Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




1 ಪೂರ್ವಕಾಲ ವೃತ್ತಾಂತ 27:33 - ಕನ್ನಡ ಸತ್ಯವೇದವು C.L. Bible (BSI)

33 ಅಹೀತೋಫೆಲನು ಅರಸನ ಮಂತ್ರಿ; ಅಕೀರ್ಯನಾದ ಹೂಷೈಯು ಅವನ ಮಿತ್ರ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಅಹೀತೋಫೆಲನು ಅರಸನ ಮಂತ್ರಿಯೂ, ಅರ್ಕೀಯನಾದ ಹೂಷೈಯು ಅವನ ಮಿತ್ರನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಅಹೀತೋಫೆಲನು ಅರಸನ ಮಂತ್ರಿಯು; ಅರ್ಕೀಯನಾದ ಹೂಷೈಯು ಅವನ ವಿುತ್ರನು;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಅಹೀತೋಫೆಲನು ರಾಜನ ಮಂತ್ರಾಲೋಚಕನಾಗಿದ್ದನು. ಹೂಷೈ ರಾಜನ ಮಿತ್ರನಾಗಿದ್ದನು. ಇವನು ಅರ್ಕೀಯ ಜನರಿಗೆ ಸೇರಿದವನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಅರಸನ ಆಲೋಚನೆಗಾರನು ಅಹೀತೋಫೆಲ್; ಅರಸನ ಆಪ್ತ ಸ್ನೇಹಿತನು ಅರ್ಕಿಯನಾದ ಹೂಷೈ.

ಅಧ್ಯಾಯವನ್ನು ನೋಡಿ ನಕಲು ಮಾಡಿ




1 ಪೂರ್ವಕಾಲ ವೃತ್ತಾಂತ 27:33
10 ತಿಳಿವುಗಳ ಹೋಲಿಕೆ  

ಅಬ್ಷಾಲೋಮನು ಜೆರುಸಲೇಮನ್ನು ಪ್ರವೇಶಿಸುವಷ್ಟರಲ್ಲೇ ದಾವೀದನ ಸ್ನೇಹಿತನಾದ ಹೂಷೈಯು ಪಟ್ಟಣಕ್ಕೆ ಬಂದನು.


ಇದಲ್ಲದೆ ಅವನು ಶಾಂತಿಸಮಾಧಾನದ ಬಲಿದಾನ ಮಾಡುತ್ತಿರುವಾಗ ದಾವೀದನ ಮಂತ್ರಿಯಾಗಿದ್ದ ಗೀಲೋವಿನ ಅಹೀತೋಫೆಲನೆಂಬವನನ್ನು ಅವನ ಊರಾದ ಗೀಲೋವಿನಿಂದ ಬರಮಾಡಿಸಿದ್ದನು. ಜನರು ಅಬ್ಷಾಲೋಮನನ್ನು ಕೂಡಿಕೊಳ್ಳುತ್ತಾ ಬಂದುದರಿಂದ ಒಳಸಂಚು ಪ್ರಬಲವಾಗುತ್ತಾ ಹೋಯಿತು.


ಗುಡ್ಡದ ತುದಿಯಲ್ಲಿ ದೇವಾರಾಧನೆ ನಡೆಯುವ ಸ್ಥಳಕ್ಕೆ ಬಂದಾಗ, ಅರ್ಕೀಯನಾದ ಹೂಷೈ ಎಂಬವನು ಅಂಗಿಯನ್ನು ಹರಿದುಕೊಂಡು, ತಲೆಯ ಮೇಲೆ ಮಣ್ಣು ಹಾಕಿಕೊಂಡು ಅರಸನ ಬಳಿಗೆ ಬಂದನು.


ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: “ನನ್ನ ಕುರಿಗಾಹಿಗೆ ವಿರುದ್ಧವಾಗಿ, ನನ್ನಾಸಂಗಡಿಗನಿಗೆದುರಾಗಿ, ಓ ಖಡ್ಗವೇ, ಎಚ್ಚರಗೊಳ್ಳು; ಕೊಲ್ಲು ಕುರಿಗಾಹಿಯನು. ಆಗ ಚದರುವುವು ಕುರಿಗಳು, ಕೈಮಾಡಲಿರುವೆ ಮರಿಗಳ ಮೇಲೂ.


ಆದರೆ ಇದನ್ನೆಲ್ಲಾ ನನಗೆ ಮಾಡಿದವನು ನೀನು I ನನಗೆ ಸರಿಯಾದವನು, ಗೆಳೆಯನು, ನನ್ನಾಪ್ತಮಿತ್ರನು II


ಅಹೀತೋಫೆಲನು ತನ್ನ ಆಲೋಚನೆ ನಡೆಯಲಿಲ್ಲವೆಂದು ತಿಳಿದು, ಕತ್ತೆಗೆ ತಡಿಹಾಕಿಸಿ ಕುಳಿತುಕೊಂಡು ತನ್ನ ಊರಿಗೆ ಹೋಗಿದ್ದನು. ಮನೆಯ ವ್ಯವಸ್ಥೆಮಾಡಿ ಅನಂತರ ಉರ್ಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿ ಮಾಡಿದರು.


ಆ ದಿನಗಳಲ್ಲಿ ಅಹೀತೋಫೆಲನ ಆಲೋಚನೆಗಳಿಗೆ ದೈವೋತ್ತರಗಳಿಗಿರುವಷ್ಟೇ ಬೆಲೆಯಿತ್ತು. ದಾವೀದನೂ ಅಬ್ಷಾಲೋಮನೂ ಅವನ ಸಲಹೆಗಳನ್ನು ಮಾನ್ಯಮಾಡುತ್ತಿದ್ದರು.


ವಿವೇಕಿಯೂ ಶಾಸ್ತ್ರಜ್ಞನೂ ಆದ ಯೋನಾತಾನನೆಂಬ ದಾವೀದನ ಚಿಕ್ಕಪ್ಪನು ಮಂತ್ರಿಯಾಗಿದ್ದನು; ಹಕ್ಮೋನಿಯ ಮಗ ಯೆಹೀಯೇಲನು ರಾಜಪುತ್ರ ಪಾಲಕನಾಗಿದ್ದನು.


ನಾತಾನನ ಮಗ ಅಜರ್ಯನು - ಪ್ರದೇಶಾಧಿಪತಿಗಳ ಮುಖ್ಯಸ್ಥ; ನಾತಾನನ ಮಗ ಜಾಬೂದನು ಯಾಜಕ ಹಾಗು ಅರಸನ ಮಿತ್ರ;


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು