Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 9:17 - ಕನ್ನಡ ಸತ್ಯವೇದವು C.L. Bible (BSI)

17 ಜೆರುಸಲೇಮಿನಲ್ಲಿ ನೆಲೆಸಿದ ದೇವಾಲಯದ ದ್ವಾರಪಾಲಕರು: ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್ ಎಂಬವರು. ಶಲ್ಲೂಮ್ ಅವರ ಮುಖ್ಯಸ್ಥನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ದ್ವಾರಪಾಲಕರಲ್ಲಿ ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್, ಇವರೂ ಮತ್ತು ಇವರ ಸಹೋದರರು. ಇವರಲ್ಲಿ ಶಲ್ಲೂಮನು ಪ್ರಮುಖನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ದ್ವಾರಪಾಲಕರಲ್ಲಿ ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್ ಇವರೂ ಇವರ ಸಹೋದರರೂ. ಇವರಲ್ಲಿ ಶಲ್ಲೂಮನು ಪ್ರಮುಖನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ದ್ವಾರಪಾಲಕರು ಯಾರೆಂದರೆ: ಶಲ್ಲೂಮ್, ಅಕ್ಕೂಬ್, ಟಲ್ಮೋನ್, ಅಹೀಮಾನ್ ಮತ್ತು ಅವರ ಕುಟುಂಬದವರು. ಶಲ್ಲೂಮನು ಅವರ ನಾಯಕನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ದ್ವಾರಪಾಲಕರು ಯಾರೆಂದರೆ: ಶಲ್ಲೂಮನೂ, ಅಕ್ಕೂಬನೂ, ಟಲ್ಮೋನನೂ, ಅಹೀಮನ್‌ನೂ, ಅವರ ಸಹೋದರರೂ. ಅವರಲ್ಲಿ ಶಲ್ಲೂಮನು ಮುಖ್ಯಸ್ಥನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 9:17
8 ತಿಳಿವುಗಳ ಹೋಲಿಕೆ  

ದ್ವಾರಪಾಲಕರಲ್ಲಿ - ಅಕ್ಕೂಬ್‍ ಟಲ್ಮೋನರೂ ಬಾಗಿಲುಗಳನ್ನು ಕಾಯುತ್ತಿದ್ದ ಇವರ ಬಂಧುಗಳೂ; ಒಟ್ಟು ನೂರೆಪ್ಪತ್ತೆರಡು ಮಂದಿ.


ದ್ವಾರಪಾಲಕರನ್ನಾಗಿ ನಾಲ್ಕು ಸಾವಿರ ಹಾಗು ತಾನು ಒದಗಿಸಿದ್ದ ವಾದ್ಯಗಳಿಂದ ಸರ್ವೇಶ್ವರನನ್ನು ಭಜಿಸುವುದಕ್ಕಾಗಿ ನಾಲ್ಕು ಸಾವಿರ ಜನರನ್ನು ದಾವೀದನು ನೇಮಿಸಿದನು.


ಅಲ್ಲಿಂದ ಹೊರಟು ಊರಬಾಗಿಲಿಗೆ ಬಂದು, ಕಾವಲುಗಾರರಿಗೆ, “ನಾವು ಸಿರಿಯಾದವರ ಪಾಳೆಯಕ್ಕೆ ಹೋಗಿದ್ದೆವು; ಅಲ್ಲಿ ನಮಗೆ ಯಾರೂ ಕಾಣಿಸಲಿಲ್ಲ, ಮನುಷ್ಯಶಬ್ದವೇ ಕೇಳಿಸಲಿಲ್ಲ. ಕತ್ತೆಕುದುರೆಗಳನ್ನು ಅಲ್ಲಲ್ಲಿ ಕಟ್ಟಲಾಗಿದೆ. ಡೇರೆಗಳು ಇದ್ದ ಹಾಗೆಯೇ ಇರುತ್ತವೆ,” ಎಂದು ಕೂಗಿ ತಿಳಿಸಿದರು.


ಇದುವರೆಗೂ ಶಲ್ಲೂಮನ ಕುಟುಂಬಸ್ಥರು ಪೂರ್ವದಿಕ್ಕಿನಲ್ಲಿರುವ ಅರಸನ ಬಾಗಿಲನ್ನು ಕಾಯುತ್ತಿದ್ದಾರೆ. ಇದಕ್ಕೆ ಮೊದಲು ಅವರು ಲೇವಿಯರ ಪಾಳೆಯಗಳ ಕಾವಲುಗಾರರಾಗಿ ಇದ್ದರು.


ಇದಲ್ಲದೆ, ತನ್ನ ತಂದೆ ದಾವೀದನ ವಿಧಿಗೆ ಅನುಸಾರವಾಗಿ ಯಾಜಕ ವರ್ಗಗಳವರನ್ನೂ ಲೇವಿಯರನ್ನೂ ಅವರವರ ಸೇವಾವೃತ್ತಿಗೆ ನೇಮಿಸಿದನು. ಲೇವಿಯರು ಆಯಾ ದಿನದ ನೇಮದ ಪ್ರಕಾರ ದೇವಭಜನೆಮಾಡಿ ಯಾಜಕರ ಕೈಕೆಳಗೆ ಸೇವೆಮಾಡಬೇಕಾಗಿತ್ತು. ದ್ವಾರಪಾಲಕರು ತಮ್ಮ ತಮ್ಮ ವರ್ಗಗಳ ಸರದಿಯ ಮೇಲೆ ಆಯಾ ಬಾಗಿಲುಗಳನ್ನು ಕಾಯಬೇಕಾಗಿತ್ತು. ಇದು ದೈವಪುರುಷ ದಾವೀದರಾಜನ ಅಪ್ಪಣೆ ಆಗಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು