Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 9:33 - ಕನ್ನಡ ಸತ್ಯವೇದವು C.L. Bible (BSI)

33 ಇನ್ನು ಕೆಲವು ಲೇವಿಯ ಕುಟುಂಬಗಳ ಮೇಲೆ ದೇವಾಲಯದ ಸಂಗೀತದ ಹೊಣೆಯಿತ್ತು. ಈ ಕುಟುಂಬಗಳ ಮುಖ್ಯಸ್ಥರು ದೇವಾಲಯದ ಕಟ್ಟಡಗಳಲ್ಲಿ ವಾಸಿಸುತ್ತಾ, ಹಗಲಿರುಳೂ ಕೆಲಸ ಮಾಡಬೇಕಾಗಿದ್ದರಿಂದ ಬೇರೆ ಕೆಲಸಗಳ ಜವಾಬ್ದಾರಿ ಅವರಿಗಿರಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಇನ್ನೂ ಕೆಲವರು ವಾದ್ಯಗಾರರಾಗಿ ಸಂಗೀತ ಸೇವೆಮಾಡುವ ಜವಾಬ್ದಾರಿಯಿತ್ತು. ಇವರು ಲೇವಿಯ ಗೋತ್ರಗಳಲ್ಲಿ ಪ್ರಧಾನರೂ ದೇವಾಲಯದ ಕೋಣೆಗಳಲ್ಲಿ ವಾಸಿಸುವವರೂ ಆಗಿದ್ದರು. ಅವರು ಹಗಲಿರುಳು ಕೆಲಸದಲ್ಲಿ ಇರುತ್ತಿದ್ದರಿಂದ ಇತರ ಸೇವೆಯಿಂದ ಬಿಡುಗಡೆ ಹೊಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ವಾದ್ಯಗಾರರ ಪಟ್ಟಿ. ಅವರು ಲೇವಿಯ ಗೋತ್ರಗಳಲ್ಲಿ ಪ್ರಧಾನರೂ ದೇವಾಲಯದ ಕೋಣೆಗಳಲ್ಲಿ ವಾಸಿಸುವವರೂ ಆಗಿದ್ದರು. ಅವರು ಹಗಲಿರುಳೂ ಕೆಲಸದಲ್ಲಿರುತ್ತಿದ್ದದರಿಂದ ಇತರ ಸೇವೆಯಿಂದ ಬಿಡುಗಡೆ ಹೊಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಗಾಯಕರು ಮತ್ತು ತಮ್ಮ ಕುಟುಂಬಗಳಿಗೆ ನಾಯಕರಾಗಿದ್ದ ಲೇವಿಯರು ದೇವಾಲಯದ ಕೋಣೆಗಳಲ್ಲಿ ಇರುತ್ತಿದ್ದರು. ಅವರು ಇತರ ಕೆಲಸಗಳನ್ನು ಮಾಡಬೇಕಾಗಿರಲಿಲ್ಲ; ಯಾಕೆಂದರೆ ದೇವಾಲಯದ ಹಗಲಿರುಳಿನ ಕೆಲಸಕಾರ್ಯಗಳ ಜವಾಬ್ದಾರಿಕೆ ಇವರದಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಇದಲ್ಲದೆ ಲೇವಿಯರ ಕುಟುಂಬಗಳಲ್ಲಿ ಮುಖ್ಯಸ್ಥರಾದ ಇವರು ಹಾಡುಗಾರರಾಗಿದ್ದು, ಸ್ವತಂತ್ರವಾದ ಕೊಠಡಿಗಳಲ್ಲಿ ವಾಸವಾಗಿದ್ದರು. ಏಕೆಂದರೆ ಅವರು ರಾತ್ರಿ ಹಗಲು ಅದೇ ಕಾರ್ಯದಲ್ಲಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 9:33
12 ತಿಳಿವುಗಳ ಹೋಲಿಕೆ  

ಮೀಕನ ಮಗ ಜಬ್ದೀಯ ಮೊಮ್ಮಗ, ಆಸಾಫನ ಮರಿಮಗ ಪ್ರಾರ್ಥನಾ ಸಮಯದಲ್ಲಿ ಕೃತಜ್ಞತಾ ಸ್ತುತಿಮಾಡಿರಿ ಎಂದು ಹೇಳಿ ಭಜಕರನ್ನು ನಡೆಸುತ್ತಿದ್ದ ಮತ್ತನ್ಯ, ತನ್ನ ಬಂಧುಗಳಲ್ಲಿ‍ ದ್ವಿತೀಯ ಸ್ಥಾನದವನಾದ ಬಕ್ಬುಕ್ಯ, ಶಮ್ಮೂವನ ಮಗನು; ಗಾಲಾಲನ ಮೊಮ್ಮಗನು, ಯೆದೂತೂನನ ಮರಿಮಗನು ಆದ ಅಬ್ದ ಎಂಬವರು.


ಇದಲ್ಲದೆ, ಆ ದೇವಾಲಯದ ಪರಿಚರ್ಯೆಯಲ್ಲಿದ್ದ, ಯಾಜಕ, ಲೇವಿಯ, ಗಾಯಕ, ದ್ವಾರಪಾಲಕ, ಚಾಕರ ಮುಂತಾದ ಸೇವಕರಲ್ಲಿ ಯಾವನಿಂದಲೂ ಶುಲ್ಕ, ತೆರಿಗೆ, ಸುಂಕ ಇವುಗಳನ್ನು ವಸೂಲಿ ಮಾಡುವುದಕ್ಕೆ ನಿಮಗೆ ಅಧಿಕಾರವಿಲ್ಲ ಎಂಬುದು ತಿಳಿದಿರಲಿ.


ಇವರೆಲ್ಲರೂ ತಮ್ಮ ಪೂರ್ವಜರ ಸಾಲಿಗೆ ಸೇರಿದಂತೆ ಲೇವಿ ಗೋತ್ರಗಳ ಮುಖ್ಯಸ್ಥರಾಗಿದ್ದು ಜೆರುಸಲೇಮಿನಲ್ಲೇ ನೆಲೆಸಿದ್ದರು.


ಗಾಯನಮಂಡಲಿಗಳು ಕೃತಜ್ಞತಾ ಸ್ತುತಿಕೀರ್ತನೆಗಳ ದೇವಸೇವೆಯೂ ಪೂರ್ವಕಾಲದಲ್ಲಿ ಅಂದರೆ, ದಾವೀದನ ಮತ್ತು ಆಸಾಫನ ಕಾಲದಲ್ಲೇ ಇದ್ದವು.


“ನೀನು ರೇಕಾಬನ ಮನೆತನದವರ ಬಳಿಗೆ ಹೋಗಿ, ಅವರ ಸಂಗಡ ಮಾತಾಡು. ಅವರನ್ನು ಸರ್ವೇಶ್ವರನಾಲಯದ ಒಂದು ಕೋಣೆಯೊಳಕ್ಕೆ ಕರೆದು ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಡು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು