Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 3:16 - ಕನ್ನಡ ಸತ್ಯವೇದವು C.L. Bible (BSI)

16 ಯೆಹೋಯಾಕೀಮನಿಗೆ ಯೆಕೊನ್ಯ ಮತ್ತು ಚಿದ್ಕೀಯ ಎಂಬಿಬ್ಬರು ಮಕ್ಕಳಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಯೆಹೋಯಾಕೀಮನ ಮಗ ಯೆಕೊನ್ಯನು; ಯೆಕೊನ್ಯನ ಮಗ ಚಿದ್ಕೀಯನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಯೆಹೋಯಾಕೀಮನ ಮಗನು ಯೆಕೊನ್ಯ; ಇವನ ಮಗನು ಚಿದ್ಕೀಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಯೆಹೋಯಾಕೀಮನ ಗಂಡುಮಕ್ಕಳು ಯಾರೆಂದರೆ: ಯೆಕೊನ್ಯ ಮತ್ತು ಚಿದ್ಕೀಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಯೆಹೋಯಾಕೀಮನ ಮಕ್ಕಳು: ಇವನ ಮಗನಾದ ಯೆಕೊನ್ಯ; ಇವನ ಮಗನು ಚಿದ್ಕೀಯ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 3:16
12 ತಿಳಿವುಗಳ ಹೋಲಿಕೆ  

ಆಮೋನನಿಗೆ ಯೋಷೀಯ ಹುಟ್ಟಿದರು. ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು. ಈ ಸಮಯದಲ್ಲೇ ಇಸ್ರಯೇಲರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು.


ಅವನು ಮೃತನಾಗಿ ಪಿತೃಗಳ ಬಳಿ ಸೇರಿದನು. ಅವನ ಸ್ಥಾನದಲ್ಲಿ ಅವನ ಮಗ ಯೆಹೋಯಾಖೀನನು ಅರಸನಾದನು.


ಸರ್ವೇಶ್ವರನ ಮಾತಿದು - “ನನ್ನ ಜೀವದಾಣೆ, ಯೆಹೋಯಾಕೀಮನ ಮಗನೂ ಜುದೇಯದ ಅರಸನೂ ಆದ ಕೊನ್ಯನೇ, ನೀನು ನನ್ನ ಬಲಗೈ ಮುದ್ರೆಯುಂಗುರವಾಗಿದ್ದರೂ ನಾನು ನಿನ್ನನ್ನು ಅಲ್ಲಿಂದ ಕಿತ್ತುಹಾಕುತ್ತಿದ್ದೆ.


ಬಾಬಿಲೋನಿನ ಅರಸನು ಯೆಹೋಯಾಖೀನನಿಗೆ ಬದಲಾಗಿ ಅವನ ಚಿಕ್ಕಪ್ಪನಾದ ಮತ್ತನ್ಯ ಎಂಬುವನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ‘ಚಿದ್ಕೀಯ’ ಎಂಬ ಹೆಸರಿಟ್ಟನು.


ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು ಜೆರುಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಜೆರುಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ ಎಂಬಾಕೆ ಇವನ ತಾಯಿ.


ಕೊನ್ಯನು ಬಿಸಾಡಲ್ಪಟ್ಟ ಒಡಕು ಕುಡಿಕೆಯೆ? ಯಾರಿಗೂ ಬೇಡವಾದ ಮಣ್ಣಿನ ಮಡಿಕೆಯೆ? ಅವನೂ ಅವನ ಮಡದಿಮಕ್ಕಳೇಕೆ ಬೀದಿಪಾಲಾಗಿದ್ದಾರೆ?


ಯೆಹೋಯಾಕೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದನು. ಅವನು ಜೆರುಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸ ಆಳಿದನು. ಅವನು ಸರ್ವೇಶ್ವರನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.


ಯೋಷೀಯನಿಗೆ ನಾಲ್ಕು ಜನಮಕ್ಕಳು: ಯೋಹಾನಾನ್, ಯೆಹೋಯಾಕೀಮ್, ಚಿದ್ಕೀಯ ಮತ್ತು ಶಲ್ಲೂಮ್.


ಎವೀಲ್ಮೆರೋದಕನು ತಾನು ಪಟ್ಟಕ್ಕೆ ಬಂದ ಮೊದಲನೆಯ ವರ್ಷದಲ್ಲಿ ಅಂದರೆ, ಜುದೇಯದ ಅರಸ ಯೆಹೋಯಾಖೀನನು ಸೆರೆಗೆ ಸಿಕ್ಕಿದ ಮೂವತ್ತೇಳನೆಯ ವರ್ಷದ ಹನ್ನೆರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ, ಯೆಹೋಯಾಖೀನನನ್ನು ಸೆರೆಯಿಂದ ಬಿಡಿಸಿ ಉದ್ಧಾರ ಮಾಡಿದನು.


ಬಾಬಿಲೋನಿಯರಿಂದ ಸೆರೆಯಾಳಾಗಿ ಒಯ್ಯಲ್ಪಟ್ಟ ಅರಸ ಯೆಕೊನ್ಯನ ವಂಶಜರು ಇವರು: ಯೆಕೊನ್ಯನಿಗೆ ಏಳು ಜನ ಗಂಡುಮಕ್ಕಳು: ಶೆಯಲ್ತೀಯೇಲ್,


ಯೋಷೀಯನ ಮಗ ಚಿದ್ಕೀಯನು ಯೆಹೋಯಾಕೀಮನ ಮಗ ಕೊನ್ಯನಿಗೆ ಬದಲಾಗಿ ರಾಜ್ಯವಾಳುತ್ತಿದ್ದನು. ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಅವನನ್ನು ಜುದೇಯದ ನಾಡಿಗೆ ಅರಸನನ್ನಾಗಿಸಿದ್ದನು.


ಅವರ ಪಿತೃಗಳ ದೇವರಾದ ಸರ್ವೇಶ್ವರ ತಮ್ಮ ಪ್ರಜೆಯನ್ನೂ ನಿವಾಸಸ್ಥಾನವನ್ನೂ ಕನಿಕರಿಸಿ, ಸಾವಕಾಶ ಮಾಡದೆ, ತಮ್ಮ ದೂತರ ಮುಖಾಂತರ ಅವರನ್ನು ಎಚ್ಚರಿಸುತ್ತಾ ಬಂದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು