Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಸಮುಯೇಲ 10:17 - ಕನ್ನಡ ಸತ್ಯವೇದವು C.L. Bible (BSI)

17 ಸಮುವೇಲನು ಇಸ್ರಯೇಲರನ್ನು ಮಿಚ್ಪೆಗೆ ಕರೆಯಿಸಿ ಸರ್ವೇಶ್ವರನ ಸನ್ನಿಧಿಯಲ್ಲಿ ಸಭೆ ಸೇರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಸಮುವೇಲನು ಇಸ್ರಾಯೇಲ್ಯರನ್ನು ಮಿಚ್ಪೆಗೆ ಕರೆಯಿಸಿ ಯೆಹೋವನ ಸನ್ನಿಧಿಯಲ್ಲಿ ಸೇರಿಸಿಕೊಂಡನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಸಮುವೇಲನು ಇಸ್ರಾಯೇಲ್ಯರನ್ನು ವಿುಚ್ಪೆಗೆ ಕರಿಸಿ ಯೆಹೋವನ ಸನ್ನಿಧಿಯಲ್ಲಿ ಕೂಡಿಸಿಕೊಂಡು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಸಮುವೇಲನು ಇಸ್ರೇಲರನ್ನು ಮಿಚ್ಪೆಗೆ ಕರೆಸಿ, ಯೆಹೋವನ ಸನ್ನಿಧಿಯಲ್ಲಿ ಸಭೆಸೇರಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಸಮುಯೇಲನು ಇಸ್ರಾಯೇಲರನ್ನು ಮಿಚ್ಪೆಯಲ್ಲಿ ಯೆಹೋವ ದೇವರ ಬಳಿಗೆ ಒಟ್ಟಾಗಿ ಕರೆದು ಅವರಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಸಮುಯೇಲ 10:17
6 ತಿಳಿವುಗಳ ಹೋಲಿಕೆ  

ದಾನ್ ಪಟ್ಟಣದಿಂದ ಬೇರ್ಷೆಬದವರೆಗಿರುವ ಪ್ರಾಂತ್ಯಗಳಲ್ಲಿಯೂ ಗಿಲ್ಯಾದಿನಲ್ಲಿಯೂ ಇರುವ ಇಸ್ರಯೇಲರೆಲ್ಲರು ಏಕ ಮನಸ್ಸಿನಿಂದ ಹೊರಟು ಮಿಚ್ಫೆಗೆ ಬಂದು ಸರ್ವೇಶ್ವರನ ಸನ್ನಿಧಿಯಲ್ಲಿ ಸಭೆ ಸೇರಿದರು.


ಆಗ ಯೆಪ್ತಾಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು; ಜನರು ಅವನನ್ನು ಅಧಿಪತಿಯನ್ನಾಗಿಯೂ ನಾಯಕನನ್ನಾಗಿಯೂ ನೇಮಿಸಿದರು. ಯೆಪ್ತಾಹನು ತನ್ನ ವಿಷಯಗಳನ್ನೆಲ್ಲಾ ಮಿಚ್ಫೆಯಲ್ಲಿ ಸರ್ವೇಶ್ವರನ ಮುಂದೆ ಅರಿಕೆ ಮಾಡಿದನು.


ಅವರೆಲ್ಲರು ಅಲ್ಲಿಗೆ ಹೋಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಸೌಲನ ಅರಸುತನವನ್ನು ಘೋಷಿಸಿ ಸ್ಥಿರಪಡಿಸಿದರು. ಸರ್ವೇಶ್ವರನಿಗೆ ಶಾಂತಿಸಮಾಧಾನದ ಬಲಿಗಳನ್ನು ಸಮರ್ಪಿಸಿದರು. ಸೌಲನೊಡನೆ ಸೇರಿ ಬಹಳವಾಗಿ ಆನಂದಿಸಿದರು.


ಇಷ್ಟವಿಲ್ಲದೆ ಸಿಟ್ಟಿನಿಂದ ನಿನಗೆ ರಾಜನನ್ನು ಕೊಟ್ಟೆ. ಈಗ ಕಡುಕೋಪದಿಂದ ಆ ರಾಜರನ್ನು ತೆಗೆದುಬಿಡುತ್ತೇನೆ.


ಅವನು ಇಸ್ರಯೇಲರ ನ್ಯಾಯಗಳನ್ನು ತೀರಿಸುವುದಕ್ಕಾಗಿ ಪ್ರತಿವರ್ಷವೂ ಬೇತೇಲ್, ಗಿಲ್ಗಾಲ್, ಮಿಚ್ಪೆ ಎಂಬ ಪಟ್ಟಣಗಳನ್ನು ಸುತ್ತಿ ರಾಮಾಕ್ಕೆ ತಿರುಗಿ ಬರುತ್ತಿದ್ದನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು