Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 13:11 - ಕನ್ನಡ ಸತ್ಯವೇದವು C.L. Bible (BSI)

11 ಸಮುವೇಲನು, ಅವನನ್ನು ನೋಡಿ, “ಇದೇನು ನೀನು ಮಾಡಿದ್ದು?” ಎಂದು ಕೇಳಿದನು. ಅವನು, “ಜನರು ಚದರಿಹೋಗುವುದನ್ನು, ನೀವು ನಿಯಮಿತಕಾಲಕ್ಕೆ ಬಾರದಿರುವುದನ್ನು ಹಾಗು ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ನಮಗೆ ವಿರೋಧವಾಗಿ ಕೂಡಿಕೊಂಡಿರುವುದನ್ನು ನೋಡಿದೆ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಸಮುವೇಲನು ಅವನನ್ನು, “ಇದೇನು ನೀನು ಮಾಡಿದ್ದು?” ಎಂದು ಕೇಳಲು ಅವನು, “ಜನರು ಚದರಿಹೋಗುವುದನ್ನೂ, ನೀನು ನಿಯಮಿತಕಾಲದಲ್ಲಿ ಬಾರದಿರುವುದನ್ನೂ, ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ನಮಗೆ ವಿರೋಧವಾಗಿ ಕೂಡಿಕೊಂಡಿರುವುದನ್ನೂ ನೋಡಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಸಮುವೇಲನು ಅವನನ್ನು - ಇದೇನು ನೀನು ಮಾಡಿದ್ದು ಎಂದು ಕೇಳಲು ಅವನು - ಜನರು ಚದರಿಹೋಗುವದನ್ನೂ ನೀನು ನಿಯವಿುತಕಾಲದಲ್ಲಿ ಬಾರದಿರುವದನ್ನೂ ಫಿಲಿಷ್ಟಿಯರು ವಿುಕ್ಮಾಷಿನಲ್ಲಿ ನಮಗೆ ವಿರೋಧವಾಗಿ ಕೂಡಿಕೊಂಡಿರುವದನ್ನೂ ನೋಡಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಸಮುವೇಲನು, “ನೀನು ಮಾಡಿದ್ದೇನು?” ಎಂದು ಕೇಳಿದನು. ಸೌಲನು, “ಸೈನಿಕರು ನನ್ನನ್ನು ಬಿಟ್ಟುಹೋಗುತ್ತಿರುವುದನ್ನೂ ನೀನು ನಿಯಮಿತಕಾಲದಲ್ಲಿ ಇಲ್ಲಿ ಇಲ್ಲದಿರುವುದನ್ನೂ ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಒಟ್ಟುಗೂಡುತ್ತಿರುವುದನ್ನೂ ನೋಡಿದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಆದರೆ ಸಮುಯೇಲನು, “ನೀನೇನು ಮಾಡಿದಿ?” ಎಂದು ಸೌಲನನ್ನು ಕೇಳಿದನು. ಸೌಲನು, “ಸೈನಿಕರು ನನ್ನನ್ನು ಬಿಟ್ಟು ಹೋಗುತ್ತಿರುವುದನ್ನು, ನೀನು ನೇಮಿಸಿದ ದಿವಸಗಳ ಪ್ರಕಾರ ಬಾರದಿರುವುದನ್ನು ಮತ್ತು ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಕೂಡಿಕೊಂಡಿರುವುದನ್ನು ಕಂಡೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 13:11
12 ತಿಳಿವುಗಳ ಹೋಲಿಕೆ  

ಫಿಲಿಷ್ಟಿಯರ ಕಾವಲುದಂಡು ಮಿಕ್ಮಾಷಿನ ಕಣಿವೆಯ ಕಡೆಗೆ ಹೊರಟಿತು.


ಅವರೊಡನೆ ಅವನೂ ಅವನ ಮಗನಾದ ಯೋನಾತಾನನೂ ಬೆನ್ಯಾಮೀನ್ಯರ ಗೆಬದಲ್ಲಿ ಇಳಿದುಕೊಂಡರು. ಫಿಲಿಷ್ಟಿಯರು ಮಿಕ್ಮಾಷಿನಲ್ಲಿ ಪಾಳೆಯಮಾಡಿಕೊಂಡಿದ್ದರು.


ಆಗ ಫಿಲಿಷ್ಟಿಯರು ಇಸ್ರಯೇಲರೊಡನೆ ಯುದ್ಧಮಾಡುವುದಕ್ಕಾಗಿ ಮೂವತ್ತು ಸಾವಿರ ರಥಬಲವನ್ನು, ಆರು ಸಾವಿರ ಅಶ್ವಬಲವನ್ನು ಹಾಗು ಸಮುದ್ರದ ಮರಳಿನಂತೆ ಅಸಂಖ್ಯವಾದ ಕಾಲಾಳುಗಳನ್ನು ತೆಗೆದುಕೊಂಡು ಬಂದು ಬೇತಾವೆನಿನ ಪೂರ್ವದಿಕ್ಕಿನಲ್ಲಿರುವ ಮಿಕ್ಮಾಷಿನಲ್ಲಿ ಪಾಳೆಯ ಮಾಡಿಕೊಂಡರು.


ಅವನು ಅವರಲ್ಲಿ ಮೂರು ಸಾವಿರ ಜನರನ್ನು ಮಿಕ್ಮಾಷಿನಲ್ಲೂ ಬೇತೇಲಿನ ಗುಡ್ಡದಲ್ಲೂ ಇಟ್ಟುಕೊಂಡನು. ಉಳಿದ ಸಾವಿರ ಜನರನ್ನು ಬೆನ್ಯಾಮೀನ್ಯರ ಗೆಬೆಯದಲ್ಲಿದ್ದ ಯೋನಾತಾನನ ವಶಕ್ಕೆ ಕೊಟ್ಟನು. ಬೇರೆ ಇಸ್ರಯೇಲರನ್ನು ಅವರವರ ಮನೆಗಳಿಗೆ ಕಳುಹಿಸಿದನು.


ಶತ್ರುಸೇನೆ ಅಯ್ಯಾಥಿನ ಮೇಲೆ ಬಂದು ಇಳಿದಿದೆ. ಮಿಗ್ರೋನನ್ನು ಹಾದುಹೋಗಿದೆ; ಮಿಕ್ಮಾಷಿನಲ್ಲಿ ತನ್ನ ಸಾಮಗ್ರಿಗಳನ್ನು ಬಿಟ್ಟಿದೆ.


ಅವರು ಹೋದನಂತರ, ಇವನು ತನ್ನ ಯಜಮಾನನ ಬಳಿಗೆ ಬಂದನು. ಎಲೀಷನು ಅವನನ್ನು, “ಗೇಹಜಿಯೇ, ಎಲ್ಲಿಗೆ ಹೋಗಿ ಬಂದೆ?” ಎಂದು ಕೇಳಿದನು. ಅದಕ್ಕೆ ಅವನು, “ನಿಮ್ಮ ಸೇವಕನಾದ ನಾನು ಎಲ್ಲಿಯೂ ಹೋಗಲಿಲ್ಲ,” ಎಂದು ಉತ್ತರಕೊಟ್ಟನು.


ಅರಸನ ಬಳಿಗೆ ಹೋಗಿ, “ನೀವು ಮಾಡಿದ್ದೇನು? ಅಬ್ನೇರನು ನಿಮ್ಮ ಬಳಿಗೆ ಬಂದಿದ್ದನಂತೆ; ನೀವು ಅವನನ್ನು ಸುರಕ್ಷಿತವಾಗಿ ಕಳುಹಿಸಿಬಿಟ್ಟದ್ದೇಕೆ?


ಒಂದು ಮಿಕ್ಮಾಷಿಗೆ ಮುಖಮಾಡಿ ಉತ್ತರಕ್ಕಿತ್ತು. ಇನ್ನೊಂದು ಗೆಬಕ್ಕೆ ಮುಖಮಾಡಿ ದಕ್ಷಿಣಕ್ಕಿತ್ತು.


ಆಕಾನನಿಗೆ ಯೆಹೋಶುವನು, “ಮಗನೇ, ನೀನು ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ಸ್ತುತಿಸಿ ಸ್ತೋತ್ರ ಸಲ್ಲಿಸು. ನೀನು ಮಾಡಿದ್ದನ್ನು ಮುಚ್ಚುಮರೆಯಿಲ್ಲದೆ ನನಗೆ ತಿಳಿಸು, ಎಂದನು


ಆಗ ಸರ್ವೇಶ್ವರ, “ನೀನು ಎಂಥ ಕೃತ್ಯ ಎಸಗಿದೆ? ಪ್ರತೀಕಾರಕ್ಕಾಗಿ ನೆಲದಿಂದ ನಿನ್ನ ತಮ್ಮನ ರಕ್ತ ಕೂಗಿ ನನಗೆ ಮೊರೆಯಿಡುತ್ತಿದೆ, ಕೇಳು.


ಸರ್ವೇಶ್ವರನಾದ ದೇವರು ಆ ಮಹಿಳೆಯನ್ನು, “ಇದೇನು ನೀನು ಮಾಡಿದ್ದು?” ಎಂದು ಕೇಳಲು ಆಕೆ, “ಸರ್ಪವು ನನ್ನನ್ನು ವಂಚಿಸಿ ತಿನ್ನುವಂತೆ ಮಾಡಿತು,” ಎಂದು ಉತ್ತರಕೊಟ್ಟಳು.


ಸರ್ವೇಶ್ವರನಿಗೆ ಶಾಂತಿಸಮಾಧಾನದ ಬಲಿಯನ್ನು ಸಲ್ಲಿಸುವುದಕ್ಕಿಂತ ಮೊದಲೇ ಫಿಲಿಷ್ಟಿಯರು ಗಿಲ್ಗಾಲಿಗೆ ಬಂದು ನನ್ನ ಮೇಲೆ ಬಿದ್ದಾರೆಂದು ಭಯಪಟ್ಟೆ. ಆದುದರಿಂದ ದಹನಬಲಿಯನ್ನು ಸಮರ್ಪಿಸುವುದಕ್ಕೆ ನಾನೇ ಮುಂದಾದೆ,” ಎಂದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು