1 ಪೂರ್ವಕಾಲ ವೃತ್ತಾಂತ 6:57 - ಕನ್ನಡ ಸತ್ಯವೇದವು C.L. Bible (BSI)57-59 ಆರೋನನ ಸಂತತಿಯವರಿಗೆ ಕೊಡಲಾದ ಪಟ್ಟಣಗಳು: ಆಶ್ರಯ ನಗರವಾದ ಹೆಬ್ರೋನ್, ಯತ್ತೀರ್ ಹಾಗು ಲಿಬ್ನದ ಪಟ್ಟಣಗಳು, ಎಷ್ಟೆಮೋವ, ಹೀಲೇನ್, ದೆಬೀರ್, ಆಷಾನ್, ಬೇತ್ಷೆಮೆಷ್ ಮತ್ತು ಅವುಗಳ ಫಲವತ್ತಾದ ಪ್ರದೇಶಗಳು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201957 ಆರೋನನ ವಂಶದವರಿಗೆ ಹೆಬ್ರೋನ್ ಎಂಬ ಆಶ್ರಯ ನಗರವನ್ನು, ಲಿಬ್ನ ಮತ್ತು ಅದರ ಗೋಮಾಳಗಳು, ಯತ್ತೀರ್, ಎಷ್ಟೆಮೋವ, ಅವುಗಳ ಉಪನಗರಗಳೂ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)57 ಆರೋನನ ವಂಶದವರಿಗೆ ಹೆಬ್ರೋನೆಂಬ ಆಶ್ರಯನಗರವನ್ನೂ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್57 ಆರೋನನ ಸಂತತಿಯವರಿಗೆ ಹೆಬ್ರೋನ್ ಪಟ್ಟಣವನ್ನೇ ಕೊಟ್ಟರು. ಹೆಬ್ರೋನು ಆಶ್ರಯಪಟ್ಟಣಗಳಲ್ಲಿ ಒಂದಾಗಿತ್ತು. ಅವರಿಗೆ ಬೇರೆ ನಗರಗಳೂ ಕೊಡಲ್ಪಟ್ಟವು: ಲಿಬ್ನ, ಯತ್ತೀರ್, ಎಷ್ಟೆಮೋವ, ಹೀಲ್ಲೇನ್, ದೆಬೀರ್, ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ57 ಯೆಹೂದದ ಕುಲಗಳಲ್ಲಿ ಆರೋನನ ಪುತ್ರರಿಗೆ ಕೊಟ್ಟ ಪಟ್ಟಣಗಳು ಯಾವುವೆಂದರೆ: ಆಶ್ರಯ ನಗರವಾದ ಹೆಬ್ರೋನ್, ಲಿಬ್ನವೂ, ಯತ್ತೀರೂ, ಎಷ್ಟೆಮೋವವೂ, ಅವುಗಳ ಉಪನಗರಗಳೂ; ಅಧ್ಯಾಯವನ್ನು ನೋಡಿ |
ಎಜ್ರನಿಗೆ ಯೆತೆರ್, ಮೆರೆದ್, ಏಫೇರ್, ಯಾಲೋನ್ ಎಂಬ ನಾಲ್ವರು ಮಕ್ಕಳಿದ್ದರು. ಮೆರೆದನು ಈಜಿಪ್ಟಿನ ಅರಸನ ಮಗಳು ಬಿತ್ಯ ಎಂಬವಳನ್ನು ಮದುವೆಯಾಗಿ ಮಿರ್ಯಾಮ್ ಎಂಬ ಮಗಳನ್ನೂ ಶಮ್ಮೈ, ಎಷ್ಟೆಮೋವ ಎಂಬ ಇಬ್ಬರು ಗಂಡುಮಕ್ಕಳನ್ನೂ ಪಡೆದನು. ಇಷ್ಟಹನು ಎಷ್ಟಮೋವ್ ಪಟ್ಟಣವನ್ನು ಕಟ್ಟಿಸಿದನು. ಮೆರೆದನು ಸಹ ಯಾದ್ ಕುಲದ ಸ್ತ್ರೀಯೊಬ್ಬಳನ್ನು ಮದುವೆಯಾಗಿ ಅವಳಿಂದ ಮೂರು ಜನ ಮಕ್ಕಳನ್ನು ಪಡೆದನು: ಗೆದೋರ್ಯ ಪಟ್ಟಣ ಕಟ್ಟಿಸಿದ ಯೆರೆದ್, ಸೋಕೋವಿ ಪಟ್ಟಣದ ಸ್ಥಾಪಕ ಹೆಬಿರ್ ಮತ್ತು ಜಾನೋಹ ಪಟ್ಟಣದ ಸ್ಥಾಪಕ ಯೆಕೂತೀಯೇಲ್ ಎಂಬವರೇ ಆ ಮೂರು ಮಂದಿ.