Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 4:1 - ಕನ್ನಡ ಸತ್ಯವೇದವು C.L. Bible (BSI)

1 ಯೆಹೂದನ ವಂಶಜರು: ಪೆರೆಚ್, ಹೆಚ್ರೋನ್, ಕರ್ಮೀ, ಹೂರ್ ಮತ್ತು ಶೋಬಾಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಯೆಹೂದನ ಸಂತಾನದವರು: ಪೆರೆಚ್, ಹೆಚ್ರೋನ್, ಕರ್ಮೀ, ಹೂರ್ ಮತ್ತು ಶೋಬಾಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಯೆಹೂದನ ವಂಶಾವಳಿ - ಪೆರೆಚ್, ಹೆಚ್ರೋನ್, ಕರ್ಮೀ, ಹೂರ್, ಶೋಬಾಲ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಪೆರೆಚ್, ಹೆಚ್ರೋನ್, ಕರ್ಮಿ, ಹೂರ್ ಮತ್ತು ಶೋಬಾಲರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಯೆಹೂದನ ವಂಶಜರು: ಪೆರೆಚನು, ಹೆಚ್ರೋನನು, ಕರ್ಮೀ, ಹೂರನು, ಶೋಬಾಲನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 4:1
16 ತಿಳಿವುಗಳ ಹೋಲಿಕೆ  

ಯೆಹೂದನ ಮಕ್ಕಳು - ಏರ್, ಓನಾನ್, ಶೆಲಾಹ, ಪೆರೆಜ್ ಮತ್ತು ಜೆರಹ (ಇವರಲ್ಲಿ ಏರ್ ಹಾಗೂ ಓನಾನ್ ಕಾನಾನ್ ನಾಡಿನಲ್ಲೇ ಕಾಲವಾಗಿದ್ದರು). ಪೆರೆಚನ ಮಕ್ಕಳು - ಹೆಚ್ರೋನ್ ಮತ್ತು ಹಾಮೂಲ್.


ಆದರೆ ಅದು ಕೈಯನ್ನು ಹಿಂದಕ್ಕೆ ತೆಗೆದುಕೊಂಡಿತು. ಅದರೊಡನೆ ಇದ್ದ ಇನ್ನೊಂದು ಕೂಸು ಹೊರಗೆ ಬಂದಿತು. ಇದನ್ನು ಕಂಡ ಸೂಲಗಿತ್ತಿ, “ನೀನು ಕಿತ್ತುಕೊಂಡು ಬಂದಿರುತ್ತೀಯಲ್ಲಾ,” ಎಂದಳು. ಈ ಕಾರಣ ಆ ಮಗುವಿಗೆ ‘ಪೆರೆಚ್’ ಎಂದು ಹೆಸರಾಯಿತು.


ನಹಸ್ಸೋನ್ ಅಮ್ಮಿನದಾಬನಿಗೆ, ಅಮ್ಮಿನಾದಾಬನು ಅದ್ಮಿನನಿಗೆ, ಅದ್ಮಿನ್ ಆರ್ನೈಯನಿಗೆ, ಆರ್ನೈಯ ಹೆಸ್ರೋನನಿಗೆ, ಹೆಸ್ರೋನ್ ಪೆರೆಸನಿಗೆ, ಪೆರೆಸ್ ಯೂದನಿಗೆ ಹುಟ್ಟಿದರು.


ಯೂದನಿಗೆ ತಾಮರ ಎಂಬವಳಿಂದ, ಪೆರಸ್ ಹಾಗೂ ಜೆರಹನ್ ಹುಟ್ಟಿದರು.


ಹೆಚ್ರೋನನ ಮಗ ಕಾಲೇಬ, ಅಜೂಬಳನ್ನು ಮದುವೆಯಾಗಿ ಯೆರ್ಯೋತ್ ಎಂಬ ಮಗಳನ್ನು ಪಡೆದನು. ಆಕೆಯ ಮೂರು ಜನ ಗಂಡುಮಕ್ಕಳು: ಯೇಷೆರ್, ಶೊಬಾಬ್, ಅರ್ದೋನ್ ಎಂಬವರು.


ಹೆಚ್ರೋನನಿಗೆ ಮೂರು ಜನ ಮಕ್ಕಳು ಇದ್ದರು. ಅವರು - ಯೆರಹ್ಮೇಲ್, ರಾಮ್ ಮತ್ತು ಕೆಲೂಬಾಯ್ ಎಂಬವರು.


ಪೆರೆಚನಿಗೆ ಹೆಚ್ರೋನ್, ಹಾಮುಲ್ ಎಂಬಿಬ್ಬರು ಮಕ್ಕಳು.


ಯೆಹೂದನ ಹೆಂಡತಿ ಶೂನನ ಮಗಳಾದ ಕಾನಾನಳು. ಅವಳಿಂದ ಏರ್, ಓನಾನ್, ಶೇಲಹ ಎಂಬ ಮೂರು ಮಕ್ಕಳು ಜನಿಸಿದರು. ಅವನ ಹಿರಿಯ ಮಗ ಏರನು ಬಹಳ ದುಷ್ಟ. ಆದುದರಿಂದ ಸರ್ವೇಶ್ವರ ಅವನನ್ನು ಕೊಂದುಹಾಕಿದರು.


ಪೆರೆಚನಿಂದ ದಾವೀದನವರೆಗಿನ ವಂಶಾವಳಿ: ಪೆರೆಚನಿಗೆ ಹೆಚ್ರೋನನು, ಹೆಚ್ರೋನನಿಗೆ ರಾಮನು, ರಾಮನಿಗೆ ಅಮಿನದಾಬನು ಹುಟ್ಟಿದರು. ಅಮಿನದಾಬನಿಗೆ ನಹಶೋನ, ನಹಶೋನನಿಗೆ ಸಲ್ಮೋನ್, ಸಲ್ಮೋನನಿಗೆ ಬೋವಜನು ಹುಟ್ಟಿದರು. ಬೋವಜನಿಗೆ ಓಬೇದ್, ಓಬೇದನಿಗೆ ಜೆಸ್ಸಯ, ಜೆಸ್ಸಯನಿಗೆ ದಾವೀದ ಹುಟ್ಟಿದರು.


ಎಲ್ಯೋಗೇನೈಯ ಏಳು ಜನ ಮಕ್ಕಳು: ಹೋದವ್ಯ, ಎಲ್ಯಾಷೀಬ್, ಪೆಲಾಯ, ಅಕ್ಕೂಬ್, ಯೋಹಾನಾನ್, ದೆಲಾಯ, ಅನಾನೀ ಎಂಬವರು.


ಶೋಬಾಲ್ ರೆವಾಯನ ತಂದೆ, ಇವನು ಯಹತನ ತಂದೆ. ಇವನು ಚೊರ್ರದಲ್ಲಿ ವಾಸಿಸಿದ ಜನಾಂಗದ ಮೂಲಪಿತೃಗಳಾದ ಅಹೂಮೈ ಹಾಗು ಲಹದ್ ಎಂಬವರ ತಂದೆ.


ಯೆಹೂದನ ಮಕ್ಕಳಲ್ಲಿ ಏರ್, ಓನಾನ್ಯರು ಕಾನಾನ ನಾಡಿನಲ್ಲಿ ಸತ್ತರು.


ಯೆಹೂದನಿಗೆ ಅವನ ಸೊಸೆ ತಾಮಾರಳಿಂದ ಪೆರೆಜ್ ಹಾಗೂ ಜೆರಹ ಎಂಬ ಮಕ್ಕಳು ಜನಿಸಿದರು. ಯೆಹೂದನ ಮಕ್ಕಳು ಒಟ್ಟು ಐದು ಮಂದಿ.


ಜೆರಹನ ಸಂತತಿಯಲ್ಲಿ ಕರ್ಮಿಯ ಮಗ ಆಕಾರನು ಸರ್ವೇಶ್ವರನಿಗೆ ಮೀಸಲಾಗಿಟ್ಟಿದ್ದ ವಸ್ತುಗಳನ್ನು ಕದ್ದುಕೊಂಡದ್ದರಿಂದ ಇಸ್ರಯೇಲರಿಗೆ ಆಪತ್ತನ್ನು ತಂದಿದ್ದನು.


ಇನ್ನುಳಿದ ಕಾಲೇಬನ ವಂಶಜರು: ಕಾಲೇಬನಿಗೆ ಅವನ ಹೆಂಡತಿ ಎಫ್ರಾತಳಿಂದ ಜನಿಸಿದ ಚೊಚ್ಚಲ ಮಗನ ಹೆಸರು ಹೂರ ಎಂದು. ಹೂರನ ಮಗ ಶೋಬಾಲ್ - ಕಿರ್ಯತ್ಯಾರೀಮ್ ಪಟ್ಟಣವನ್ನೂ


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು