Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 12:2 - ಕನ್ನಡ ಸತ್ಯವೇದವು C.L. Bible (BSI)

2 ಇನ್ನು ಇವನೇ ನಿಮ್ಮನ್ನು ಮುನ್ನಡೆಸುವನು. ಚಿಕ್ಕಂದಿನಿಂದ ನಿಮ್ಮ ನಾಯಕನಾಗಿದ್ದ ನಾನು ಈಗ ತಲೆನರೆತ ಮುದುಕನಾಗಿದ್ದೇನೆ; ನನ್ನ ಮಕ್ಕಳು ನಿಮ್ಮ ಮಧ್ಯದಲ್ಲಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಇನ್ನು ಮುಂದೆ ಇವನೇ ನಿಮ್ಮ ಅರಸನಾಗಿರುವನು. ಚಿಕ್ಕಂದಿನಿಂದ ನಿಮ್ಮ ನಾಯಕನಾಗಿದ್ದ ನಾನು ಈಗ ತಲೆನರೆತ ಮುದುಕನಾಗಿದ್ದೇನೆ; ನನ್ನ ಮಕ್ಕಳು ನಿಮ್ಮೊಂದಿಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಇನ್ನು ಮುಂದೆ ಇವನೇ ನಿಮ್ಮನ್ನು ನಡಿಸುವನು. ಚಿಕ್ಕಂದಿನಿಂದ ನಿಮ್ಮ ನಾಯಕನಾಗಿದ್ದ ನಾನು ಈಗ ತಲೆನರೆತ ಮುದುಕನಾಗಿದ್ದೇನೆ; ನನ್ನ ಮಕ್ಕಳು ನಿಮ್ಮ ಮಧ್ಯದಲ್ಲಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ಈಗ ನಿಮ್ಮನ್ನು ಮುನ್ನಡೆಸಲು ಒಬ್ಬ ರಾಜನಿದ್ದಾನೆ. ನಾನು ಮುದುಕನಾಗಿರುವೆ ಮತ್ತು ನನ್ನ ತಲೆ ನರೆತುಹೋಗಿದೆ. ನನ್ನ ಗಂಡುಮಕ್ಕಳು ನಿಮ್ಮೊಂದಿಗಿದ್ದಾರೆ. ನಾನು ಚಿಕ್ಕಂದಿನಿಂದಲೇ ನಿಮ್ಮ ನಾಯಕನಾಗಿದ್ದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಈಗ ಆ ಅರಸನು ಇನ್ನು ಮುಂದೆ ನಿಮ್ಮನ್ನು ನಡಿಸುತ್ತಾನೆ. ನಾನು ವೃದ್ಧನಾಗಿ ನರೆ ಬಂದವನಾದೆನು. ನನ್ನ ಪುತ್ರರು ನಿಮ್ಮ ಸಂಗಡ ಇದ್ದಾರೆ. ನಾನು ನನ್ನ ಬಾಲ್ಯ ಮೊದಲ್ಗೊಂಡು ಈ ದಿನದವರೆಗೂ ನಿಮ್ಮ ಮುಂದೆ ನಾಯಕನಾಗಿ ನಡೆದುಕೊಂಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 12:2
17 ತಿಳಿವುಗಳ ಹೋಲಿಕೆ  

“ತಾವಂತೂ ಮುದುಕರಾದಿರಿ; ನಿಮ್ಮ ಮಕ್ಕಳು ನಿಮ್ಮ ಮಾರ್ಗದಲ್ಲಿ ನಡೆಯುವುದಿಲ್ಲ. ಆದುದರಿಂದ ಬೇರೆ ಎಲ್ಲ ಜನಾಂಗಗಳಿಗಿರುವಂತೆ ನಮಗೂ ಒಬ್ಬ ಅರಸನನ್ನು ನೇಮಿಸಿ; ಅವನೇ ನಮ್ಮ ನ್ಯಾಯಸ್ಥಾಪಕನಾಗಿರಲಿ,” ಎಂದರು.


ನಮ್ಮ ನ್ಯಾಯಗಳನ್ನು ತೀರಿಸಿ, ನಮಗೆ ಮುಂದಾಗಿ ಹೊರಟು, ನಮ್ಮ ಪರವಾಗಿ ಯುದ್ಧಮಾಡುವ ಒಬ್ಬ ಅರಸನು ಬೇಕು,” ಎಂದು ಹೇಳಿದರು.


ಸಮುವೇಲನು ಮುದುಕನಾದ ಮೇಲೆ ತನ್ನ ಮಕ್ಕಳನ್ನು ಇಸ್ರಯೇಲರಿಗೆ ನ್ಯಾಯಸ್ಥಾಪಕರನ್ನಾಗಿ ಮಾಡಿದನು.


ಇವರು ತಂದೆಯ ಮಾರ್ಗದಲ್ಲಿ ನಡೆಯದೆ ದ್ರವ್ಯಾಶೆಯಿಂದ ಲಂಚ ತೆಗೆದುಕೊಂಡು ನ್ಯಾಯವಿರುದ್ಧವಾದ ತೀರ್ಪು ಮಾಡುತ್ತಿದ್ದರು.


ಆದುದರಿಂದ ಅವರ ಕೆಲಸಕಾರ್ಯಗಳನ್ನು ನಿರ್ವಹಿಸುವುದಕ್ಕೂ ಅವರನ್ನು ಮುನ್ನಡೆಸುವುದಕ್ಕೂ ಹಿಂದಕ್ಕೆ ಕರೆದುತರುವುದಕ್ಕೂ ಒಬ್ಬ ನಾಯಕನನ್ನು ನೇಮಿಸಿ,” ಎಂದು ಮನವಿಮಾಡಿಕೊಂಡನು.


ನಾನು ಈ ಗುಡಾರವನ್ನು ತ್ಯಜಿಸುವ ಕಾಲವು ಸಮೀಪಿಸಿತೆಂದು ಬಲ್ಲೆ. ನಮ್ಮ ಪ್ರಭು ಯೇಸುಕ್ರಿಸ್ತರೇ ನನಗಿದನ್ನು ಸ್ಪಷ್ಟಪಡಿಸಿದ್ದಾರೆ.


ನಾನು ಯಜ್ಞಪಶುವಾಗಿ ಅರ್ಪಿತನಾಗುವ ಸಮಯವು ಬಂದಿದೆ. ಈ ಲೋಕದಿಂದ ತೆರಳಬೇಕಾದ ಕಾಲವೂ ಕೂಡಿಬಂದಿದೆ.


ದೇವಾ, ನರೆಯ ಮುದುಕನಾಗಿರುವಾಗ ನನ್ನ ಕೈ ಬಿಡಬೇಡಯ್ಯಾ I ನಿನ್ನ ಪರಾಕ್ರಮವನು ಮುಂದಿನ ಪೀಳಿಗೆಗೆ ಸಾರುವ ತನಕ ಬೇಡವಯ್ಯಾ I ನಿನ್ನ ಪ್ರತಾಪವನು ತಲತಲಾಂತರದವರೆಗೆ ಪ್ರಕಟಿಸುವೆನಯ್ಯಾ II


ಆದರೆ, ಏಲಿ, “ಮಗನೇ, ಸಮುವೇಲನೇ”, ಎಂದು ಕರೆದಾಗ ಅವನು, “ಇಗೋ, ಇದ್ದೇನೆ,” ಎಂದನು.


ತನ್ನ ಮಕ್ಕಳು ದೇವದೂಷಕರು ಎಂದು ಅವನಿಗೆ ತಿಳಿದುಬಂದರೂ ಅವನು ಅವರನ್ನು ತಿದ್ದಲಿಲ್ಲ. ಈ ಪಾಪದ ನಿಮಿತ್ತ ಅವನ ಕುಟುಂಬವನ್ನು ನಿತ್ಯದಂಡನೆಗೆ ಗುರಿಮಾಡಿದ್ದೇನೆಂದು ಅವನಿಗೆ ಮೊದಲೇ ತಿಳಿಸಿದೆನು.


ಆದರೆ ನನ್ನ ಪ್ರಜೆ ಇಸ್ರಯೇಲರು ನನ್ನ ಆಜ್ಞಾನುಸಾರ ನನ್ನ ಮಂದಿರಕ್ಕೆ ತರುವ ಬಲಿದಾನಗಳ ಹಾಗು ನೈವೇದ್ಯಗಳ ಘನತೆಯನ್ನು ನೀವು ಭಂಗಪಡಿಸಿದ್ದೀರಿ. ಅವುಗಳ ಶ್ರೇಷ್ಠಭಾಗಗಳಿಂದ ನಿಮ್ಮನ್ನೇ ಕೊಬ್ಬಿಸಿಕೊಳ್ಳುತ್ತಿದ್ದೀರಿ; ಏಕೆ? ನೀನು ನನ್ನನ್ನು ಗೌರವಿಸುವುದಕ್ಕಿಂತ ಹೆಚ್ಚಾಗಿ ನಿನ್ನ ಮಕ್ಕಳನ್ನೇ ಗೌರವಿಸುವುದು ಸರಿಯೇ?


ಈಗ ಏಲಿ ಬಹಳ ಮುದುಕನಾಗಿದ್ದ. ತನ್ನ ಮಕ್ಕಳು ಇಸ್ರಯೇಲ್ ಜನರಿಗೆ ಮಾಡುತ್ತಿದ್ದುದೆಲ್ಲಾ ಅವನ ಕಿವಿಗೆ ಬೀಳುತ್ತಿತ್ತು. ದೇವದರ್ಶನದ ಗುಡಾರದ ಬಾಗಿಲಿನಲ್ಲಿ ಕೆಲಸಮಾಡುತ್ತಿದ್ದ ಸ್ತ್ರೀಯರೊಡನೆ ಮಲಗುತ್ತಿದ್ದಾರೆಂಬುದನ್ನೂ ಕೇಳಿದ್ದ.


ಸರ್ವೇಶ್ವರ ಪ್ರತ್ಯಕ್ಷರಾಗಿ ಹಿಂದಿನಂತೆಯೇ, “ಸಮುವೇಲನೇ, ಸಮುವೇಲನೇ,” ಎಂದರು. ಸಮುವೇಲನು, “ಅಪ್ಪಣೆಯಾಗಲಿ, ತಮ್ಮ ದಾಸನಾದ ನಾನು ಕಾದಿದ್ದೇನೆ,” ಎಂದನು.


ಸರ್ವೇಶ್ವರಸ್ವಾಮಿ ಸುತ್ತಮುತ್ತಲಿನ ಶತ್ರುಗಳನ್ನು ನಿರ್ಮೂಲಮಾಡಿ ಇಸ್ರಯೇಲರಿಗೆ ನೆಮ್ಮದಿಯಿತ್ತರು. ಬಹಳ ದಿನಗಳಾದ ತರುವಾಯ ಯೆಹೋಶುವ ಹಣ್ಣುಹಣ್ಣು ಮುದುಕನಾದ.


ಆತ ಇಸ್ರಯೇಲರೆಲ್ಲರನ್ನು, ಅವರ ಹಿರಿಯರನ್ನು, ಮುಖ್ಯಸ್ಥರನ್ನು, ನ್ಯಾಯಾಧಿಪತಿಗಳನ್ನು ಹಾಗೂ ಅಧಿಕಾರಿಗಳನ್ನು ತನ್ನ ಬಳಿಗೆ ಕರೆಯಿಸಿದನು. ಅವರಿಗೆ, “ನಾನು ಮುಪ್ಪಿನ ಮುದುಕನಾದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು