1 ಪೂರ್ವಕಾಲ ವೃತ್ತಾಂತ 9:13 - ಕನ್ನಡ ಸತ್ಯವೇದವು C.L. Bible (BSI)13 ಗೋತ್ರಗಳ ಮುಖ್ಯಸ್ಥರಾದ ಯಾಜಕರ ಒಟ್ಟು ಸಂಖ್ಯೆ ಒಂದು ಸಾವಿರದ ಏಳನೂರ ಅರವತ್ತು ಮಂದಿ, ದೇವಾಲಯದ ಎಲ್ಲಾ ಕೆಲಸಗಳಲ್ಲಿ ಅವರು ನಿಪುಣರಾಗಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201913 ಗೋತ್ರ ಪ್ರಧಾನರು ದೇವಾಲಯ ಸೇವೆಯಲ್ಲಿ ಗಟ್ಟಿಗರೂ ಆಗಿದ್ದ ಇವರೂ, ಇವರ ಸಹೋದರರೂ ಒಟ್ಟು ಸಾವಿರದ ಏಳು ನೂರ ಅರವತ್ತು ಜನರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)13 ಗೋತ್ರಪ್ರಧಾನರೂ ದೇವಾಲಯ ಸೇವೆಯಲ್ಲಿ ಗಟ್ಟಿಗರೂ ಆಗಿದ್ದ ಇವರೂ ಇವರ ಸಹೋದರರೂ ಒಟ್ಟಿಗೆ ಸಾವಿರದ ಏಳುನೂರ ಅರುವತ್ತು ಮಂದಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್13 ಒಟ್ಟು ಒಂದು ಸಾವಿರದ ಏಳುನೂರ ಅರವತ್ತು ಮಂದಿ ಯಾಜಕರಿದ್ದರು. ಇವರೆಲ್ಲರೂ ತಮ್ಮ ಕುಟುಂಬಗಳಿಗೆ ಪ್ರಧಾನರಾಗಿದ್ದರು. ದೇವಾಲಯದ ಕೆಲಸಕಾರ್ಯಗಳ ಜವಾಬ್ದಾರಿಕೆಯನ್ನು ಇವರು ಹೊತ್ತು ಕೊಂಡಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ13 ಅವರ ಸಹೋದರರೂ ತಮ್ಮ ಕುಟುಂಬಗಳಲ್ಲಿ ಯಜಮಾನರು 1,760 ಮಂದಿಯಾಗಿದ್ದರು. ಇವರು ದೇವರ ಮನೆಯ ಸೇವೆಯ ಕೆಲಸದಲ್ಲಿ ಪರಾಕ್ರಮಶಾಲಿಗಳಾಗಿದ್ದರು. ಅಧ್ಯಾಯವನ್ನು ನೋಡಿ |
ಜೆರುಸಲೇಮಿನಲ್ಲಿ ನೆಲೆಸಿದ ಲೇವಿಯರು: ಹಷಬ್ಯನ ಮಗ ಶೆಮಾಯ; ಇವನ ಪೂರ್ವಜರಲ್ಲಿ ಅಜ್ರೀಕಾಮ, ಹಷಬ್ಯ ಹಾಗು ಮೆರಾರೀ ಗೋತ್ರದ ಬಕ್ಬಕ್ಕರ್, ಹೆರೆಷ್, ಗಾಲಾಲ್ ಎಂಬವರಿದ್ದರು. ಶೆಮಾಯನ ಮಗ ಓಬದ್ಯ: ಇವನ ಪೂರ್ವಜರಲ್ಲಿ ಗಾಲಾಲ, ಯದೂತೂನ ಎಂಬವರಿದ್ದರು. ಮೀಕನ ಮಗ ಮತ್ತನ್ಯ: ಇವನ ಪೂರ್ವಜರಲ್ಲಿ ಜಿಕ್ರೀ, ಆಸಾಫ ಎಂಬವರಿದ್ದರು. ಆಸನ ಮಗನೂ ಎಲ್ಕಾನನ ಮೊಮ್ಮಗನೂ ಆದ ಬೆರೆಕ್ಯ; ನಟೋಫಾತ್ಯರ ಗ್ರಾಮಗಳಲ್ಲಿ ಇವನು ನೆಲೆಸಿದ್ದನು.