1 ಪೂರ್ವಕಾಲ ವೃತ್ತಾಂತ 5:8 - ಕನ್ನಡ ಸತ್ಯವೇದವು C.L. Bible (BSI)8 ಅಜಾಜನ ಮಗನೂ ಶೆಮಾಯನ ಮೊಮ್ಮಗನೂ ಆದ ಬೆಳ. ಈ ಗೋತ್ರದವರು ಅರೋಯೇರದಲ್ಲಿಯೂ ಅಲ್ಲಿಂದ ನೆಬೋ ಹಾಗೂ ಬಾಳ್ಮೆಯೋನ್ ಸ್ಥಳಗಳವರೆಗಿನ ಪ್ರದೇಶಗಳಲ್ಲಿ ವಾಸಿಸಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಬೆಳನು ಅಜಾಜನ ಮಗ. ಅಜಾಜನು ಶೆಮಯನ ಮಗ. ಶೆಮಯನು ಯೋವೇಲನ ಮಗ. ಯೋವೇಲ್ಯರು ಅರೋಯೇರಿನಿಂದ ನೆಬೋ ಮತ್ತು ಬಾಳ್ಮೆಯೋನ್ ಎಂಬ ಸ್ಥಳಗಳವರೆಗೂ ವಾಸಿಸುತ್ತಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಬೆಳನು ಆಜಾಜನ ಮಗನು; ಇವನು ಶೆಮಯನ ಮಗನು; ಇವನು ಯೋವೇಲನ ಮಗನು. ಯೋವೇಲ್ಯರು ಅರೋಯೇರಿನಿಂದ ನೆಬೋ, ಬಾಳ್ಮೆಯೋನ್ ಎಂಬ ಸ್ಥಳಗಳವರೆಗೂ ವಾಸಿಸುತ್ತಿದ್ದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಬೆಳನು ಆಜಾಜನ ಮಗ, ಆಜಾಜನು ಶೆಮಯನ ಮಗ, ಶೆಮಯನು ಯೋವೇಲನ ಮಗನು. ಇವರೆಲ್ಲರೂ ನೆಬೋ ಮತ್ತು ಬಾಳ್ಮೆಯೋನ್ ಪ್ರಾಂತ್ಯದ ಅರೋಯೇರ್ ಸುತ್ತಮುತ್ತ ವಾಸಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಅಜಾಜನ ಮಗನೂ ಶೆಮಯನ ಮಗನೂ ಯೋಯೇಲನ ಮಗನೂ ಆದ ಬೆಳ. ಇವರು ಅರೋಯೇರು ಮೊದಲ್ಗೊಂಡು ನೆಬೋ, ಬಾಳ್ ಮೆಯೋನ್ ಎಂಬ ಸ್ಥಳಗಳವರೆಗೂ ವಾಸವಾಗಿದ್ದರು. ಅಧ್ಯಾಯವನ್ನು ನೋಡಿ |