1 ಪೂರ್ವಕಾಲ ವೃತ್ತಾಂತ 5:10 - ಕನ್ನಡ ಸತ್ಯವೇದವು C.L. Bible (BSI)10 ಅರಸ ಸೌಲನ ಕಾಲದಲ್ಲಿ ರೂಬೇನ್ ಗೋತ್ರದವರು ಹಗ್ರೀಯರ ಮೇಲೆ ದಾಳಿಮಾಡಿ, ಯುದ್ಧದಲ್ಲಿ ಅವರೆಲ್ಲರನ್ನೂ ಸಂಹರಿಸಿ, ಗಿಲ್ಯಾದಿನ ಪೂರ್ವಭಾಗದ ಪ್ರದೇಶವನ್ನು ಆಕ್ರಮಿಸಿಕೊಂಡರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201910 ಇವರು ಸೌಲನ ಕಾಲದಲ್ಲಿ ಹಗ್ರೀಯರೊಡನೆ ಯುದ್ಧಮಾಡಿ, ಅವರನ್ನು ಸಂಹರಿಸಿ, ಗಿಲ್ಯಾದಿನ ಪೂರ್ವದಿಕ್ಕಿನ ಪ್ರಾಂತ್ಯಗಳಲ್ಲಿದ್ದ ಅವರ ಡೇರೆಗಳಲ್ಲಿ ವಾಸಮಾಡ ತೊಡಗಿದನು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)10 ಇವರಿಗೆ ಗಿಲ್ಯಾದ್ ದೇಶದಲ್ಲಿ ಅನೇಕ ಕುರಿ ಹಿಂಡುಗಳಿದ್ದವಷ್ಟೆ. ಇವರು ಸೌಲನ ಕಾಲದಲ್ಲಿ ಹಗ್ರೀಯರೊಡನೆ ಯುದ್ಧಮಾಡಿ ಅವರನ್ನು ಸಂಹರಿಸಿ ಗಿಲ್ಯಾದಿನ ಪೂರ್ವದಿಕ್ಕಿನ ಪ್ರಾಂತಗಳಲ್ಲಿದ್ದ ಅವರ ಡೇರೆಗಳಲ್ಲಿ ವಾಸಿಸುವವರಾದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್10 ಸೌಲನು ಅರಸನಾಗಿದ್ದ ಸಮಯದಲ್ಲಿ ಬೆಳನ ಜನರು ಹಗ್ರೀಯರೊಂದಿಗೆ ಯುದ್ಧಮಾಡಿ ಅವರ ಗುಡಾರಗಳಲ್ಲಿ ವಾಸಮಾಡಿದರು. ಆ ಗುಡಾರಗಳಲ್ಲಿ ವಾಸಮಾಡುತ್ತಾ ಗಿಲ್ಯಾದಿನ ಪೂರ್ವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ10 ಸೌಲನ ದಿವಸಗಳಲ್ಲಿ ರೂಬೇನ್ ವಂಶದವರು ಹಗ್ರೀಯರ ಸಂಗಡ ಯುದ್ಧಮಾಡಿ, ಅವರ ಕೈಯಲ್ಲಿ ಸೋತುಹೋದರು. ರೂಬೇನ್ ವಂಶದವರು ಗಿಲ್ಯಾದಿನ ಸಮಸ್ತ ಪೂರ್ವ ದಿಕ್ಕಿನಾದ್ಯಂತ ಹಗ್ರೀಯರ ವಾಸಸ್ಥಾನಗಳನ್ನು ಆಕ್ರಮಿಸಿಕೊಂಡರು. ಅಧ್ಯಾಯವನ್ನು ನೋಡಿ |