Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೇತ್ರನು 3:19 - ಕನ್ನಡ ಸತ್ಯವೇದವು C.L. Bible (BSI)

19 ಆಧ್ಯಾತ್ಮಿಕವಾಗಿಯೇ ತೆರಳಿ ಸೆರೆಯಲ್ಲಿದ್ದ ಆತ್ಮಗಳಿಗೆ ಶುಭಸಂದೇಶವನ್ನು ಬೋಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಇದಲ್ಲದೆ ಆತನು ಆತ್ಮರೂಪನಾಗಿ ಸೆರೆಯಲ್ಲಿದ್ದ ಆತ್ಮಗಳ ಬಳಿಗೆ ಹೋಗಿ ಸುವಾರ್ತೆಯನ್ನು ಸಾರಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಇದಲ್ಲದೆ ಆತನು ಆತ್ಮರೂಪನಾಗಿ ಸೆರೆಯಲ್ಲಿದ್ದ ಆತ್ಮಗಳ ಬಳಿಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಬಳಿಕ ಆತನು ಆತ್ಮರೂಪದಲ್ಲಿ ಹೋಗಿ ಸೆರೆಮನೆಯಲ್ಲಿದ್ದ ಆತ್ಮಗಳಿಗೆ ಸುವಾರ್ತೆ ಸಾರಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಹೀಗೆ ಕ್ರಿಸ್ತ ಯೇಸುವು ಆತ್ಮರೂಪದಲ್ಲಿ ಬದುಕುವವರಾಗಿ, ಸೆರೆಯಲ್ಲಿದ್ದ ಅವಿಧೇಯ ಆತ್ಮಗಳ ಬಳಿಗೆ ಹೋಗಿ ಸಾರಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

19 ಮಾನಾ ಆತ್ಮ್ಯಾಚ್ಯಾ ರುಪಾತ್ ತೊ ಗೆಲೊ ಅನಿ ಬಂದಿಖಾನ್ಯಾತ್ ಹೊತ್ತ್ಯಾ ಆತ್ಮ್ಯಾಕ್ನಿ ತೆನಿ ಬರಿ ಖಬರ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೇತ್ರನು 3:19
10 ತಿಳಿವುಗಳ ಹೋಲಿಕೆ  

ಮೃತರಿಗೂ ಶುಭಸಂದೇಶವನ್ನು ಬೋಧಿಸಲಾಯಿತು. ಏಕೆಂದರೆ, ದೇಹದ ಮಟ್ಟಿಗೆ ಸಕಲ ಮಾನವರಂತೆ ಮರಣವೆಂಬ ತೀರ್ಪನ್ನು ಹೊಂದಿದ್ದರೂ ದೇವರ ಆತ್ಮದ ಮಟ್ಟಿಗೆ ದೇವರಂತೆಯೇ ಜೀವಿಸಲೆಂದು ಆ ಸಂದೇಶವನ್ನು ಬೋಧಿಸಲಾಯಿತು.


ನನ್ನ ಮೇಲಿದೆ ಸರ್ವೇಶ್ವರ ಸ್ವಾಮಿಯ ಆತ್ಮ; ನನಗೆ ಅಭಿಷೇಕಮಾಡಿ, ಕಳುಹಿಸಿಹನು ಆತ : ದೀನದಲಿತರಿಗೆ ಶುಭಸಂದೇಶ ಬೋಧಿಸಲೆಂದೆ ಮನನೊಂದವರನು ಸಂತೈಸಿ ಗುಣಪಡಿಸಲೆಂದೆ ಬಂಧಿತರಿಗೆ ಬಿಡುಗಡೆಯನು ಪ್ರಕಟಿಸಲೆಂದೆ; ಸೆರೆಯಾಳುಗಳಿಗೆ ಬಂಧವಿಮುಕ್ತಿಯಾಗುವುದನು,


ಕೊಡುವೆ ನೀನು ಕಣ್ಣನ್ನು ಕುರುಡರಿಗೆ ತರುವೆ ಬಂಧಿಗಳನ್ನು ಸೆರೆಯಿಂದ ಹೊರಗೆ ಕತ್ತಲೆಯ ಕಾರಾಗೃಹದಿಂದ ಅವರನ್ನು ಬೆಳಕಿಗೆ.


‘ಹೊರಟುಹೋಗಿರಿ’ ಎನ್ನುವೆನು ಸೆರೆಯಾಳುಗಳಿಗೆ ‘ಬೆಳಕಿಗೆ ಬನ್ನಿರಿ’ ಎನ್ನುವೆನು ಕತ್ತಲಲ್ಲಿರುವವರಿಗೆ ಪಾಳುಬಿದ್ದ ಸೊತ್ತುಗಳನ್ನು ಹಂಚಿಕೊಡುವೆನು ಅವರಿಗೆ. ದೇಶವನ್ನು ಪುನಃ ತರುವೆನು ಪೂರ್ವಸ್ಥಿತಿಗೆ ದಾರಿಯುದ್ದಕ್ಕೂ ಆಹಾರ ಒದಗಿಸುವೆನು ನನ್ನ ಪ್ರಜೆಗೆ ಬೋಳು ಬೆಟ್ಟಗಳೆಲ್ಲ ಹುಲ್ಲುಗಾವಲುಗಳಾಗುವುವು ನನ್ನಾ ಮಂದೆಗೆ.


ತಾಳಿಕೊಂಡಿರಿ ಅವರನು ನೀವೆಷ್ಟೋ ವರ್ಷಗಳ ತನಕ ಎಚ್ಚರಿಸಿದಿರಿ ನಿಮ್ಮಾತ್ಮ ಪ್ರೇರಣೆಯಿಂದ, ಪ್ರವಾದಿಗಳ ಮೂಲಕ ಕಿವಿಗೊಡದಾ ಜನರನು ಹೊರದೂಡಿದಿರಿ ಅನ್ಯದೇಶದ ಪರಿಯಂತ.


ಆ ಒಂದು ಸಾವಿರ ವರ್ಷಗಳು ಮುಗಿದ ನಂತರ ಸೈತಾನನನ್ನು ಬಂಧನದಿಂದ ಬಿಡುಗಡೆ ಮಾಡಲಾಗುವುದು.


ಕೂಡಲೇ ಆರಾಧಿಸಲೆಂದು ಆತನ ಪಾದಗಳಿಗೆ ಅಡ್ಡಬಿದ್ದೆ. ಆಗ ಆತನು, “ನೀನು ನನಗೆ ಅಡ್ಡಬೀಳಬಾರದು, ನಾನು ನಿನ್ನ ಹಾಗೂ ಕ್ರಿಸ್ತೇಸು ಶ್ರುತಪಡಿಸಿದ ಸತ್ಯವನ್ನು ಅಂಗೀಕರಿಸಿದ ನಿನ್ನ ಸಹೋದರರ ಸಹ ಸೇವಕನಷ್ಟೆ. ನೀನು ದೇವರನ್ನು ಆರಾಧಿಸು,” ಎಂದನು. ಯೇಸು ಶ್ರುತಪಡಿಸಿದ ಸತ್ಯವೇ ಪ್ರವಾದಿಗಳ ಜೀವಾಳ.


ಅಂತೆಯೇ ಕ್ರಿಸ್ತಯೇಸು ನೀತಿವಂತರಾಗಿದ್ದರೂ ಅನೀತಿವಂತರಿಗಾಗಿ ಪ್ರಾಣತ್ಯಾಗಮಾಡಿದರು. ಪಾಪ ನಿವಾರಣಾರ್ಥವಾಗಿ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ನಮ್ಮನ್ನು ದೇವರ ಬಳಿಗೆ ಸೇರಿಸಲು ಸತ್ತರು. ದೇಹದಲ್ಲಿ ಅವರು ವಧಿತರಾದರೂ ಆತ್ಮದಲ್ಲಿ ಜೀವಂತರಾದರು.


ಪೂರ್ವಕಾಲದಲ್ಲಿ ನೋವನು ನಾವೆಯನ್ನು ಕಟ್ಟುತ್ತಿದ್ದಾಗ ತಾಳ್ಮೆಯಿಂದಿದ್ದ ದೇವರಿಗೆ ಅವಿಧೇಯರಾಗಿದ್ದ ಆತ್ಮಗಳೇ ಅವು. ನಾವೆಯೊಳಗಿದ್ದು ಕೆಲವರು, ಅಂದರೆ ಎಂಟು ಜನರು, ಜಲದಿಂದ ರಕ್ಷಣೆಹೊಂದಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು