದೇವರು ಯೋನಾತಾನನಿಗೆ ಅದಕ್ಕಿಂತ ಅಧಿಕವಾಗಿ ಮಾಡಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 20:12
10 ತಿಳಿವುಗಳ ಹೋಲಿಕೆ  

ಮಾನವನ ಅಂತರಾಲೋಚನೆಗಳು ಆಳವಾದ ಜಲನಿಧಿ; ವಿವೇಕಿಯಾದ ವ್ಯಕ್ತಿ ಅದನ್ನು ಹೊರ ತೆಗೆಯಬಲ್ಲ ಸೇದಿ.


ಹೃದಯ ವೀಕ್ಷಿಸು, ಇರುಳೆಲ್ಲ ವಿಚಾರಿಸು, ಅಗ್ನಿಪರೀಕ್ಷೆ ಮಾಡಿಸು I ನಾ ದೋಷರಹಿತ, ಮಾತಲಿ ತಪ್ಪದವ, ಎಂದಾಗ ತೀರ್ಮಾನಿಸು II


ಆತ ನನ್ನ ನಡತೆಯನ್ನೂ ನೋಡುತ್ತಾನೆ; ನನ್ನ ಹೆಜ್ಜೆಗಳನ್ನೂ ಎಣಿಸುತ್ತಾನಲ್ಲವೆ?


“ದೇವಾಧಿದೇವರಾದ ಸರ್ವೇಶ್ವರ ಇದಕ್ಕೆ ಸಾಕ್ಷಿ; ಆ ದೇವಾಧಿದೇವ ಸರ್ವೇಶ್ವರಸ್ವಾಮಿಗೆ ಇದು ಗೊತ್ತಿದೆ. ಇಸ್ರಯೇಲರಿಗೂ ಗೊತ್ತಾಗುವುದು. ನಾವು ದ್ರೋಹಿಗಳು, ಸರ್ವೇಶ್ವರನಿಗೆ ವಿರುದ್ಧ ಪಾಪಮಾಡಿದವರು ಆಗಿದ್ದರೆ ಆ ಸ್ವಾಮಿ ನಮ್ಮನ್ನು ಇಂದೇ ಜೀವದಿಂದುಳಿಸದಿರಲಿ.


ಯೋನಾತಾನನು ಅವನಿಗೆ, “ನಾವು ಅಡವಿಗೆ ಹೋಗೋಣ ಬಾ,” ಎಂದು ಹೇಳಿದನು.


ನನ್ನ ತಂದೆ ನಿನಗೆ ಕೇಡುಮಾಡಲು ಮನಸ್ಸುಮಾಡಿದ್ದಾರೆಂದು ಗೊತ್ತಾದರೆ, ಅದನ್ನೂ ನಿನಗೆ ತಿಳಿಸಿ ನೀನು ತಪ್ಪಿಸಿಕೊಂಡು ಸುರಕ್ಷಿತನಾಗುವ ಹಾಗೆ ನಿನ್ನನ್ನು ಕಳುಹಿಸಿಬಿಡುವೆನು. ಹಾಗೆ ಮಾಡದಿದ್ದರೆ, ಸರ್ವೇಶ್ವರ ನನಗೆ ಏನು ಬೇಕಾದರೂ ಮಾಡಲಿ. ಅವರು ನನ್ನ ತಂದೆಯೊಂದಿಗೆ ಇದ್ದಹಾಗೆ ನಿನ್ನೊಂದಿಗೂ ಇರಲಿ.


ಅವರಿಬ್ಬರೂ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದಮಾಡಿಕೊಂಡರು. ತರುವಾಯ ಯೋನಾತಾನನು ತನ್ನ ಮನೆಗೆ ಹೋದನು. ದಾವೀದನು ಹೋರೆಷದಲ್ಲಿಯೇ ಇದ್ದನು.


ದಾವೀದನು ತಾನು ಸೌಲನ ಮಗ ಯೋನಾತಾನನಿಗೆ ಸರ್ವೇಶ್ವರನ ಹೆಸರಿನಲ್ಲಿ ಮಾಡಿದ ಪ್ರಮಾಣವನ್ನು ನೆನೆದು, ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು