1 ಸಮುಯೇಲ 17:17 - ಕನ್ನಡ ಸತ್ಯವೇದವು C.L. Bible (BSI)17 ಒಂದು ದಿನ ಜೆಸ್ಸೆಯನು ತನ್ನ ಮಗ ದಾವೀದನಿಗೆ, “ನೋಡು, ಇಲ್ಲಿ ಹತ್ತು ಕಿಲೋಗ್ರಾಂ ಹುರಿಗಾಳು, ಹತ್ತು ರೊಟ್ಟಿ ಇವೆ. ಇವುಗಳನ್ನು ತೆಗೆದುಕೊಂಡು ಬೇಗನೆ ಪಾಳೆಯಕ್ಕೆ ಹೋಗಿ ನಿನ್ನ ಅಣ್ಣಂದಿರಿಗೆ ಕೊಟ್ಟು ಬಾ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201917 ಒಂದು ದಿನ ಇಷಯನು ತನ್ನ ಮಗನಾದ ದಾವೀದನಿಗೆ, “ಇಗೋ ಇಲ್ಲಿ ಮೂವತ್ತು ಸೇರು ಹುರಿದ ಧಾನ್ಯ, ಹತ್ತು ರೊಟ್ಟಿಗಳೂ ಇರುತ್ತವೆ. ಇವುಗಳನ್ನು ತೆಗೆದುಕೊಂಡು ಶೀಘ್ರವಾಗಿ ಪಾಳೆಯಕ್ಕೆ ಹೋಗಿ ನಿನ್ನ ಅಣ್ಣಂದಿರಿಗೆ ಕೊಡು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)17 ಒಂದು ದಿವಸ ಇಷಯನು ತನ್ನ ಮಗನಾದ ದಾವೀದನಿಗೆ - ಇಗೋ, ಇಲ್ಲಿ ಮೂವತ್ತು ಸೇರು ಹುರಿಗಾಳೂ ಹತ್ತು ರೊಟ್ಟಿಗಳೂ ಇರುತ್ತವೆ. ಇವುಗಳನ್ನು ತೆಗೆದುಕೊಂಡು ಶೀಘ್ರವಾಗಿ ಪಾಳೆಯಕ್ಕೆ ಹೋಗಿ ನಿನ್ನ ಅಣ್ಣಂದಿರಿಗೆ ಕೊಡು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್17 ಒಂದು ದಿನ ಇಷಯನು ತನ್ನ ಮಗನಾದ ದಾವೀದನಿಗೆ, “ಬೇಯಿಸಿದ ಮೂವತ್ತು ಸೇರು ಕಾಳುಗಳನ್ನು ಮತ್ತು ಹತ್ತು ರೊಟ್ಟಿಗಳನ್ನು ಸೈನ್ಯದಲ್ಲಿರುವ ನಿನ್ನ ಸಹೋದರರಿಗಾಗಿ ತೆಗೆದುಕೊಂಡು ಹೋಗು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ17 ಇಷಯನು ತನ್ನ ಮಗನಾದ ದಾವೀದನಿಗೆ, “ನಿನ್ನ ಸಹೋದರರಿಗೋಸ್ಕರ ಒಂದು ಏಫದ ಹುರಿದ ಧಾನ್ಯವನ್ನೂ, ಈ ಹತ್ತು ರೊಟ್ಟಿಗಳನ್ನೂ ತೆಗೆದುಕೊಂಡು ದಂಡಿನಲ್ಲಿರುವ ನಿನ್ನ ಸಹೋದರರ ಬಳಿಗೆ ಹೋಗು. ಅಧ್ಯಾಯವನ್ನು ನೋಡಿ |