1 ಸಮುಯೇಲ 12:8 - ಕನ್ನಡ ಸತ್ಯವೇದವು C.L. Bible (BSI)8 ಈಜಿಪ್ಟಿಗೆ ಬಂದ ಯಕೋಬನ ವಂಶದವರಾದ ನಮ್ಮ ಹಿರಿಯರು ಸರ್ವೇಶ್ವರನಿಗೆ ಮೊರೆಯಿಟ್ಟಾಗ, ಅವರು ಮೋಶೆ ಹಾಗು ಆರೋನರ ಮುಖಾಂತರ ಅವರನ್ನು ಈಜಿಪ್ಟಿನಿಂದ ಬಿಡಿಸಿ ತಂದು ಈ ನಾಡಿನಲ್ಲಿ ನೆಲೆಗೊಳಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಐಗುಪ್ತಕ್ಕೆ ಬಂದ ಯಾಕೋಬನ ವಂಶದವರಾದ ನಿಮ್ಮ ಹಿರಿಯರು ಯೆಹೋವನಿಗೆ ಮೊರೆಯಿಟ್ಟಾಗ, ಆತನು ಮೋಶೆ ಆರೋನರ ಮುಖಾಂತರ ಅವರನ್ನು ಐಗುಪ್ತದಿಂದ ಬಿಡಿಸಿ ಈ ದೇಶದಲ್ಲಿ ನೆಲೆಗೊಳಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಐಗುಪ್ತಕ್ಕೆ ಬಂದ ಯಾಕೋಬನ ವಂಶದವರಾದ ನಮ್ಮ ಹಿರಿಯರು ಯೆಹೋವನಿಗೆ ಮೊರೆಯಿಟ್ಟಾಗ ಆತನು ಮೋಶೆ ಆರೋನರ ಮುಖಾಂತರ ಅವರನ್ನು ಐಗುಪ್ತದಿಂದ ಬಿಡಿಸಿ ಈ ದೇಶದಲ್ಲಿ ನೆಲೆಗೊಳಿಸಿದನು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 “ಯಾಕೋಬನು ಈಜಿಪ್ಟಿಗೆ ಹೋದನು. ತರುವಾಯ, ಈಜಿಪ್ಟಿನವರು ಅವನ ವಂಶದವರಿಗೆ ಜೀವನವನ್ನು ಕಠಿಣಗೊಳಿಸಿದರು. ಆದ್ದರಿಂದ ಅವರು ಯೆಹೋವನಲ್ಲಿ ಸಹಾಯಕ್ಕಾಗಿ ಮೊರೆಯಿಟ್ಟರು. ಯೆಹೋವನು ಮೋಶೆ ಆರೋನರನ್ನು ಕಳುಹಿಸಿದನು. ಮೋಶೆ ಆರೋನರು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದು ಇಲ್ಲಿ ನೆಲೆಗೊಳಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 “ಯಾಕೋಬನು ಈಜಿಪ್ಟಿಗೆ ಬಂದ ತರುವಾಯ, ನಿಮ್ಮ ತಂದೆಗಳು ಯೆಹೋವ ದೇವರಿಗೆ ಮೊರೆಯಿಟ್ಟರು. ಆಗ ಯೆಹೋವ ದೇವರು ಮೋಶೆಯನ್ನೂ, ಆರೋನನನ್ನೂ ಕಳುಹಿಸಿದರು. ಇವರು ನಿಮ್ಮ ಪಿತೃಗಳನ್ನು ಈಜಿಪ್ಟಿನಿಂದ ಕರೆತಂದು, ಅವರನ್ನು ಈ ದೇಶದಲ್ಲಿ ವಾಸಿಸುವಂತೆ ಮಾಡಿದರು. ಅಧ್ಯಾಯವನ್ನು ನೋಡಿ |