Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 29:24 - ಕನ್ನಡ ಸತ್ಯವೇದವು C.L. Bible (BSI)

24 ಎಲ್ಲಾ ಅಧಿಪತಿಗಳು, ದಂಡಿನವರು, ಹಾಗೂ ಅರಸ ದಾವೀದನ ಎಲ್ಲಾ ಮಕ್ಕಳು ಅವನಿಗೆ ಅಧೀನರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

24 ಎಲ್ಲಾ ಅಧಿಪತಿಗಳೂ ದಂಡಿನವರೂ ಅರಸನಾದ ದಾವೀದನ ಎಲ್ಲಾ ಮಕ್ಕಳೂ ಅವನಿಗೆ ಅಧೀನರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

24 ಎಲ್ಲಾ ಅಧಿಪತಿಗಳೂ ದಂಡಿನವರೂ ಅರಸನಾದ ದಾವೀದನ ಎಲ್ಲಾ ಮಕ್ಕಳೂ ಅವನಿಗೆ ಅಧೀನರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

24 ಎಲ್ಲಾ ನಾಯಕರು, ಸೈನಿಕರು ಮತ್ತು ದಾವೀದನ ಗಂಡುಮಕ್ಕಳು ಸೊಲೊಮೋನನನ್ನು ತಮ್ಮ ಅರಸನನ್ನಾಗಿ ಸ್ವೀಕರಿಸಿ ಅವನಿಗೆ ವಿಧೇಯರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

24 ಎಲ್ಲಾ ಪ್ರಧಾನರೂ, ಪರಾಕ್ರಮಶಾಲಿಗಳೂ, ಅರಸನಾದ ದಾವೀದನ ಸಮಸ್ತ ಪುತ್ರರೂ ಅರಸನಾದ ಸೊಲೊಮೋನನಿಗೆ ಅಧೀನರಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 29:24
12 ತಿಳಿವುಗಳ ಹೋಲಿಕೆ  

ಏಕೆಂದರೆ ಇವನು ಇಟ್ಟ ಆಣೆಯನ್ನು ತಿರಸ್ಕರಿಸಿ ಒಪ್ಪಂದವನ್ನೂ ಮೀರಿದನಲ್ಲವೇ? ಕೈಯ ಮೇಲೆ ಕೈಯಿಟ್ಟು ಭಾಷೆಮಾಡಿ ಪ್ರಯೋಜನವೇನು? ಅದನ್ನೆಲ್ಲಾ ಮುರಿದುಬಿಟ್ಟನಲ್ಲವೇ? ಇವನು ನನ್ನಿಂದ ಪಾರಾಗನು.


ಈಗ ನಿಮ್ಮ ಪೂರ್ವಜರಂತೆ ಆಜ್ಞೆಗೆ ಮಣಿಯದವರಾಗಬೇಡಿ. ಸರ್ವೇಶ್ವರನಿಗೆ ಅಧೀನರಾಗಿರಿ. ನಿಮ್ಮ ದೇವರಾದ ಸರ್ವೇಶ್ವರ ಸದಾಕಾಲಕ್ಕೂ ಪ್ರತಿಷ್ಠಿಸಿಕೊಂಡ ಪವಿತ್ರಾಲಯಕ್ಕೆ ಬಂದು ಅವರನ್ನು ಅವಲಂಬಿಸಿರಿ. ಆಗ ನಿಮ್ಮ ಮೇಲಿರುವ ಅವರ ಉಗ್ರಕೋಪ ತೊಲಗಿಹೋಗುವುದು.


ಇಗೋ, ಯಾಜಕರ ಮತ್ತು ಲೇವಿಯರ ವರ್ಗಗಳವರು ಅಗತ್ಯವಾದ ಎಲ್ಲ ದೇವಾಲಯ ಸಂಬಂಧ ಕೆಲಸವನ್ನು ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಯಾವ ಕೆಲಸವಿದ್ದರೂ ಎಲ್ಲವನ್ನೂ ಜಾಣತನದಿಂದ ಮಾಡುವುದಕ್ಕೆ ಸಿದ್ಧಮನಸ್ಸುಳ್ಳವರು ನಿನ್ನ ಹತ್ತಿರ ಇದ್ದಾರೆ. ಅಧಿಪತಿಗಳೂ ಎಲ್ಲಾ ಪ್ರಜೆಗಳೂ ನಿನ್ನ ಆಜ್ಞೆಗೆ ವಿಧೇಯರಾಗಿರುವರು,” ಎಂದು ಹೇಳಿದನು.


ತನ್ನ ಮಗ ಸೊಲೊಮೋನನಿಗೆ ನೆರವಾಗಬೇಕೆಂದು ಇಸ್ರಯೇಲರ ಎಲ್ಲ ಅಧಿಪತಿಗಳಿಗೆ ದಾವೀದನು ಅಜ್ಞಾಪಿಸಿದನು.


ಯಕೋಬನಿಗೆ ಅಂತಿಮಕಾಲ ಹತ್ತಿರ ಆದಾಗ ಅವನು ತನ್ನ ಮಗ ಜೋಸೆಫನನ್ನು ಕರೆಸಿ, “ನನ್ನ ಮೇಲೆ ನಿನಗೆ ಪ್ರೀತಿಯಿದ್ದರೆ ನೀನು ನನ್ನ ಮಾತನ್ನು ಪ್ರೀತಿಯಿಂದಲೂ ಪ್ರಾಮಾಣಿಕತೆಯಿಂದಲೂ ನಡೆಸಿಕೊಡಬೇಕು. ಅದೇನೆಂದರೆ; ನನ್ನನ್ನು ಈಜಿಪ್ಟ್ ದೇಶದಲ್ಲಿ ಸಮಾಧಿ ಮಾಡಬಾರದು.


ಒಮ್ಮೆ ಅವನು, ತನ್ನ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ಹಿರಿಯ ಸೇವಕನಿಗೆ,


ಅಂದಿನಿಂದ ಸೊಲೊಮೋನನು ತನ್ನ ತಂದೆ ದಾವೀದನ ಸ್ಥಾನದಲ್ಲಿ ಅರಸನಾಗಿ, ಸರ್ವೇಶ್ವರನ ಸಿಂಹಾಸನದಲ್ಲಿ ಕುಳಿತುಕೊಂಡು, ವೃದ್ಧಿಯಾಗುತ್ತಾ ಬಂದನು. ಅರಸ ಸೊಲೊಮೋನನಿಗೆ ಇಸ್ರಯೇಲರೆಲ್ಲರೂ ವಿಧೇಯರಾಗಿ ನಡೆದರು.


ಸರ್ವೇಶ್ವರ ಇಸ್ರಯೇಲರೆಲ್ಲರಿಗೆ ಗೊತ್ತಾಗುವಂತೆ ಸೊಲೊಮೋನನನ್ನು ಅಭಿವೃದ್ಧಿಪಡಿಸಿದರು; ಅವನಿಗಿಂತ ಮೊದಲು ಇಸ್ರಯೇಲರನ್ನಾಳಿದ ಎಲ್ಲಾ ಅರಸರ ವೈಭವಕ್ಕಿಂತಲೂ ಹೆಚ್ಚಿನ ವೈಭವವನ್ನು ಅವನಿಗೆ ಅನುಗ್ರಹಿಸಿದರು.


ಆದರ ಸುತ್ತಲು ರಣಘೋಷಮಾಡಿರಿ. ಇಗೋ, ಅದು ಶರಣಾಗತವಾಯಿತು! ಅದರ ಕೋಟೆಕೊತ್ತಲಗಳು ಬಿದ್ದವು. ಅದರ ಪೌಳಿಗೋಡೆಯನ್ನು ಕೆಡವಲಾಯಿತು. ಸರ್ವೇಶ್ವರನಾದ ನಾನು ಅದಕ್ಕೆ ಮುಯ್ಯಿತೀರಿಸಿದ್ದೇನೆ. ನೀವೂ ಮುಯ್ಯಿತೀರಿಸಿರಿ. ಅದು ಮಾಡಿದಂತೆಯೇ ಅದಕ್ಕೆ ಮಾಡಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು