Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 17:10 - ಕನ್ನಡ ಸತ್ಯವೇದವು C.L. Bible (BSI)

10 ಅದೂ ಅಲ್ಲದೆ ಆ ಫಿಲಿಷ್ಟಿಯನು, “ಇಸ್ರಯೇಲ್ ಸೈನಿಕರಿಗೆ ನಾನು ಇದೀಗಲೇ ಹಾಕುವ ಸವಾಲು: ಇಂದು ನನ್ನೊಡನೆ ಕಾಳಗಕ್ಕೆ ನಿಮ್ಮಿಂದ ಒಬ್ಬನನ್ನು ಆಯ್ದು ಕಳುಹಿಸಿ, ನೋಡೋಣ,” ಎಂದು ಕೊಚ್ಚಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

10 ಮತ್ತು ಅವನು, “ಈಹೊತ್ತು ಇಸ್ರಾಯೇಲ ಸೈನ್ಯದವರನ್ನು ಕುರಿತು. ನನ್ನೊಡನೆ ಕಾಳಗಕ್ಕೆ ನಿಮ್ಮಲ್ಲಿಂದ ಒಬ್ಬ ಮನುಷ್ಯನನ್ನು ಕಳುಹಿಸಿರಿ ನೋಡೋಣ” ಎಂದು ಸವಾಲು ಹಾಕಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

10 ಮತ್ತು ಅವನು - ಈ ಹೊತ್ತು ಇಸ್ರಾಯೇಲ್ ಸೈನ್ಯದವರನ್ನು ಹೀಯಾಳಿಸುತ್ತೇನೆ; ನನ್ನೊಡನೆ ಕಾಳಗಕ್ಕೆ ನಿಮ್ಮಲ್ಲಿಂದ ಒಬ್ಬ ಮನುಷ್ಯನನ್ನು ಕಳುಹಿಸಿರಿ ನೋಡೋಣ ಎಂದು ಕೊಚ್ಚಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

10 ಫಿಲಿಷ್ಟಿಯನು, “ಈ ದಿನ ನಾನು ಇಸ್ರೇಲ್ ಸೈನ್ಯವನ್ನು ಹೀಯಾಳಿಸುವೆನು. ನನ್ನೊಂದಿಗೆ ಹೋರಾಡಲು ನಿಮ್ಮ ಮನುಷ್ಯನೊಬ್ಬನನ್ನು ಕಳುಹಿಸಿ” ಎಂದು ಕೊಚ್ಚಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

10 ಆ ಫಿಲಿಷ್ಟಿಯನು, “ನಾನು ಈ ದಿನ ಇಸ್ರಾಯೇಲಿನ ಸೈನ್ಯಗಳನ್ನು ನಿಂದಿಸುತ್ತೇನೆ. ನಾವು ಒಬ್ಬರಿಗೊಬ್ಬರು ಯುದ್ಧಮಾಡುವ ಹಾಗೆ ನನಗೆ ಒಬ್ಬನನ್ನು ಬಿಟ್ಟುಬಿಡಿರಿ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 17:10
14 ತಿಳಿವುಗಳ ಹೋಲಿಕೆ  

ಅದಕ್ಕೆ ದಾವೀದನು, “ನೀನು ಈಟಿ, ಕತ್ತಿ, ಭರ್ಜಿಗಳೊಡನೆ ನನ್ನ ಬಳಿಗೆ ಬರುತ್ತಿರುವೆ; ನೀನು ಹೀಯಾಳಿಸಿದ ಸೇನಾಧೀಶ್ವರರು ಹಾಗು ಇಸ್ರಯೇಲ್ ಯೋಧರ ದೇವರು ಆದಂಥ ಸರ್ವೇಶ್ವರನ ನಾಮದೊಡನೆ ನಾನು ನಿನ್ನ ಬಳಿಗೆ ಬರುತ್ತಿದ್ದೇನೆ.


ನಿಮ್ಮ ಸೇವಕನಾದ ನನ್ನಿಂದ ಆ ಸಿಂಹಕ್ಕೂ ಕರಡಿಗೂ ಆದ ಗತಿಯೇ ಈ ಸುನ್ನತಿಯಿಲ್ಲದ ಫಿಲಿಷ್ಟಿಯನಿಗೂ ಆಗಬೇಕು; ಏಕೆಂದರೆ ಜೀವಸ್ವರೂಪರಾದ ದೇವರ ಸೈನ್ಯವನ್ನು ನಿಂದಿಸುತ್ತಿದ್ದಾನೆ.


ಹೋರೋನಿನವನಾದ ಸನ್ಬಲ್ಲಟನೂ ಅಮ್ಮೋನ್ ದೇಶದವನಾದ ಟೋಬೀಯ ಎಂಬ ಅಧಿಕಾರಿಯೂ ಅರೇಬಿಯನಾದ ಗೆಷೆಮನೂ ಈ ಸಮಾಚಾರವನ್ನೂ ಕೇಳಿದಾಗ ನಮ್ಮನ್ನು ತಿರಸ್ಕರಿಸಿ ಗೇಲಿಮಾಡಿದರು. “ನೀವು ಇಲ್ಲಿ ಮಾಡುವುದೇನು? ಅರಸನಿಗೆ ವಿರೋಧವಾಗಿ ದಂಗೆ ಏಳಬೇಕೆಂದಿದ್ದೀರೋ?” ಎಂದು ಕೇಳಿದರು.


ಅವನು ಇಸ್ರಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮೆಯಾನನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.


ನೆಬೂಕದ್ನೆಚ್ಚರನಾದ ನಾನು ಪರಲೋಕ ರಾಜನನ್ನು ಹೊಗಳಿ, ಕೊಂಡಾಡಿ, ಕೀರ್ತಿಸುತ್ತೇನೆ: ಆತನ ಕಾರ್ಯಗಳೆಲ್ಲವು ಸತ್ಯ, ಆತನ ಮಾರ್ಗಗಳೆಲ್ಲವು ನ್ಯಾಯ, ಗರ್ವಿಷ್ಠರನ್ನು ಆತ ತಗ್ಗಿಸಬಲ್ಲ.


ಸರ್ವೇಶ್ವರ ಸ್ವಾಮಿ : “ಜ್ಞಾನಿ ತನ್ನ ಜ್ಞಾನಕ್ಕಾಗಿ, ಪರಾಕ್ರಮಿ ತನ್ನ ಪರಾಕ್ರಮಕ್ಕಾಗಿ ಐಶ್ವರ್ಯವಂತ ತನ್ನ ಐಶ್ವರ್ಯಕ್ಕಾಗಿ ಹೆಚ್ಚಳಪಡದಿರಲಿ.


ವಿನಾಶಕ್ಕೆ ಮುಂಚೆ ವಿಪರೀತ ಬುದ್ಧಿ; ನೆಲಕ್ಕುರುಳುವುದಕ್ಕೆ ಮುಂಚೆ ನೆತ್ತಿಗೇರಿತು ಸೊಕ್ಕು.


ಎರಡನೆಯವನು ಅಹೋಹ್ಯನಾದ ದೋದೋ ಎಂಬವನ ಮಗ ಎಲ್ಲಾಜಾರನು. ಫಿಲಿಷ್ಟಿಯರು ಅಲ್ಲಿ ಯುದ್ಧಕ್ಕೆ ಕೂಡಿಕೊಂಡಾಗ ಅವರನ್ನು ಪ್ರತಿಭಟಿಸಲು ದಾವೀದನ ಜೊತೆಯಲ್ಲಿ ಹೋದ ಮೂರು ಮಂದಿ ಶೂರರಲ್ಲಿ ಇವನೂ ಒಬ್ಬನಾಗಿದ್ದನು.


ಸೌಲನು ಹಾಗು ಇಸ್ರಯೇಲರೆಲ್ಲರು ಅವನ ಸವಾಲನ್ನು ಕೇಳಿ ಭಯಭೀತರಾದರು. ಅವರ ಎದೆ ಅದುರಿತು.


ಜೀವಸ್ವರೂಪರಾದ ದೇವರನ್ನು ದೂಷಿಸುವುದಕ್ಕಾಗಿ ತನ್ನ ಯಜಮಾನ ಅಸ್ಸೀರಿಯದ ರಾಜನಿಂದ ಕಳುಹಿಸಲಾಗಿದ್ದ ರಬ್ಷಾಕೆಯ ನಿಂದಾವಾಕ್ಯಗಳನ್ನು ನಿಮ್ಮ ದೇವರಾದ ಸರ್ವೇಶ್ವರ ಕೇಳಿದ್ದಾರೆ. ನಿಮ್ಮ ದೇವರಾದ ಸರ್ವೇಶ್ವರ ತಾವು ಕೇಳಿದ ಆ ವಾಕ್ಯಗಳ ನಿಮಿತ್ತ ಮುಯ್ಯಿತೀರಿಸಾರು; ಹೀಗಿರಲು ಉಳಿದಿರುವ ಸ್ವಲ್ಪ ಜನರಿಗಾಗಿ ದೇವರನ್ನು ನೀವು ಪ್ರಾರ್ಥನೆ ಮಾಡಿ’ ಎಂದು ಹಿಜ್ಕೀಯ ಕೇಳಿಕೊಂಡಿದ್ದಾರೆ ಎಂದು ತಿಳಿಸಿ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು