1 ಪೂರ್ವಕಾಲ ವೃತ್ತಾಂತ 29:3 - ಕನ್ನಡ ಸತ್ಯವೇದವು C.L. Bible (BSI)3 ಪವಿತ್ರಾಲಯಕ್ಕೆ ಇವುಗಳನ್ನೆಲ್ಲಾ ಸಂಗ್ರಹಿಸಿದ್ದಲ್ಲದೆ, ನನ್ನ ದೇವರಾಲಯದ ಮೇಲಣ ಅಭಿಮಾನದಿಂದ ಅದಕ್ಕಾಗಿ ನನ್ನ ಸ್ವಂತ ಸೊತ್ತಿನಿಂದ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ನಾನು ಪವಿತ್ರಾಲಯಕ್ಕೆ ಇವುಗಳನ್ನೆಲ್ಲಾ ಸಂಗ್ರಹಿಸಿದ್ದಲ್ಲದೆ ನನ್ನ ದೇವರ ಆಲಯದ ಮೇಲಣ ಅನುರಾಗದಿಂದ ಅದಕ್ಕೊಸ್ಕರ ನನ್ನ ಸ್ವಂತ ಸೊತ್ತಿನಿಂದ ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ನಾನು ಪವಿತ್ರಾಲಯಕ್ಕೆ ಇವುಗಳನ್ನೆಲ್ಲಾ ಸಂಗ್ರಹಿಸಿದ್ದಲ್ಲದೆ ನನ್ನ ದೇವರ ಆಲಯದ ಮೇಲಣ ಅನುರಾಗದಿಂದ ಅದಕ್ಕೋಸ್ಕರ ನನ್ನ ಸ್ವಂತ ಸೊತ್ತಿನಿಂದ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಅಲ್ಲದೆ ದೇವಾಲಯಕ್ಕೆ ಬೇಕಾದ ಬೆಳ್ಳಿಬಂಗಾರಗಳ ಸಾಮಾನುಗಳನ್ನು ನಾನು ಕಾಣಿಕೆಯಾಗಿ ಕೊಟ್ಟಿರುತ್ತೇನೆ. ಯಾಕೆಂದರೆ ನನ್ನ ದೇವರ ಪರಿಶುದ್ಧಾಲಯವು ಕಟ್ಟಲ್ಪಡಬೇಕೆಂಬುದು ನಿಜವಾಗಿಯೂ ನನ್ನ ಬಯಕೆಯಾಗಿದೆ. ಈ ಪವಿತ್ರ ದೇವಾಲಯವನ್ನು ಕಟ್ಟಲು ನಾನು ಈ ವಸ್ತುಗಳನ್ನೆಲ್ಲಾ ಕೊಡುತ್ತಿದ್ದೇನೆ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಇದಲ್ಲದೆ ನಾನು ನನ್ನ ದೇವರ ಮನೆಯ ಮೇಲೆ ನನಗೆ ಭಕ್ತಿ ಇರುವುದರಿಂದ, ನಾನು ಪರಿಶುದ್ಧ ಮನೆಗೋಸ್ಕರ ಸಿದ್ಧಮಾಡಿದ ಎಲ್ಲಾದರ ಹೊರತು, ನನ್ನ ಸ್ವಂತ ಸ್ವತ್ತಿನಿಂದ ಬಂಗಾರವನ್ನೂ, ಬೆಳ್ಳಿಯನ್ನೂ ನನ್ನ ಪವಿತ್ರ ದೇವರ ಮನೆಗೆ ಕೊಟ್ಟಿದ್ದೇನೆ. ಅಧ್ಯಾಯವನ್ನು ನೋಡಿ |
ಯೆಹೋವಾಷನು ಯಾಜಕರಿಗೆ, “ಸರ್ವೇಶ್ವರನ ಆಲಯಕ್ಕೆ ಸೇರುವ ಎಲ್ಲಾ ಪರಿಶುದ್ಧ ದ್ರವ್ಯವನ್ನು, ಅಂದರೆ ಜನಗಣತಿಯಲ್ಲಿ ಎಣಿಕೆಯಾದ ಪ್ರತಿಯೊಬ್ಬನು ತಂದುಕೊಡುವ ಹಣ, ದೇವರಿಗೆ ಪ್ರತಿಷ್ಟಿತನಾದ ವ್ಯಕ್ತಿ ತನ್ನ ಪ್ರಾಣವನನ್ನು ಬಿಡಿಸಿಕೊಳ್ಳುವುದಕ್ಕಾಗಿ ತೆರುವ ಹಣ, ಜನರು ಸರ್ವೇಶ್ವರನ ಆಲಯಕ್ಕೆ ಸ್ವೇಚ್ಛೆಯಿಂದ ತಂದು ಒಪ್ಪಿಸುವ ಹಣ, ಇವುಗಳನ್ನು ತೆಗೆದುಕೊಂಡು ದೇವಾಲಯವು ಎಲ್ಲೆಲ್ಲಿ ಶಿಥಿಲವಾಗಿ ಇರುತ್ತದೆ ಎಂದು ನೋಡಿ ಅದನ್ನು ಸರಿಮಾಡುವುದಕ್ಕಾಗಿ ವಿನಿಯೋಗಿಸಿರಿ.
ನಾನು ನನ್ನಿಂದಾಗುವಷ್ಟು ಪ್ರಯಾಸಪಟ್ಟು ಬಂಗಾರದ ಕೆಲಸಕ್ಕಾಗಿ ಬೇಕಾಗುವ ಬಂಗಾರ, ಬೆಳ್ಳಿಯ ಕೆಲಸಕ್ಕಾಗಿ ಬೇಕಾಗುವ ಬೆಳ್ಳಿ, ತಾಮ್ರದ ಕೆಲಸಕ್ಕಾಗಿ ಬೇಕಾಗುವ ತಾಮ್ರ, ಕಬ್ಬಿಣದ ಕೆಲಸಕ್ಕಾಗಿ ಬೇಕಾಗುವ ಕಬ್ಬಿಣ, ಮರದ ಕೆಲಸಕ್ಕಾಗಿ ಬೇಕಾಗುವ ಮರ, ಇವುಗಳನ್ನೂ ಗೋಮೇಧಕ ರತ್ನ ಕೆತ್ತುವುದಕ್ಕೆ ಬೇಕಾಗುವ ರತ್ನ, ಕೆಂಪುಹರಳು, ವಿವಿಧ ವರ್ಣದ ಕಲ್ಲು, ತರತರದ ಮಣೆ, ಚಂದ್ರಕಾಂತ ಇವುಗಳನ್ನೂ ನನ್ನ ದೇವರ ಮಂದಿರಕ್ಕಾಗಿ ರಾಶಿರಾಶಿಯಾಗಿ ಸಂಗ್ರಹಿಸಿದ್ದೇನೆ.