1 ಪೂರ್ವಕಾಲ ವೃತ್ತಾಂತ 9:3 - ಕನ್ನಡ ಸತ್ಯವೇದವು C.L. Bible (BSI)3 ಯೆಹೂದ, ಬೆನ್ಯಾಮೀನ್, ಎಫ್ರಯಿಮ್ ಮತ್ತು ಮನಸ್ಸೆ ಗೋತ್ರಗಳವರು ಜೆರುಸಲೇಮಿನಲ್ಲಿ ವಾಸಮಾಡಲು ಹೋದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಯೆಹೂದ್ಯರು, ಬೆನ್ಯಾಮೀನ್ಯರು ಎಫ್ರಾಯೀಮ್ಯರು, ಮನಸ್ಸೆಯರು ಯೆರೂಸಲೇಮಿನಲ್ಲಿ ವಾಸವಾಗಿದ್ದವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಯೆಹೂದ್ಯರು, ಬೆನ್ಯಾಮೀನ್ಯರು, ಎಫ್ರಾಯೀಮ್ಯರು, ಮನಸ್ಸೆಯರು ಇವರಲ್ಲಿ ಯೆರೂಸಲೇವಿುನಲ್ಲಿ ವಾಸಿಸುತ್ತಿದ್ದವರ ಪಟ್ಟಿ - ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಯೆಹೂದ, ಬೆನ್ಯಾಮೀನ್, ಎಫ್ರಾಯೀಮ್ ಮತ್ತು ಮನಸ್ಸೆ ಗೋತ್ರದವರಾದ ಇವರು ಜೆರುಸಲೇಮಿನಲ್ಲಿ ವಾಸವಾಗಿದ್ದರು. ಇವರು ಯಾರೆಂದರೆ: ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಹೂದನ ಮಕ್ಕಳೂ, ಬೆನ್ಯಾಮೀನನ ಮಕ್ಕಳೂ, ಎಫ್ರಾಯೀಮ್, ಮನಸ್ಸೆ ಎಂಬವರ ಮಕ್ಕಳು ಯಾರೆಂದರೆ: ಅಧ್ಯಾಯವನ್ನು ನೋಡಿ |
ಜೆರುಸಲೇಮಿನಲ್ಲಿ ಯೆಹೂದನ ಗೋತ್ರದ ಆರುನೂರ ತೊಂಬತ್ತು ಕುಟುಂಬಗಳು ನೆಲಸಿದವು. ಯೆಹೂದನ ಮಗ ಪೆರೆಚನ ಸಂತತಿಯವರಿಗೆ ಅಮ್ಮೀಹೂದನ ಮಗನೂ ಒಮ್ರಿಯ ಮೊಮ್ಮಗನೂ ಆದ ಊತೈ ನಾಯಕನಾಗಿದ್ದನು. ಇಮ್ರಿ ಮತ್ತು ಬಾನಿ ಎಂಬವರು ಅವನ ಪೂರ್ವಜರಲ್ಲಿ ಇಬ್ಬರು. ಯೆಹೂದನ ಮಗ ಶೇಲಾಹನ ಸಂತಾನದವರಿಗೆ ಆಸಾಯನು ನಾಯಕ ಹಾಗೂ ಗೋತ್ರದ ಮುಖ್ಯಸ್ಥನಾಗಿದ್ದನು. ಯೆಹೂದನ ಮಗ ಜೆರಹನ ಸಂತತಿಯವರಿಗೆ ಯೆಯೂವೇಲ್ ನಾಯಕನಾಗಿದ್ದನು.