Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 5:16 - ಕನ್ನಡ ಸತ್ಯವೇದವು C.L. Bible (BSI)

16 ಅವರು ಬಾಷಾನ್ ಮತ್ತು ಗಿಲ್ಯಾದ್ ಪ್ರದೇಶಗಳಲ್ಲಿಯ ಪಟ್ಟಣಗಳಲ್ಲಿಯೂ ಶಾರೋನಿನ ಹಸಿರುಗಾವಲುಗಳ ಪ್ರದೇಶಗಳಲ್ಲಿಯೂ ನೆಲೆಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಗಾದ್ಯರು ಗಿಲ್ಯಾದಿನಲ್ಲಿಯೂ ಬಾಷಾನಿನಲ್ಲಿಯೂ, ಅದರ ಗ್ರಾಮಗಳಲ್ಲಿಯೂ, ಶಾರೋನಿನ ಎಲ್ಲಾ ಹುಲ್ಲುಗಾವಲುಗಳಲ್ಲಿಯೂ ಅವುಗಳ ಮೇರೆಗಳಲ್ಲಿಯೂ ವಾಸಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಗಾದ್ಯರು ಗಿಲ್ಯಾದಿನಲ್ಲಿಯೂ ಬಾಷಾನಿನಲ್ಲಿಯೂ ಅದರ ಗ್ರಾಮಗಳಲ್ಲಿಯೂ ಶಾರೋನಿನ ಎಲ್ಲಾ ಹುಲ್ಲುಗಾವಲುಗಳಲ್ಲಿಯೂ ಅವುಗಳ ಮೇರೆಗಳಲ್ಲಿಯೂ ವಾಸಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಗಿಲ್ಯಾದ್ ಪ್ರಾಂತ್ಯದಲ್ಲಿ ಗಾದ್ ಕುಟುಂಬದ ಜನರು ವಾಸಿಸಿದರು. ಅವರು ಬಾಷಾನ್ ಪ್ರಾಂತ್ಯದಲ್ಲಿಯೂ ಅದರ ಸುತ್ತಮುತ್ತಲಿದ್ದ ಊರುಗಳಲ್ಲಿಯೂ ಶಾರೋನ್ ಪ್ರಾಂತ್ಯದ ಹುಲ್ಲುಗಾವಲುಗಳ ಗಡಿಗಳವರೆಗೂ ನೆಲೆಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಅವರು ಗಿಲ್ಯಾದಿನಲ್ಲಿರುವ ಬಾಷಾನಿನಲ್ಲಿಯೂ, ಅವರ ಊರುಗಳಲ್ಲಿಯೂ, ಅದರ ಮೇರೆಯಲ್ಲಿರುವ ಶಾರೋನಿನ ಸಮಸ್ತ ಉಪನಗರಗಳಲ್ಲಿಯೂ ವಾಸವಾಗಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 5:16
8 ತಿಳಿವುಗಳ ಹೋಲಿಕೆ  

ಶಾರೋನಿನಲ್ಲಿ ಮೇಯುವ ದನಗಳ ಮೇಲೆ‍ ಶಾರೋನ್ಯನಾದ ಶಿಟ್ರೈ; ಕಣಿವೆಗಳಲ್ಲಿ ಮೇಯುವ ದನಗಳ ಮೇಲೆ ಅದ್ಲೈಯ ಮಗನಾದ ಶಾಫಾಟ್;


ಉಲ್ಲಾಸಿಸಲಿ ಅದು ಹುಲುಸಾಗಿ ಹೂಬಿಟ್ಟು ಹೌದು, ಸಂತಸ ಸಂಗೀತ ಹಾಡುವಷ್ಟು, ದೊರಕಲಿ ಅದಕ್ಕೆ ಲೆಬನೋನಿನ ಮಹಿಮೆಯು ಕರ್ಮೆಲಿನ ಮತ್ತು ಶಾರೋನಿನ ವೈಭವವು. ಕಾಣುವುವು ಸರ್ವೇಶ್ವರನ ಮಹಿಮೆಯನು ನೋಡುವುವು ಇವೆಲ್ಲ ನಮ್ಮ ದೇವರ ವೈಭವವನು.


ನಾನು ಶಾರೋನಿನ ನೆಲಸಂಪಿಗೆ ತಗ್ಗಿನ ತಾವರೆ. ನಲ್ಲ :


ಲುದ್ದ ಮತ್ತು ಸಾರೋನಿನ ನಿವಾಸಿಗಳೆಲ್ಲರೂ ಅವನನ್ನು ಕಂಡು ಪ್ರಭುವಿನ ಭಕ್ತರಾದರು.


ಅಬ್ದೀಯೇಲನ ಮಗನೂ ಗೂನೀಯ ಮೊಮ್ಮಗನೂ ಆದ ಅಹೀಯು ಈ ಗೋತ್ರಗಳ ಮುಖ್ಯಸ್ಥನಾಗಿದ್ದನು.


ನನ್ನ ಜನರ ಹಿತಕ್ಕಾಗಿ ಶಾರೋನ್‍ಬಯಲು ಮಂದೆಗಳಿಗೆ ಹುಲ್ಲುಗಾವಲಾಗುವುದು; ಆಕೋರಿನ ಕಣಿವೆ ದನಕರುಗಳಿಗೆ ಕೊಟ್ಟಿಗೆಯಾಗುವುದು.


ಮೋಶೆ ಗಾದ್ ಕುಲದ ಗೋತ್ರಗಳಿಗೆ ಸ್ವಂತ ಆಸ್ತಿಯಾಗಿ ಕೊಟ್ಟ ಪ್ರದೇಶಗಳು ಇವು:


ಈ ಎಲ್ಲ ಗ್ರಾಮನಗರಗಳು ಗಾದ್ ಕುಲದ ಆಸ್ತಿಪಾಸ್ತಿ ಆದವು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು