Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 14:42 - ಕನ್ನಡ ಸತ್ಯವೇದವು C.L. Bible (BSI)

42 ಸೌಲನು ಮತ್ತೆ, “ನಮ್ಮಿಬ್ಬರೊಳಗೆ ಚೀಟುಹಾಕಿ,” ಎಂದು ಹೇಳಿದನು. ಹಾಗೆಯೇ ಮಾಡಿದಾಗ ಚೀಟು ಯೋನಾತಾನನಿಗೆ ಬಿದ್ದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

42 ಸೌಲನು ಪುನಃ, “ನಮ್ಮಿಬ್ಬರೊಳಗೆ ಚೀಟು ಹಾಕಿರಿ” ಎಂದು ಹೇಳಿದನು. ಹಾಗೆಯೇ ಮಾಡಿದಾಗ ಚೀಟು ಯೋನಾತಾನನಿಗೆ ಬಿದ್ದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

42 ಸೌಲನು ತಿರಿಗಿ - ನಮ್ಮಿಬ್ಬರೊಳಗೆ ಚೀಟುಹಾಕಿರಿ ಎಂದು ಹೇಳಿದನು. ಹಾಗೆಯೇ ಮಾಡಿದಲ್ಲಿ ಚೀಟು ಯೋನಾತಾನನಿಗೆ ಬಿದ್ದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

42 ಸೌಲನು, “ಪಾಪ ಮಾಡಿದವನು ನಾನೋ ಅಥವಾ ನನ್ನ ಮಗ ಯೋನಾತಾನನೋ ಎಂಬುದನ್ನು ತೋರಿಸಲು ಚೀಟುಹಾಕಿರಿ” ಎಂದು ಹೇಳಿದನು. ಚೀಟು ಯೋನಾತಾನನಿಗೆ ಬಂದಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

42 ಸೌಲನು ಅವರಿಗೆ, “ನನ್ನ ಮೇಲೆಯೂ ನನ್ನ ಮಗ ಯೋನಾತಾನನ ಮೇಲೆಯೂ ಚೀಟುಹಾಕಿರಿ,” ಎಂದಾಗ, ಯೋನಾತಾನನಿಗೆ ಚೀಟು ಬಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 14:42
6 ತಿಳಿವುಗಳ ಹೋಲಿಕೆ  

ಅನಂತರ ಸೌಲನು, “ಇಸ್ರಯೇಲ್ ದೇವರೇ, ಸತ್ಯವನ್ನು ತಿಳಿಸಿ,” ಎಂದು ಸರ್ವೇಶ್ವರನನ್ನು ಪ್ರಾರ್ಥಿಸಿ ಚೀಟುಹಾಕಿದನು. ಅದು ಅವನಿಗೂ ಯೋನಾತಾನನಿಗೂ ಬಂದಿತು. ಜನರು ಪಾರಾದರು.


ಆಗ ಸೌಲನು ಯೋನಾತಾನನನ್ನು, “ನೀನು ಏನು ಮಾಡಿದೆ, ಹೇಳು,” ಎಂದು ಕೇಳಿದನು. ಅವನು, “ನಾನು ಕೋಲಿನಿಂದ ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ತಿಂದೆ; ಸಾಯುವುದಕ್ಕೆ ಸಿದ್ಧನಾಗಿದ್ದೇನೆ,” ಎಂದು ಉತ್ತರಕೊಟ್ಟನು.


ಆಗ ನಾವಿಕರು: “ನಮಗೆ ಸಂಭವಿಸಿರುವ ಈ ದುರಂತಕ್ಕೆ ಕಾರಣ ಯಾರಿರಬಹುದು? ಬನ್ನಿ, ಚೀಟುಹಾಕಿ ನೋಡೋಣ” ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಂಡರು. ಹಾಗೆ ಮಾಡಿದಾಗ ಚೀಟು ಯೋನನ ಹೆಸರಿಗೆ ಬಂತು.


ಆ ಕುಟುಂಬದವರಲ್ಲಿ ಒಬ್ಬನಾದ ಮೇಲೆ ಒಬ್ಬನನ್ನು ಕರೆದಾಗ ಆಕಾನನು ಸಿಕ್ಕಿಕೊಂಡನು. ಯೆಹೂದ ಕುಲದವನೂ ಜೆರಹನ ಗೋತ್ರದವನೂ ಜಬ್ದೀಯ ಕುಟುಂಬದವನೂ ಹಾಗೂ ಕರ್ಮೀಯ ಮಗನೂ ಇವನೇ.


ಅದೃಷ್ಟದ ಚೀಟನ್ನು ಕುಲುಕಿ ಮಡಲಿಗೆ ಹಾಕಬಹುದು; ಆದರೆ ತೀರ್ಪು ಸರ್ವೇಶ್ವರನ ಕೈಯಲ್ಲಿರುವುದು.


ಚೀಟುಹಾಕುವುದರಿಂದ ವ್ಯಾಜ್ಯಗಳ ಶಮನ; ಜಟ್ಟಿಗಳ ನಡುವೆ ಕಾಳಗದ ವಿರಾಮ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು